ಕೋರೋನ ಸೋಂಕಿಗೆ ಬಲಿಯಾದ ಅರ್ಹ ಕುಟುಂಬಸ್ಥರಿಗೆ ಪರಿಹಾರ
ಪಿರಿಯಾಪಟ್ಟಣ: ಕೋರೋನ ಸೋಂಕಿಗೆ ಬಲಿಯಾದ ಅರ್ಹ ಕುಟುಂಬಸ್ಥರಿಗೆ ಪರಿಹಾರ ವಂಚಿತರಾದರೆ ಸಂಬಂಧಿಸಿದ ಅಧಿಕಾರಿಗಳನ್ನು ನೇರ ಹೊಣೆ ಗಾರಿಕೆಯಾಗಿ ಮಾಡಲಾಗುವುದು ಎಂದು ಶಾಸಕ ಕೆ ಮಹದೇವ್ ಎಚ್ಚರಿಕೆ ನೀಡಿದರು.ಪಟ್ಟಣದಲ್ಲಿರುವ ತಾಲೂಕು ಆಡಳಿತ ಭವನದಲ್ಲಿ ಗುರುವಾರ ನಡೆದ ಕೋರೋನ ಸೋಂಕಿನಿಂದ ಸಾವನ್ನಪ್ಪಿದ ಕುಟುಂಬಸ್ಥರು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.ಪಿರಿಯಾಪಟ್ಟಣ ತಾಲೂಕಿನಲ್ಲಿ 85ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿದಂತೆ ಒಟ್ಟು 1.5೦ ಲಕ್ಷ ರೂ ಗಳನ್ನು ಪರಿಹಾರವಾಗಿ ನೀಡಲಾಗುತ್ತಿದೆ ಎಂದರು.ಅದನ್ನು ಪಡೆಯಲು ಅರ್ಜಿಯೊಂದಿಗೆ ಸಂಬಂಧಿಸಿದ ದಾಖಲೆ ಮತ್ತು ದೃಢೀಕರಣ ಪತ್ರಗಳು ಮುಖ್ಯವಾಗಿರುವುದರಿಂದ ಇವುಗಳಿಗಾಗಿ ಕಚೇರಿಗಳನ್ನು ಅಲೆದಾಡುವುದನ್ನು ತಪ್ಪಿಸಬೇಕಾದ ಉದ್ದೇಶದಿಂದ ಸಭೆ ಕರೆದಿರುವ ಉದ್ದೇಶವಾಗಿದೆ ಎಂದು ತಿಳಿಸಿದರು.ಆದ್ದರಿಂದ ಅಧಿಕಾರಿಗಳಿಗೆ ಸಂಬಂಧಿಸಿದ ಅಗತ್ಯ ದಾಖಲಾತಿಗಳನ್ನು ಕೊಟ್ಟು ಸಹಕರಿಸಬೇಕು ಹಾಗೂ ಸರ್ಕಾರದ ನಿಯಮದಡಿಯಲ್ಲಿ ಪರಿಹಾರವನ್ನು ನೇರವಾಗಿ ಪಡೆದುಕೊಳ್ಳಲು ಮುಂದಾಗುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್. ತಹಸಿಲ್ದಾರ್ ಕೆ ಚಂದ್ರಮೌಳಿ. ತಾಲೂಕು ಆರೋಗ್ಯ ಆಡಳಿತಧಿಕಾರಿ ಡಾ ಶರತ್ ಬಾಬು. ಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಆಡಳಿತಾಧಿಕಾರಿ ಡಾ ವಿ ದೇವಿಕಾ. ಆಹಾರ ಇಲಾಖೆಯ ಶಿರಸ್ತೇದಾರ್ ಸಣ್ಣಸ್ವಾಮಿ ಅಂದರೆ ಅಧಿಕಾರಿಗಳಾದ ಪಾಂಡು ಪ್ರದೀಪ್ ಪುರಸಭೆ ಮುಖ್ಯಾಧಿಕಾರಿ ಪ್ರಸನ್ನಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಾವನ್ನಪ್ಪಿದ ಕುಟುಂಬಸ್ಥರು ಹಾಜರಿದ್ದರು.



Post Comment