ಪ್ರಯಾಣಿಕರಲ್ಲಿ ವಿಶ್ವಾಸ ಮೂಡಿಸಲು ಭಾರತೀಯ ರೈಲ್ವೆ ಮತ್ತು ಟ್ರೂಕಾಲರ್ ಸಹಯೋಗ
ಪ್ರಯಾಣಿಕರಲ್ಲಿ ವಿಶ್ವಾಸ ಮೂಡಿಸಲು ಭಾರತೀಯ ರೈಲ್ವೆ ಮತ್ತು ಟ್ರೂಕಾಲರ್ ಸಹಯೋಗ
· ದಿ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್(ಐಆರ್ಸಿಟಿಸಿ) ಮತ್ತು ಟ್ರೂಕಾಲರ್ ಒಟ್ಟಿಗೆ ಸಂಚಹನಕ್ಕೆ ಹೆಚ್ಚಿನ ವಿಶ್ವಾಸ ಪೂರೈಸಲಿವೆ
· ಟ್ರೂಕಾಲರ್ ವೆರಿಫೈಡ್ ಗುರುತು ವಂಚನೆಯನ್ನು ಕಡಿಮೆ ಮಾಡಿ ಜನರಿಗೆ ಅವರ ಪ್ರಮುಖ ಸಂವಹನಗಳಾದ ನಿಮ್ಮ ಬುಕಿಂಗ್ ವಿವರಗಳು ಮತ್ತು ಪಿಎನ್ಆರ್ ಸ್ಟೇಟಸ್ ಅನ್ನು ಐಆರ್ಸಿಟಿಸಿ ಪೂರೈಸುತ್ತದೆಯೇ ಹೊರತು ಬೇರೆಯವರ ಮೂಲಕ ಅಲ್ಲ
ಬೆಂಗಳೂರು, ಅಕ್ಟೋಬರ್ 28, 2021: ಏಕೀಕೃತ ನ್ಯಾಷನಲ್ ರೈಲ್ವೇಸ್ ಹೆಲ್ಪ್ಲೈನ್ 139 ಸಂಖ್ಯೆಯನ್ನು ಲಕ್ಷಾಂತರ ಮಂದಿ ಭಾರತೀಯರು ಪ್ರತಿನಿತ್ಯ ಬಳಸುತ್ತಿದ್ದು ಈಗ ಟ್ರೂಕಾಲರ್ ಬ್ಯುಸಿನೆಸ್ ಐಡೆಂಟಿಟಿ ಪರಿಹಾರಗಳ ಭಾಗವಾಗಿದೆ. ಇದರೊಂದಿಗೆ ಪರಿಶೀಲಿಸಲಾದ ಎಸ್ಎಂಎಸ್ ಮೆಸೇಜ್ ಹೆಡರ್ಗಳು ಗ್ರಾಹಕರಿಗೆ ಅವರ ಬುಕಿಂಗ್ಗಳು ಮತ್ತು ಇತರೆ ಪ್ರಯಾಣದ ವಿವರಗಳು ಐಆರ್ಸಿಟಿಸಿಯಿಂದ ಮಾತ್ರ ಪಡೆಯುತ್ತಿರುವುದನ್ನು ತಿಳಿಸುತ್ತವೆ. ಆದ್ದರಿಂದ ಪರಿಶೀಲಿಸಿದ ಗುರುತು ಭಾರತದ ರೈಲ್ವೆಯ ಬ್ರಾಂಡ್ ಹೆಸರನ್ನು ಲಾಕ್ ಮಾಡುತ್ತದೆ ಮತ್ತು ಟ್ರೂಕಾಲರ್ ಪ್ರೊಫೈಲ್ ಫೋಟೋದಲ್ಲಿ ಬರುವ ಮೂಲಕ ಸುರಕ್ಷಿತ ಗ್ರಾಹಕ ಅನುಭವ ನೀಡುತ್ತದೆ ಮತ್ತು ವಂಚನೆಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಟ್ರೂಕಾಲರ್ನೊಂದಿಗೆ ಸಹಯೋಗದ ಕುರಿತು ಐಆರ್ಸಿಟಿಸಿ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ರಜನಿ ಹಸೀಜಾ, “ಈ ಹೊಸ ಉಪಕ್ರಮದಲ್ಲಿ ಟ್ರೂಕಾಲರ್ನೊಂದಿಗೆ ಕೆಲಸ ಮಾಡಲು ನಾವು ಬಹಳ ಸಂತೋಷ ಹೊಂದಿದ್ದೇವೆ. ಈ ಸಕ್ರಿಯತೆಯ ಮೂಲಕ ನಾವು ಐಆರ್ಸಿಟಿಸಿಯ ಸಂವಹನ ಮಾರ್ಗಗಳನ್ನು ಹೆಚ್ಚು ಸದೃಢ, ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿಸುವುದಲ್ಲದೆ ಟ್ರೂಕಾಲರ್ನೊಂದಿಗೆ ತಾಂತ್ರಿಕ ಸಹಯೋಗವು ನಮ್ಮ ಗ್ರಾಹಕರಲ್ಲಿ ವಿಶ್ವಾಸ ನಿರ್ಮಿಸಲಿದೆ” ಎಂದರು.
ವಿಸ್ತಾರ ಶ್ರೇಣಿಯ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಐಆರ್ಸಿಟಿಸಿ ಇಂಟಿಗ್ರೇಟೆಡ್ ರೈಲ್ವೆ ಹೆಲ್ಪ್ಲೈನ್ 139 ಕೂಡಾ ನಿರ್ವಹಿಸುತ್ತಿದ್ದು ಅದನ್ನು ವಿವಿಧ ಬಗೆಯ ಪ್ರಯಾಣಿಕರ ರೈಲುಗಳಿಗೆ ಸಂಬಂಧಿಸಿದ ವಿಚಾರಣೆಗಳಿಗೆ ಲಕ್ಷಾಂತರ ಮಂದಿ ಬಳಸುತ್ತಾರೆ. ಐಆರ್ಸಿಟಿಸಿ 139 ವಿಚಾರಣೆ ಮತ್ತು ಹೆಲ್ಪ್ಲೈನ್ ಸೇವೆಗಳನ್ನು 2007ರಲ್ಲಿ ಭಾರತ್ ಬಿಪಿಒ ಸರ್ವೀಸ್ ಲಿಮಿಟೆಡ್ ತನ್ನ ತಾಂತ್ರಿಕ ಪಾಲುದಾರನಾಗಿ ಪ್ರಾರಂಭಿಸಿತು. ಈ ಹೆಲ್ಪ್ಲೈನ್ ರೈಲು ಕಾಯ್ದಿರಿಸುವಿಕೆ, ಆಗಮನ ಮತ್ತು ನಿರ್ಗಮನಕ್ಕೆ ಸಂಬಂಧಿಸಿದಂತೆ ಅಲ್ಲದೆ, ಭದ್ರತೆ, ವೈದ್ಯಕೀಯ ಮತ್ತಿತರೆ ವಿಶೇಷ ಅಗತ್ಯಗಳಿಗೆ ಕರೆ ಮಾಡುತ್ತಾರೆ.



Post Comment