Loading Now

“ನೋ‌ ವ್ಯಾಕ್ಸಿನೇಷನ್‌- ನೋ ರೇಷನ್, ನೋ ಪೆನ್ಷನ್”

ಚಾಮರಾಜನಗರ : ಲಸಿಕಾ ಮಹಾ ಅಭಿಯಾನ ನಡೆಯುತ್ತಿರುವ ನಡುವೆ ವ್ಯಾಕ್ಸಿನೇಷನ್​ಗೆ ಮತ್ತಷ್ಟು ವೇಗ ನೀಡಲು ಚಾಮರಾಜನಗರ ಡಿಸಿ ಡಾ.ಎಂ ಆರ್ ರವಿ ಮುಂದಾಗಿದ್ದಾರೆ. ಲಸಿಕೆ ಪಡೆಯದಿದ್ದರೇ ಪಡಿತರ, ಪಿಂಚಣಿ ತಡೆ ಹಿಡಿಯುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
: ಈ ಸಂಬಂಧ ಸೆ.1ರಿಂದ “ನೋ ವ್ಯಾಕ್ಸಿನೇಷನ್‌-ನೋ ರೇಷನ್, ನೋ ವ್ಯಾಕ್ಸಿನೇಷನ್‌-ನೋ ಪೆನ್ಷನ್‌” ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ಮುಂದಾಗಿದ್ದಾರೆ. ಸಾಕಷ್ಟು ಜಾಗೃತಿ, ನಿರಂತರ ಅರಿವು ಮೂಡಿಸುತ್ತಿದ್ದರೂ ಲಸಿಕೆ ಪಡೆಯಲು ಅಸಡ್ಡೆ ತೋರುತ್ತಿರುವವರಿಗೆ ಬಿಸಿ ಮುಟ್ಟಿಸಲು ಡಿಸಿ ರವಿ ಈ ತೀರ್ಮಾನ ಕೈಗೊಂಡಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿ ಡಾ.ಎಂ ಆರ್ ರವಿ ಈಟಿವಿ ಭಾರತದೊಂದಿಗೆ ಮಾತನಾಡಿ, ಕಳೆದ 27ರಿಂದ ಜಿಲ್ಲೆಯಲ್ಲಿ “ಲಸಿಕಾ ಮಹಾ ಮೇಳ” ಅಭಿಯಾನ ನಡೆಯುತ್ತಿದೆ. 4ನೇ ದಿನವಾದ ಇಂದು ಎಲ್ಲಾ ಗ್ರಾಮ, ಪಟ್ಟಣ, ನಗರ ಪ್ರದೇಶಗಳಲ್ಲಿ ತೀವ್ರವಾಗಿ ನಡೆಯುತ್ತಿದೆ. 238 ತಂಡ ಸೇರಿದಂತೆ 27 ಮೊಬೈಲ್ ತಂಡ ಕಾರ್ಯ ನಿರ್ವಹಿಸುತ್ತಿವೆ
ಈಗಾಗಲೇ ಜಿಲ್ಲೆಯಲ್ಲಿ ಶೇ.75ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಆದಾಗ್ಯೂ, ಕೆಲವರಲ್ಲಿ ಉದಾಸೀನ ಪ್ರವೃತ್ತಿ ಇರುವುದರಿಂದ ಪಡಿತರ ಸೌಲಭ್ಯ ಸಿಗಬೇಕಾದರೆ ಲಸಿಕೆ ಪಡೆದಿರಬೇಕೆಂಬ “ನೋ ವ್ಯಾಕ್ಸಿನೇಷನ್‌-ನೋ ರೇಷನ್” ಕಾರ್ಯಕ್ರಮ ಜಾರಿ ಮಾಡಲಾಗುತ್ತಿದೆ ಎಂದರು‌.
ಜನರಲ್ಲಿ ಗಂಭೀರತೆ ಮೂಡಿಸಲು, ಅಸಡ್ಡೆ ಮಾಡಬಾರದೆಂದು ತಿಳಿ ಹೇಳುವ ಉದ್ದೇಶದಿಂದ ಜಿಲ್ಲೆಯಲ್ಲಿರುವ 2 ಲಕ್ಷದಷ್ಟು ಪಿಂಚಣಿದಾರರು ಲಸಿಕೆ ಪಡೆದಿರಬೇಕೆಂದು “ನೋ ವ್ಯಾಕ್ಸಿನೇಷನ್‌-ನೋ ಪೆನ್ಷನ್‌” ಎಂಬ ಕಾರ್ಯಕ್ರಮವನ್ನು ಜಾರಿ ಮಾಡಲಾಗುತ್ತಿದೆ. ಈಗಾಗಲೇ ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಲಸಿಕೆ ಪಡೆಯದಿರುವವರಿಗೆ ಪಿಂಚಣಿ ಕೊಡಬಾರದೆಂದು ಸೂಚಿಸಿದ್ದೇನೆ ಎಂದು ತಿಳಿಸಿದರು.
ಒಂದು ದಿನದ ಗಡುವು : ಗಡಿಭಾಗದಲ್ಲಿರುವ 170 ಗ್ರಾಮಗಳಲ್ಲಿ ಶೇ.92ರಷ್ಟು ಲಸಿಕೆ ನೀಡಲಾಗಿದೆ. ಶೇ.100ರಷ್ಟು ಲಸಿಕೆ ನೀಡಲು ಒಂದು ದಿನದ ಗಡುವು ನೀಡಲಾಗಿದೆ‌‌. ಸಾರ್ವಜನಿಕರು ಜಿಲ್ಲಾಡಳಿತದ ಅಭಿಯಾನಕ್ಕೆ ಕೈಜೋಡಿಸಿ ಕೊರೊನಾ ವಿರುದ್ಧ ಮುಂಜಾಗ್ರತೆ ವಹಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಚಾಮರಾಜನಗರ: “ನೋ‌ ವ್ಯಾಕ್ಸಿನೇಷನ್‌- ನೋ ರೇಷನ್, ನೋ ಪೆನ್ಷನ್” ಜಾರಿ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಆಗಿದ್ದ ಜಿಲ್ಲಾದಿಕಾರಿ ವಿಡಿಯೋ ಹಾಗೂ ರಾಜಕೀಯ ಮುಖಂಡರಿಂದ ಆಕ್ಷೇಪ, ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಾಮರಾಜನಗರ ಡಿಸಿ ತಮ್ಮ ತೀರ್ಮಾನದಿಂದ ಯೂ‌ ಟರ್ನ್ ಹೊಡೆಯುವ ಮೂಲಕ ನುಣುಚಿಕೊಂಡಿದ್ದಾರೆ.

ಈ ಸಂಬಂಧ ಇಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ,‌ ಆ ರೀತಿಯ ಯಾವುದೇ ಅಧಿಕೃತ ಆದೇಶವನ್ನು ಇದುವರೆವಿಗೂ ನೀಡಿಲ್ಲವಾದ್ದರಿಂದ ಪಿಂಚಣಿದಾರರಿಗೆ ಮತ್ತು ಪಡಿತರದಾರರಿಗೆ ಸೇವೆ ನಿರಾಕರಿಸುವ ಪ್ರಶ್ನೆಯೇ ಇಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗಷ್ಟೆ ಜಿಲ್ಲಾದಿಕಾರಿ ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೆ ಕೊಡುವ ತರಾತುರಿಯಲ್ಲಿ ಮಾತನಾಡಿದ ಅವರು, ಸೆ.1 ರಿಂದ ಲಸಿಕೆ ಪಡೆಯದವರಿಗೆ ಪಡಿತರ, ಪಿಂಚಣಿ ತಡೆ ಹಿಡಿಯುವ ಕಾರ್ಯಕ್ರಮ ರೂಪಿಸಲಾಗಿದೆ.‌ ಈಗಲೂ ಲಸಿಕೆ ಪಡೆಯಲು ಅಸಡ್ಡೆ ತೋರುವವರಿಗೆ, ಉದಾಸೀನ ಪ್ರವೃತ್ತಿಯವರು ಇರುವುದರಿಂದ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.. ಇದಾದ ಬಳಿಕ, ಡಿಸಿ ಅವರ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜಕೀಯ ಮುಖಂಡರು, ನೆಟ್ಟಿಗರು ಪರ ವಿರೋಧ ಚರ್ಚೆ ನಡೆಸಿದ್ದರು. ಆದರೆ ಇದೀಗ ಅದಿಕೃತ ಆದೇಶ ಹೊರಡಿಸೊ ಮೂಲಕ ನಾನು ಆ ತರಹ ಹೇಳಿಲ್ಲ ಅನ್ನೊ ತರ ಯೂ ಟರ್ನ್ ಮಾಡಿಕೊಂಡಿದ್ದಾರೆ ಎಂದೆ ಹೇಳಬಹುದು.

ನೋ ವ್ಯಾಕ್ಸಿನ್-ನೋ ರೇಷನ್ ಗೆ ಟೀಕೆ, ಆಕ್ಷೇಪ: ಯೂ ಟರ್ನ್ ಹೊಡೆದ ಜಿಲ್ಲಾದಿಕಾರಿ…!

Post Comment

You May Have Missed