ಒಜಿ ಬಂಟಿ ಬಬ್ಲಿ ಹೊಸ ಬಂಟಿ ಬಬ್ಲಿಗಳ ವಿರುದ್ಧ ಛದ್ಮವೇಷಿಗಳ ಮಹತ್ವದ ಸಂಘರ್ಷ!
ಇದು ಬಂಟಿಔರ್ಬಬ್ಲಿ 2ರಲ್ಲಿ ಸಂಘರ್ಷದ ಸಮಯವಾಗಿದ್ದು ಸೈಫ್ ಅಲಿ ಖಾನ್ ಮತ್ತು ರಾಣಿ ಮುಖರ್ಜೀ ಅವರ ನಟನೆಯ ಒಜಿ-ವಂಚಕ ಜೋಡಿ ಬಂಟಿಔರ್ಬಬ್ಲಿ ಹೊಸ ವಂಚಕ ಜೋಡಿ ಸಿದ್ಧಾಂತ್ ಚತುರ್ವೇದಿ ಮತ್ತು ಬೆಳ್ಳಿತೆರೆಗೆ ಪ್ರವೇಶ ಪಡೆಯುತ್ತಿರುವ ಮೋಹಕ ನಟಿ ಶರ್ವಾರಿ ಅವರ ನಡುವೆ ಔನ್ನತ್ಯಕ್ಕೆ ಸಂಘರ್ಷ ನಡೆಯುತ್ತದೆ. ಈ ಪಕ್ಕೆ ಹಿಡಿಸುವಷ್ಟು ನಕ್ಕು ನಗಿಸುವ ಕಾಮಿಸಿ ಸಂಪೂರ್ಣ ಮನರಂಜನೆಯಾಗಿದ್ದು ಅದು ವಿವಿಧ ತಲೆಮಾರುಗಳ ವಂಚಕ ಪಾತ್ರಗಳನ್ನು ಪರಸ್ಪರ ಎದುರಾಗಿಸಿ ಸೋಗು ಹಾಕುವುದರಲ್ಲಿ ಅವರಲ್ಲಿ ಯಾರು ಶ್ರೇಷ್ಠರು ಎನ್ನುವುದನ್ನು ತೋರಿಸುತ್ತದೆ!
ಸೈಫ್, “ಬಂಟಿಔರ್ಬಬ್ಲಿ ಅವರನ್ನು ಸೋಗು ಹಾಕುವುದಿಲ್ಲದೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಮತ್ತು ಈ ಚಲನಚಿತ್ರದಲ್ಲಿ ಅದು ಸಾಕಷ್ಟಿದೆ. ಜನರನ್ನು ವಂಚಿಸಲು ಅತ್ಯಂತ ಆಶ್ಚರ್ಯಕರ ಸೋಗು ಹಾಕುವ ಎರಡು ಬಗೆಯ ವಂಚಕ ಜೋಡಿ ಇಲ್ಲಿದ್ದಾರೆ. ಈ ಸನ್ನಿವೇಶಗಳು ಅತ್ಯಂತ ರಂಜನೀಯವಾಗಿವೆ ಮತ್ತು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ಮುಳುಗಿಸುತ್ತವೆ” ಎಂದರು.
ಸೈಫ್, “ಐತಿಹಾಸಿಕವಾಗಿ ಛದ್ಮವೇಷಿ ವಂಚಕರ ಚಿತ್ರಗಳು ವಿನೋದಮಯವಾದ ರಂಜನೆ ನೀಡುತ್ತಿವೆ. ಈ ದಿನಗಳಲ್ಲಿ ನಮಗೆ ಪ್ರೊಸ್ಥೆಟಿಕ್ಸ್ ಮತ್ತು ಮೇಕಪ್ ಸಂಪೂರ್ಣ ಹೊಸ ಎತ್ತರಕ್ಕೆ ತಲುಪಿವೆ ಆದ್ದರಿಂದ ಜನರು ಅದ್ಭುತವಾದ ವೇಷಗಳು ಮತ್ತು ಛದ್ಮವೇಷಗಳನ್ನು ಕಾಣಬಹುದು ಮತ್ತು ಈ ನಟನೆ ನಿಜಕ್ಕೂ ಸಾಕಷ್ಟು ಸಂತೋಷ ಹೊಂದಿತ್ತು” ಎನ್ನುತ್ತಾರೆ.
ರಾಣಿ, “ಇಬ್ಬರೂ ವಂಚಕ ಜೋಡಿಗಳು ಅತ್ಯಣತ ಜಾಣರಾಗಿದ್ದಾರೆ. ಅವರು ಈ ಕೌಶಲ್ಯದಿಂದ ಜನರನ್ನು ವಂಚಿಸುವುದರಲ್ಲಿ ಅತ್ಯುತ್ತಮವಾಗಿದ್ದಾರೆ. ಈ ಚಲನಚಿತ್ರದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಾರೆ ಮತ್ತು ಅದು ನೋಡಲೇಬೇಕಾದ ಯುದ್ಧವಾಗಿದೆ!” ಎನ್ನುತ್ತಾರೆ.
ಸಿದ್ಧಾಂತ್, “ನಾನು ಒಂದೇ ಚಲನಚಿತ್ರದಲ್ಲಿ ಹಲವು ಅವತಾರಗಳನ್ನು ಎತ್ತಿದ್ದೇನೆ! ನೀವು ಬಂಟಿಔರ್ಬಬ್ಲಿಯಂತಹ ಸಿನಿಮಾದಲ್ಲಿ ನಿಮಗೆ ಪ್ರಮುಖ ನಟರು ಛದ್ಮವೇಷ ತಾಳಿ ಅಪಾರ ವಂಚನೆ ಮಾಡುವುದನ್ನು ಕಾಣುತ್ತೀರಿ ಮತ್ತು ಈ ಚಿತ್ರ ಆ ನಿರೀಕ್ಷೆ ಮಾಡಿ ರಂಜಿಸುತ್ತದೆ” ಎಂದರು.
ಶರ್ವಾರಿ, “ಬಂಟಿಔರ್ಬಬ್ಲಿ 2ರಲ್ಲಿ ಪ್ರವೇಶ ಪಡೆಯಲು ನಾನು ಅತ್ಯಂತ ಅದೃಷ್ಟಶಾಲಿಯಾಗಿದ್ದೇನೆ. ನೀವು ಹಲವು ಪಾತ್ರಗಳನ್ನು ವಹಿಸುವ ಪ್ರಾಜೆಕ್ಟ್ಗಳನ್ನು ಪದೇ ಪದೇ ಪಡೆಯುವುದಿಲ್ಲ. ನಾನು ಆ ಪ್ರತಿಯೊಂದು ಪಾತ್ರದಲ್ಲೂ ಉತ್ತಮ ಅಭಿನಯ ನೀಡಲು ಪ್ರಯತ್ನಿಸಿದ್ದೇನೆ ಏಕೆಂದರೆ ಪ್ರೇಕ್ಷಕರು ಛದ್ಮವೇಷದ ಪಾತ್ರಗಳು ಮಾಡುವ ವಂಚನೆಯ ಆಟಗಳನ್ನು ಆನಂದಿಸಲು ಬರುತ್ತಾರೆ. ನಾನು ಈ ಹೊಸ ಲುಕ್ಗಳು/ಅವತಾರಗಳಲ್ಲಿ ಸಂಪೂರ್ಣ ತೊಡಗಿಕೊಂಡು ನಟಿಸಿದ್ದೇನೆ ಮತ್ತು ಒಳ್ಳೆಯ ರೀತಿಯಲ್ಲಿ ನಾನು ಹೆಜ್ಜೆ ಇರಿಸಿದ್ದೇನೆ ಎಂದು ಭಾವಿಸಿದ್ದೇನೆ” ಎಂದರು.
ಬಂಟಿಔರ್ಬಬ್ಲಿ 2 ನವೆಂಬರ್ 19, 2021ರಂದು ವಿಶ್ವದಾದ್ಯಂತ ಬಿಡುಗಡೆಯಾಗಲು ಸಿದ್ಧವಾಗಿದೆ. ಬಂಟಿಔರ್ಬಬ್ಲಿ 2 ಚಿತ್ರವನ್ನು ವರುಣ್ ವಿ ಶರ್ಮಾ ಬಿಡುಗಡೆ ಮಾಡಿದ್ದು ಅವರು ವೈಆರ್ಎಫ್ನ ಅತ್ಯಂತ ದೊಡ್ಡ ಬ್ಲಾಕ್ಬಸ್ಟರ್ಗಳಾದ ಸುಲ್ತಾನ್ ಮತ್ತು ಟೈಗರ್ ಜಿಂದಾ ಹೈಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.
Trailer Link: https://www.youtube.com/watch?v=UZVUrZIXnSU



Post Comment