ಕೋ ಆಪರೇಟಿವ್ ಸೊಸೈಟಿಯಲ್ಲಿ ಹಬ್ಬದ ಸಂಭ್ರಮ
ಸಂಜೆ ಸಮಯ ಸುದ್ದಿ
ಪೀಣ್ಯ ದಾಸರಹಳ್ಳಿ: ಸೊಸೈಟಿ ಪ್ರಾರಂಭ ದಿನದಿಂದಲೂ ಪ್ರತಿ ವರ್ಷ ದಸರಾ ವಿಜಯದಶಮಿ ಹಬ್ಬದ ಅಂಗವಾಗಿ ಮಹಾಲಕ್ಷ್ಮೀ ಮತ್ತು ನಾಡ ದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಅಲಂಕಾರ ಸೊಸೈಟಿ ಪದಾಧಿಕಾರಿಗಳ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಸೊಸೈಟಿ ಅಧ್ಯಕ್ಷ ಹಾಗೂ ಜೆಡಿಎಸ್ ಯುವ ಮುಖಂಡ ಕೆಂಪಹೋಬಳಯ್ಯ ಮಹಾಲಕ್ಷ್ಮೀ ಚಾಮುಂಡೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಪುನಸ್ಕಾರ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮ್ಮ ಸಂಸ್ಥೆಯು ಎರಡು ವರ್ಷದಿಂದ ಈ ಕೊರೋನ ಮಹಾಮಾರಿ ರೋಗದಿಂದ ಸಾಮೂಹಿಕ ಹಬ್ಬ ಹರಿದಿನಗಳು ಉತ್ಸವಗಳು ಮಾಡಿರಲಿಲ್ಲ ಈ ದಸರಾ ವಿಜಯದಶಮಿ ಹಬ್ಬದ ಆಚರಣೆ ಮಾಡುವುದು ಎಲ್ಲರಿಗೂ ಖುಷಿ ತಂದಿದೆ ಅದರಂತೆ ನಾವುಗಳು ನಮ್ಮ ಪದಾಧಿಕಾರಿಗಳು ಸೇರಿ ದಸರಾ ವಿಜಯದಶಮಿ ಹಬ್ಬದ ನಿಮಿತ್ತ ಸಾರ್ವಜನಿಕರಿಗೆ ಸಿಹಿ ಪೆÇಟ್ಟಣಗಳು ಹಂಚಿ ಶುಭ ಕೋರಿ ಕೆಂಪಹೋಬಳಯ್ಯ ಮಾತನಾಡಿದರು.
ಈ ವೇಳೆ ಉಪಾಧ್ಯಕ್ಷ ಬಿಜು ವೆಲಪ್ಪನ್,ನಾಗಮಣಿ,ಗಂಗಪ್ಪ, ಸುರೇಶ್,ಚಂದ್ರಪ್ಪ, ಮುನಿರಾಜು, ಶ್ರೀನಿವಾಸ್,ಆರ್.ಶ್ರೀನಿವಾಸ್, ಸುವರ್ಣ ಮತ್ತು ಸೊಸೈಟಿಯ ಮ್ಯಾನೇಜರ್ ಸಿಬ್ಬಂದಿ ವರ್ಗದವರು ಶೆಟ್ಟಿಹಳ್ಳಿ ಸಮಸ್ತ ನಾಗರಿಕರು ಮಹಿಳೆಯರು ಮುಂತಾದವರು ಇದ್ದರು.



Post Comment