| India, 2021: ಭಾರತದ ಪ್ರಮುಖ ಡಿಜಿಟಲ್ ಪೇಮೆಂಟ್ ಪ್ಲಾಟ್ಫಾರ್ಮ್ PhonePe, ಪೇಮೆಂಟ್ ಅಪ್ಲಿಕೇಶನ್ನಲ್ಲಿ ಎಲ್ಲಾ UPI ಹಣ ವರ್ಗಾವಣೆಗಳು, ಆಫ್ಲೈನ್ ಮತ್ತು ಆನ್ಲೈನ್ ಪಾವತಿಗಳು (UPI, Wallet, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳಾದ್ಯಂತ) ಉಚಿತವಾಗಿದೆ ಮತ್ತು ಅವುಗಳು ಎಲ್ಲಾ ಬಳಕೆದಾರರಿಗೆ ಉಚಿತವಾಗಿರುತ್ತವೆ ಎಂದು ಸ್ಪಷ್ಟಪಡಿಸಿದೆ.
PhonePe ಈ ವಹಿವಾಟುಗಳಿಗೆ ಶುಲ್ಕವನ್ನು ಈಗ ಮತ್ತು ಭವಿಷ್ಯದಲ್ಲಿಯೂ ವಿಧಿಸುವುದಿಲ್ಲ ಎಂದು ತಿಳಿಸಿದೆ. ಮೊಬೈಲ್ ರೀಚಾರ್ಜ್ಗಾಗಿ, PhonePe ಪ್ರಸ್ತುತ ಒಂದು ಪ್ರಯೋಗವನ್ನು ನಡೆಸುತ್ತಿದೆ, ಇದರಲ್ಲಿ ಬಳಕೆದಾರರಿಗೆ ರೂ.51 ರಿಂದ ರೂ.100 ರ ರೀಚಾರ್ಜ್ಗೆ ರೂ.1 ಮತ್ತು ರೂ.100 ಕ್ಕಿಂತ ಹೆಚ್ಚಿನ ರೀಚಾರ್ಜ್ಗೆ ರೂ.2 ವಿಧಿಸಲಾಗುತ್ತಿದೆ. ಈ ಶುಲ್ಕವು ಎಲ್ಲಾ ರೀತಿಯ ಪಾವತಿ ವಿಧಾನಗಳ ಬಳಕೆದಾರರಿಗೆ ಅನ್ವಯಿಸುತ್ತದೆ (UPI, ವ್ಯಾಲೆಟ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳಾದ್ಯಂತ). ₹ 50ಕ್ಕಿಂತ ಕಡಿಮೆ ರೀಚಾರ್ಜ್ಗಳು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಬಿಲ್ ಪಾವತಿಗಳಿಗಾಗಿ
PhonePe ಕ್ರೆಡಿಟ್ ಕಾರ್ಡ್ಗಳ ಮೂಲಕ ಪಾವತಿಗಳ ಮೇಲೆ ಶುಲ್ಕವನ್ನು ವಿಧಿಸುತ್ತದೆ ಮತ್ತು ಇದು ಈಗ ಉದ್ಯಮದ ಮಾನದಂಡವಾಗಿದೆ ಹಾಗೂ ಮತ್ತು ಅನೇಕ ಪಾವತಿ ಅಪ್ಲಿಕೇಶನ್ ಗಳು ಮತ್ತು ಬಿಲ್ಲರ್ ಪ್ಲಾಟ್ ಫಾರ್ಮ್ ಗಳಿಗೆ ಸಾಮಾನ್ಯವಾಗಿದೆ.
PhonePe ಬಗ್ಗೆ:PhonePe 325 ಮಿಲಿಯನ್ಗೂ ಅಧಿಕ ನೋಂದಾಯಿತ ಬಳಕೆದಾರರನ್ನು ಹೊಂದಿದ ಭಾರತದ ಅತಿ ದೊಡ್ಡ ಪೇಮೆಂಟ್ ವೇದಿಕೆಯಾಗಿದೆ. PhonePe ಉಪಯೋಗಿಸಿ ಬಳಕೆದಾರರು ಹಣವನ್ನು ಕಳಿಸಬಹುದು ಮತ್ತು ಪಡೆಯಬಹುದು, ಮೊಬೈಲ್ ರೀಚಾರ್ಜ್, DTH, ಡೇಟಾ ಕಾರ್ಡ್ಗಳು, ಅಂಗಡಿಗಳಲ್ಲಿ ಪಾವತಿಸುವುದು, ಯುಟಿಲಿಟಿ ಪಾವತಿಗಳು, ಚಿನ್ನವನ್ನು ಖರೀದಿಸಬಹುದು ಮತ್ತು ಹೂಡಿಕೆ ಮಾಡಬಹುದು. PhonePe 2017 ರಲ್ಲಿ 24 ಕ್ಯಾರೆಟ್ ಚಿನ್ನವನ್ನು ಸುರಕ್ಷಿತವಾಗಿ ತನ್ನ ಪ್ಲಾಟ್ಫಾರ್ಮ್ನಲ್ಲಿ ಖರೀದಿಸಲು ಸುರಕ್ಷಿತ ಮತ್ತು ಅನುಕೂಲಕರ ಆಯ್ಕೆಯನ್ನು ಒದಗಿಸುವ ಮೂಲಕ ಆರಂಭವಾಯಿತು. PhonePe ಹಲವಾರು ಮ್ಯೂಚುವಲ್ ಫಂಡ್ಗಳು ಮತ್ತು ವಿಮಾ ಉತ್ಪನ್ನಗಳನ್ನು, ತೆರಿಗೆ ಉಳಿತಾಯ ಫಂಡ್ಗಳು, ಲಿಕ್ವಿಡ್ ಫಂಡ್ಗಳು, ಅಂತರರಾಷ್ಟ್ರೀಯ ಪ್ರಯಾಣ ವಿಮೆ ಮತ್ತು ಕೋವಿಡ್ -19 ಗೆ ಸಂಬಂಧಿಸಿದ ವಿಮೆಯನ್ನು ಪ್ರಾರಂಭಿಸಿದೆ. ಅಲ್ಲದೇ PhonePe ಯನ್ನು ಭಾರತದಾದ್ಯಂತ 22 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ಸ್ವೀಕರಿಸಲಾಗಿದೆ.
 | |
Post Comment