ಬಹಿರಂಗವಾಗಿದೆ: ಬಂಟಿ ಬಬ್ಲಿ ಅವರು ನಡೆಸುವ 8 ಅದ್ಭುತ ಮೋಸಗಳು ನಿಮ್ಮನ್ನು ಆಶ್ಚರ್ಯದಲ್ಲಿ ಮುಳುಗಿಸುತ್ತವೆ
ಬಂಟಿ ಔರ್ ಬಬ್ಲಿ 2 ಪ್ರಕಟಣೆ ನೀಡಿದ ದಿನದಿಂದಲೂ ಈ ಚಲನಚಿತ್ರದಲ್ಲಿರುವ ಆಶ್ಚರ್ಯಕರ ಮೋಸಗಳ ಕುರಿತು ತಿಳಿಯಲು ಬಹಳ ಉತ್ಸಾಹ ಹೆಚ್ಚಾಗಿತ್ತು! ಈ ಪ್ರಾಜೆಕ್ಟ್‍ಗೆ ಹತ್ತಿರವಾದ ಮೂಲಗಳಿಂದ ನಮಗೆ ಈ ಕೌಟುಂಬಿಕ ಮನರಂಜನೆಯ ಚಿತ್ರದ ಹಬ್ಬದ ಕುರಿತು ಮಾಹಿತಿ ಇದ್ದು ಸೈಫ್ ಅಲಿ ಖಾನ್, ರಾಣಿ ಮುಖರ್ಜೀ, ಸಿದ್ಧಾಂತ್ ಚತುರ್ವೇದಿ ಮತ್ತು ಮೋಹಕ ನವನಟಿ ಶಾರ್ವರಿ ಅವರಿಂದ 8 ವಿಲಕ್ಷಣ ಮತ್ತು ಸೂಪರ್ ಇಂಟೆಲಿಜೆಂಟ್ ಮೋಸಗಳು ಈಗ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸುತ್ತವೆ.
ಈ ಕುರಿತು ಸಂಪರ್ಕಿಸಿದಾಗ ಬಂಟಿ ಔರ್ ಬಬ್ಲಿ 2ರ ನಿರ್ದೇಶಕ ವೈಆರ್‍ಎಫ್‍ನ ಅತ್ಯಂತ ದೊಡ್ಡ ಬ್ಲಾಕ್‍ಬಸ್ಟರ್‍ಗಳಾದ ಸುಲ್ತಾನ್ ಮತ್ತು ಟೈಗರ್ ಜಿóಂದಾ ಹೈ ಸಹಾಯಕ ನಿರ್ದೇಶಕರಾಗಿದ್ದ ವರುಣ್ ವಿ. ಶರ್ಮಾ ಅವರನ್ನು ಸಂಪರ್ಕಿಸಿದಾಗ ಅವರು, “ಈ ಇಬ್ಬರು ಬಂಟಿ ಬಬ್ಲಿಗಳ ಜೋಡಿಯು ಹೇಗೆ ಜಾಣ್ಮೆಯ ಮೋಸಗಳನ್ನು ನಡೆಸುತ್ತಾರೆ ಎನ್ನುವುದನ್ನು ಕಾಣಲು ನೀವು ಚಲನಚಿತ್ರ ವೀಕ್ಷಿಸಬೇಕು. ಇದು ಪರಸ್ಪರ ತಾವೇ ಉತ್ತಮ ಮೋಸಗಾರ ಜೋಡಿ ಎಂದು ಪ್ರದರ್ಶಿಶಲು ಬಯಸುವ ಮೋಸದ ಕಲಾವಿದರ ಚಿತ್ರವಾಗಿದೆ” ಎಂದರು.
ಅವರು, “ನೀವು ಅತ್ಯಂತ ದೊಡ್ಡ ಮೋಸಗಳನ್ನು ಕಾಣಬಹುದು ಏಕೆಂದರೆ ಅದಕ್ಕೆ ನ್ಯಾಯ ಸಲ್ಲಿಸಲು ಬಂಟಿ ಔರ್ ಬಬ್ಲಿಯನ್ನು ಮರು ರೂಪಿಸಿದ್ದೇವೆ. ನಮ್ಮಲ್ಲಿ ನಿಜಕ್ಕೂ ಕೆಲವು ವಿಶೇಷ ಮೋಸಗಳಿದ್ದು ಅವು ಪ್ರೇಕ್ಷಕರನ್ನು ರಂಜಿಸುತ್ತವೆ ಮತ್ತು ಅವರ ಪ್ರತಿಕ್ರಿಯೆ ವೀಕ್ಷಿಸಲು ಕಾತರರಾಗಿದ್ದೇವೆ. ನಾವು ಈ ಚಲನಚಿತ್ರವನ್ನು ತಡೆರಹಿತ ಮನರಂಜನೆಯಾಗಿ ರೂಪಿಸಿದ್ದೇವೆ ಮತ್ತು ನಾವು ಈ ಭರವಸೆ ಈಡೇರಿಸುವ ಗುರಿ ಹೊಂದಿದ್ದೇವೆ” ಎಂದರು.



Post Comment