ಪಿರಿಯಾಪಟ್ಟಣ. ತಾಲೂಕಿನಲ್ಲಿ ಸಂಘಟನಾ ಚತುರ ಸುಳಗೋಡು ರಮೇಶ್ ರವರನ್ನು ತಾಲೂಕು ಭೋವಿ ಹಿತರಕ್ಷಣಾ ಸಮಿತಿಗೆ ನೂತನವಾಗಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ನಾಗರಾಜು ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನೂತನ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನಂತರ ಮಾತನಾಡುತ್ತಿದ್ದರು. ಎಸ್ಸಿ ಎಸ್ಟಿ ಮತ್ತು ಹಿಂದುಳಿದ ವರ್ಗ ವರ್ಗದವರು ನಾವು ಒಗ್ಗಟ್ಟಾಗಿ ಸೇರಿದರೆ ರಾಜ್ಯದಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಜನಸಂಖ್ಯೆ ನಮ್ಮದಾಗುತ್ತದೆ ಜಿಪಂ ತಾಪಂ ವಿಧಾನಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಆದ್ದರಿಂದಲೇ ನಾಲ್ಕೈದು ಸ್ವಾಮೀಜಿಗಳು ಸೇರಿಕೊಂಡು ಚರ್ಚೆ ನಡೆಸಿ ಸಭೆ ನಡೆಸಲಿದ್ದೇವೆ ಆದ್ದರಿಂದ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಇರಬೇಕಾದ ಅನಿವಾರ್ಯತೆ ಇದೆ ಎಂದು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಿಲ್ಲಾ ಬೋವಿ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜು ತಿಳಿಸಿದರು. ಸ್ವಾಮೀಜಿಯವರ ಆದೇಶದಂತೆ ಪ್ರತಿ ತಾಲೂಕಿನಲ್ಲೂ ಜಿಲ್ಲೆಯಲ್ಲೂ ಒಟ್ಟಿನಲ್ಲಿ ರಾಜ್ಯದಲ್ಲಿ ನಮ್ಮಗಳ ಸಂಘಟನೆಯನ್ನು ಮಾಡಲಾಗುತ್ತಿದೆ ಎಲ್ಲರನ್ನು ಒಗ್ಗಟ್ಟಾಗಿ ಅವರಿಗೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಾಡಲಾಗುವುದು ಮೈಸೂರಿನಲ್ಲಿ ನಮ್ಮ ಜನಾಂಗದ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಇಲ್ಲದೆ ಶೈಕ್ಷಣಿಕವಾಗಿ ಹಿಂದುಳಿದಿದ್ದರು ಅದನ್ನು ಕೂಡ ನಾವು ಹಾಸ್ಟೆಲ್ ನಿರ್ಮಿಸುವ ಹಂತದಲ್ಲಿ ನಾವು ಇದ್ದೇವೆ ಇದರಿಂದ ಜಿಲ್ಲೆಯ ಎಲ್ಲಾ ಮಕ್ಕಳಿಗೂ ವಸತಿ ಸೌಕರ್ಯ ಸಿಗುತ್ತದೆ ಇದಕ್ಕೆ ಪ್ರತಿಯೊಬ್ಬರ ಸಲಹೆ ಸಹಕಾರ ಅತ್ಯಗತ್ಯ ಇದು ಮುಂದಿನ ಪೀಳಿಗೆಗೆ ನಾವು ಕೊಡುವ ಕೊಡುಗೆ ಇದನ್ನು ಪ್ರತಿಯೊಬ್ಬರೂ ಉಪಯೋಗ ಪಡಿಸಿಕೊಳ್ಳಬೇಕು ಎಂದರು ಇದೇ ಸಂದರ್ಭದಲ್ಲಿ ತಾಲೂಕು ಹಿತರಕ್ಷಣಾ ಸಮಿತಿ ನೂತನ ಅಧ್ಯಕ್ಷ ಸುಳುಗೋಡು ರಮೇಶ್ ಮಾತನಾಡುತ್ತಾ ಈ ತಾಲೂಕಿನಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಸ್ವಾಮೀಜಿಯವರನ್ನು ಕರೆತಂದು ಅದ್ದೂರಿಯಾಗಿ ಜಯಂತಿ ಆಚರಿಸಿ ಯಾರಿಗೆ ನೋವಾಗಿದ್ದರೆ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೆವು ಸಂಘಟನೆಯಲ್ಲಿ ಮುಂಚೂಣಿಯಲ್ಲಿತ್ತು ಆದರೆ ಇತ್ತೀಚೆಗೆ ಕೆಲವರು ಅವರ ಆಸಕ್ತಿಗೆ ಅನುಗುಣವಾಗಿ ಪ್ರಸಂಗವನ್ನು ದುರ್ಬಳಕೆ ಮಾಡಿಕೊಂಡಿದ್ದರು ಸಂಘಟನೆಗೆ ಹೆಚ್ಚು ಒತ್ತು ನೀಡಲಿಲ್ಲ ನಮ್ಮ ಜನಾಂಗದ ಜನಾಂಗದವರ ಕಷ್ಟ-ಸಖ ಕೇಳಲಿಲ್ಲ ಇದರಿಂದ ಎಲ್ಲರೂ ಬೇಸರಗೊಂಡಿದ್ದರು ಆದರೆ ಜಿಲ್ಲಾಧ್ಯಕ್ಷರು ಮತ್ತು ಸ್ವಾಮೀಜಿ ಅವರ ಆದೇಶದಂತೆ ಮತ್ತೆ ನಾನು ಅಧಿಕಾರಕ್ಕೆ ಬಂದಿದ್ದೇನೆ ತಮ್ಮ ಸೇವೆಗೆ ಸದಾ ಸಿದ್ಧನಿದ್ದೇನೆ ಎಂದರು ಇದೇ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಚಿನ್ನಸ್ವಾಮಿ ಮಾತನಾಡುತ್ತಾ ನೂತನ ಅಧ್ಯಕ್ಷ ರಮೇಶ್ ರವರು ನಮ್ಮ ಜನಾಂಗದ ಏಳಿಗೆಗೋಸ್ಕರ ಅಲ್ಲದೆ ದೀನ ದಲಿತರ ಪರ ಹೋರಾಟ ಮಾಡುತ್ತಾರೆ ಇಂತಹ ಮಹಾನುಭಾವರು ಧೈರ್ಯವಂತರು ನಮಗೆ ತುಂಬಾ ಅವಶ್ಯಕತೆ ಇರುವುದರಿಂದ ತಾಲೂಕಿನಲ್ಲಿ ಸಂಘಟನೆ ಮಾಡಬೇಕಾಗಿರುವುದರಿಂದ ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ಮಾಡಿದ್ದೇವೆ ಮತ್ತು ನೂತನವಾಗಿ ತಾಲೂಕು ಆಡಳಿತ ಮಂಡಳಿಯ ರಚನೆ ಮಾಡಲು ನಾವು ಮುಂದಾಗಿದ್ದೇವೆ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮಲ್ಲಣ್ಣ ಸಂಘಟನಾ ಕಾರ್ಯದರ್ಶಿ ಗಿರಿಯಪ್ಪ ತಾಲೂಕು ಕಾರ್ಯದರ್ಶಿ ಮಾಕನಹಳ್ಳಿ ಮಹಾದೇವ ಉಪಾಧ್ಯಕ್ಷ ಶಿವರಾಂ ಖಜಾಂಚಿ ಮಾದೇಶ್ ಸಂಚಾಲಕರಾದ ಮಹದೇವ್ ನಿರ್ದೇಶಕರಾದ ಮಾದ ಬೋವಿ ಶಿಕ್ಷಕ ಸಣ್ಣ ಸ್ವಾಮಿ ರಾಮಚಂದ್ರ ಸುಬ್ರಮಣ್ಯ ರಾಮು ರಾಜು ಸೋಮಶೇಖರ್ ಮಹದೇವ್ ತಾಲೂಕು ಮಹಿಳಾ ಅಧ್ಯಕ್ಷೆ ಮಂಜುಳಾ ಸೋಮಶೇಖರ್ ತಾಲೂಕು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸರವಣ ಕುಮಾರ್ ನೂರು ತ್ತ ಸೈನಿಕ ಪಿಸಿ ಕುಮಾರ್ ತಾಲ್ಲೂಕು ಮಹಿಳಾ ಅಧ್ಯಕ್ಷರು ಮಂಜುಳಾ ಹಾಜರಿದ್ದರುAttachments area


Post Comment