Loading Now

ಪಿರಿಯಾಪಟ್ಟಣ : ಪಿರಿಯಾಪಟ್ಟಣದ ಶಿಕ್ಷಕರ ಸಭಾಂಗಣದ ಎದುರು ವೇತನ ತಾರತಮ್ಯ ಖಂಡಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ 2005, 2007, ಮತ್ತು 2008ನೇ ಸಾಲಿನಲ್ಲಿ ವೇತನ ಪರೀಷ್ಕರಣೆ ಮಾಡುವ ಸಂಬಂಧ ವಿಳಂಭ ದೋರಣೆ ಅನುಸರಿಸುತ್ತಿದ್ದು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರು ಯಾವುದೆ ಪ್ರಯೋಜನವಾಗಿಲ್ಲಿ ಪ್ರತಿಯೊಬ್ಬ ಶಿಕ್ಷಕರು ಪ್ರತಿ ತಿಂಗಳಿಗೆ ಒಂದು ಸಾವಿರಕ್ಕೂ ಹೆಚ್ಚು ಹಣ ನಷ್ಟ ಅನುಭವಿಸುತ್ತಿದ್ಧಾರೆ. ಇದಲ್ಲದೆ ಭವಿಷ್ಯದಲ್ಲಿ ಈ ಶಿಕ್ಷಕರಿಗೆ ಭಡ್ತಿ, ವೇತನ ಶ್ರೇಣಿಹೆಚ್ಚಳ ಮುಂತಾದ ಸಂದರ್ಭದಲ್ಲಿ ಅನ್ಯಾಯವಾಗಲಿದೆ. ರಾಜ್ಯದಲ್ಲಿ ಎಲ್ಲ ಕಡೆಗಳಲ್ಲಿ ಪರಿಷ್ಕøತ ವೇತನ ಶ್ರೇಣಿ ಪುನರ್ ನಿಗಧಿ ಪಡಿಸುವಲ್ಲಿ ಕೆಲಸ ನಿರ್ವಹಿಸುತ್ತಿದ್ದು ಆದೇಶದಂತೆ ವೇತನ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಪಿರಿಯಾಪಟ್ಟಣದಲ್ಲಿ ವೇತನ ಪುನ್ ನಿಗಧಿ ಪಡಿಸುವ ವಿಚಾರವಾಗಿ ಮೂಲವೇತನವನ್ನು ಕ್ರಮ ಬದ್ದವಾಗಿ ನಿಗಧಿಗೊಳಿಸದೆ ತಪ್ಪುಮಾಡಲಾಗಿದೆ ಎಂದು ಶ್ರೀದೇವಿ ಸಹ.ಶಿಕ್ಕಷರು ಇವರ ವೇತನ ಬಡ್ತಿಯನ್ನು ಸರಿ ಪಡಿಸಿರುವ ಬೆಂಗಳೂರು ಉತ್ತರವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶವನ್ನು ನೀಡಿದ್ದಾಗಿಯೂ ಸಹ ಇಲ್ಲಿ ಶಿಕ್ಷಕರಿಗೆ ಮೂಲ ವೇತನವನ್ನು ಕ್ರಮಬದ್ದಗೊಳಿಸಿ ಪುನರ್ ನಿಗಧಿಪಡಿಸುವ ಕೆಲಸ ಮಾಡದೆ ತೊಂದರೆ ನೀಡಲಾಗುತ್ತಿದೆ ಎಂದು ಪ್ರತಿಭಟನಾ ನಿರತ ಶಿಕ್ಷಕರು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರು ಮಾತನಾಡಿ ಶಿಕ್ಷಕರು ಕಚೇರಿಗೆ ಅಲೆಯುವುದನ್ನು ಕಡಿಮೆ ಮಾಡಲು ಕ್ರಮಕೈಗೊಳ್ಳಬೇಕಾದ ಬಿಇಒ ಕಚೇರಿಯ ಸಿಬ್ಬಂದಿಗಳೆ ಸರಿಯಾಗಿ ಕಾರ್ಯನಿರ್ವಹಿಸದೆ ತೊಂದರೆ ಉಂಟಾಗುತ್ತಿದೆ.ಅಲ್ಲದೆ ಶಿಕ್ಷಕರು, ಶಿಕ್ಷಕರಿಯರು ಬಿಇಒ ಕಚೇರಿ ಮತ್ತಿತರ ಕಡೆ ಬಂದರೆ ಸೂಕ್ತ ಮೂಲಸೌಕರ್ಯಗಳಿಲ್ಲದೆ ತೊಂದರೆ ಪಡುವಂತಾಗಿದೆ ಈ ಬಗ್ಗೆ ಶಾಸಕರು ಮತ್ತು ಬಿಇಒ ಗಮನಕ್ಕೆ ತರಬೇಕಾಗಿದೆ ಅನೇಕ ಬಾರಿ ಶಿಕ್ಷಕರ ವೇತನ ತಾರತಮ್ಯ ಸರಿಪಡಿಸುವಂತೆ ಮನವಿ ನೀಡಿದರು ಯಾವುದೆ ಪ್ರಯೋಜನವಾಗಿಲ್ಲ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನೊಂದ ಶಿಕ್ಷಕರ ಪರವಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹದೇವಪ್ಪ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಮೂರ್ತಿ, ಲೋಕೇಶ್, ಯುವರಾಜ್, ಕೃಷ್ಣನಾಯಕ್, ಜಾವಿದ್‍ಪಾಷ, ಅಶೋಕ, ಪ್ರಶಾಂತ್, ಶಿಕ್ಷಕರಾದ ಮಧುರೇಶ್, ನಿರಂಜನ್, ನಿಲ್ಲೂಫರ್, ಕುಮಾರಿ, ಜಯಂತಿ, ಪುಷ್ಪಮೇರಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಫೋಟೋ ವಿವರ : ಪಿರಿಯಾಪಟ್ಟಣದ ಶಿಕ್ಷಕರ ಸಭಾಂಗಣದ ಎದುರು ವೇತನ ತಾರತಮ್ಯ ಖಂಡಿಸಿ ಶಿಕ್ಷಕರು ಪ್ರತಿಭಟನೆ ನಡೆಸಿದರು.

===========================================================

ಪಿರಿಯಾಪಟ್ಟಣ : ಹೋರಾಟದ ಸಂಘಟನೆಗಳಿಗೆ ರಾಜಕೀಯ ಶಕ್ತಿ ಬಂದಾಗಲೆ ಹೆಚ್ಚಿನ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ರೈತ ಸಂಘ ಕೂಡ ಹೆಜ್ಜೆ ಇಟ್ಟಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಪಿರಿಯಾಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಮಾತನಾಡಿದರು. ಉತ್ತಮರು ರಾಜಕೀಯಕ್ಕೆ ಬರುವ ಮೂಲಕ ಕೊಳಕಾಗಿರುವ ರಾಜಕೀಯ ಕ್ಷೇತ್ರವನ್ನು ಶುದ್ದಿಮಾಡುವ ಕೆಲಸವಾಗಬೇಕಿದೆ.ಅನೇಕ ಹೋರಾಟಗಳ, ಚಳುವಳಿಗಳ ಫಲವಾಗಿ ಅನೇಕ ಕಾನೂನುಗಳು ರಚನೆಯಾಗಿವೆ ಆದರೆ ಶಾಸಕಾಂಗದಲ್ಲಿ ಹೋರಾಟಗಾರರ, ಚಳುವಳಿಗಾರರು ಆಯ್ಕೆಯಾಗಿ ಹೋದಾಗ ಮಾತ್ರ ಅಲ್ಲಿ ನಿಜವಾದ ನೊಂದವರ ಧ್ವನಿಯಾಗಲು ಸಹಾಯವಾಗುತ್ತದೆ. ಡಿ.ದೇವರಾಜೇಅರಸು ಕೂಡ ಸಮಾಜವಾದಿ ಚಳುವಳಿಯ ಫಲವಾಗಿಗೆ ಉಳುವವನೆ ಭೂಮಿಯ ಕಾನೂನು ಜಾರಿಮಾಡಿದ್ದರು. ರಾಜಕೀಯ ಶಕ್ತಿಗಾಗಿ ಎಲ್ಲಾ ಸಂಘಟನೆಗಳಿಂದ ಬೆಂಬಲ ನೀಡಿ ದಕ್ಷಿಣ ಪಧವಿಧರ ಕ್ಷೇತ್ರಕ್ಕೆ ಪ್ರಸನ್ನ ಎನ್.ಗೌಡರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿದದ್ದು ಈಗಾಗಲೆ ಶಿಕ್ಷಕರು, ವಕೀಲರು ಮುಂತಾದ ಪದವಿಧರರು ಇರುವ ಕ್ಷೇತ್ರದಗಳನ್ನು ಆಯ್ಕೆಮಾಡಿಕೊಂಡು ಮತಯಾಚನೆ ಮಾಡಲಾಗುತ್ತಿದೆ ತಾಲೂಕಿನಲ್ಲಿ 4 ಸಾವಿರ ಮತದಾರರ ನೋಂದಣಿಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಹೋರಾಟ

ಮುಂಬವುರ ದಿನಗಳಲ್ಲಿ ರಾಷ್ಟ್ರದಲ್ಲಿ ರೈತರ ಹೋರಾಟ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನಂಬರ್ 26ಕ್ಕೆ ಸಂಪೂರ್ಣ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ಡಿಸಂಬರ್‍ನಲ್ಲಿ 11 ಕಡೆ ಕಿಸಾನ್ ಮಹಾಪಂಚಾಯತ್ ಆಚರಿಸಲಾಗುವುದು, 1 ವಾರಗಳಕಾಲ ಪಾದಯಾತ್ರೆ, ಜನವರಿ 26ರಂದು 1 ಲಕ್ಷ ಜನ ಸೇರಿಸಿ ಜನಾಧಿವೇಶನವನ್ನು ಕರೆಯಲಾಗುವುದು, ಇದರಲ್ಲಿ ಎಪಿಎಂಸಿ ಮುಚ್ಚುತ್ತಿರುವ ಸರಕಾರದ ಕ್ರಮ ಅದರ ಪರಿಣಾಮ, ರಾಜ್ಯ ಸರಕಾರದ ಕೃಷಿ ಭೂಮಿ ಖರೀದಿಗೆ ಅವಕಾಶ ನೀಡಿದ ಪರಿಣಾಮಗಳು ಈ ಬಗ್ಗೆ ವಿಸೃತ ಚರ್ಚೆಮಾಡಿ ನಿರ್ಣಯಗಳನ್ನು ಕೈಗೊಂಡು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿ ಪ್ರಸನ್ನ ಎನ್.ಗೌಡ ಮಾತನಾಡಿ ಜನಾಂದೋಲನದ ಎಲ್ಲಾ ಸಂಘಟನೆಗಳ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿರುವುದು ಸಂತೋಷದ ಸಂಘತಿಯಾಗಿದ್ದು ಈಗಾಗಲೆ 12 ಸಾವಿರ ಮತದಾರರ ನೋಂದಣಿಯನ್ನು ಮಾಡಲಾಗಿದೆ. ಅಲ್ಲದೆ ಎಲ್ಲಾ ಸಂಘಟನೆಗಳು ಕೂಡ ನಮಗೆ ಬೆಂಬಲ ನೀಡಿದ್ದು ಈ ಬಾರಿ ಚುನಾವಣೆಯಲ್ಲಿ ಗೆಲವು ಸಾಧಿಸುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಾಲೂಕು ಅಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಸ್ವಾಮಿಗೌಡ, ಮುಖಂಡರಾದ ಸಿದ್ದೇಗೌಡ, ಪ್ರಕಾಶ್‍ರಾಜೇಅರಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪಿರಿಯಾಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅನೇಕ ರೈತ ಮುಖಂಡರನ್ನು ಸಂಘಟನೆಗೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ದಕ್ಷಿಣ ಪದವಿಧರರ ಕ್ಷೇತ್ರದ ಅಭ್ಯರ್ಥಿ ಪ್ರಸನ್ನ ಎನ್.ಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.

Previous post

ಬಂಟಿ ಔರ್ ಬಬ್ಲಿ 2: ಉದ್ಯಮವಾಗಿ ಎರಡು ವರ್ಷಗಳ ನಂತರ ದೀಪಾವಳಿ ಸಂಭ್ರಮಿಸಲು ರೋಮಾಂಚಿತರಾಗಿದ್ದೇವೆ

Next post

ಅಮೆಜಾನ್ ಇಂಡಿಯಾದಿಂದ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಡಿಜಿಟಲ್ ಡಿವೈಸ್ಗಳ ಲಭ್ಯತೆ ಸಾಧ್ಯವಾಗಿಸಲು `ಡೆಲಿವರಿಂಗ್ ಸ್ಮೈಲ್ಸ್’ಗೆ ಚಾಲನೆ

Post Comment

You May Have Missed