ನರಸಾಪುರ ಗ್ರಾಮದಲ್ಲಿ ಇಂಡಿಯನ್ ಪೋಸ್ಟ್ ಆಫೀಸ್ ನಲ್ಲಿ ಪೋಸ್ಟಲ್ ಆರ್ಡರ್ ಸಿಗದೇ ಸಾರ್ವಜನಿಕರು ಅಲೆದಾಡುವ ಪರಿಸ್ಥಿತಿ ಬಂದಿದೆ
ಕೋಲಾರ :- ನರಸಾಪುರ ಗ್ರಾಮದ ಇಂಡಿಯನ್ ಪೋಸ್ಟ್ ಆಫೀಸ್ ನಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಸಿಗದೇ ಸಾರ್ವಜನಿಕರು ಅಲೆದಾಡುವ ಪರಿಸ್ಥಿತಿ ಬಂದಿದೆ.
ನರಸಾಪುರ ಗ್ರಾಮದ ಇಂಡಿಯನ್ ಪೋಸ್ಟ್ ಆಫೀಸ್ ನಲ್ಲಿ ಇಂಡಿಯನ್ ಪೋಸ್ಟ್ ಆರ್ಡರ್ ಸಿಗುತ್ತಿಲ್ಲ.
ಇಲ್ಲಿನ ಅಂಚೆ ಕಛೇರಿಯಲ್ಲಿ ಸುಮಾರು 6ತಿಂಗಳು ಗಳಿಂದ 10 ರೂಗಳ ಪೋಸ್ಟಲ್ ಆರ್ಡರ್ ಇಲ್ಲದೆ ಸಾರ್ವಜನಿಕರು ಅಲೆದಾಡುವ ಪರಿಸ್ಥಿತಿಗೆ ಬಂದಿದ್ದಾರೆ.
*ಸುಮಾರು 6 ತಿಂಗಳಿನಿಂದ ಸುಮಾರು 3 ಮಂದಿ ಪೋಸ್ಟ್ ಮಾಸ್ಟರ್ ಗಳು ಬದಲಾಗಿದ್ದಾರೆ*
ಬಂದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಅಗತ್ಯತೆಯ ಬಗ್ಗೆ ಮನವಿ ಮಾಡಲಾಗಿದೆ. ಇದುವರೆಗೂ ಬಂದಿಲ್ಲ ಎಂದು ಆರಿಕೆಯ ಉತ್ತರ ನೀಡಿರುತ್ತಾರೆ.
ಇದುವರೆಗೂ ಯಾರು ಸಹ ತಲೆ ಕೆಡಿಸಿಕೊಂಡಿರುವುದಿಲ್ಲ. ಹಾಗೂ ಇಂಡಿಯನ್ ಪೋಸ್ಟಲ್ ಆರ್ಡರ್ ಗಳನ್ನು ತರಿಸಿರುವುದಿಲ್ಲ. ಈಗ ಬಂದಿರುವ ಅಧಿಕಾರಿಯು ಅದೇ ಉತ್ತರವನ್ನು ನೀಡುತ್ತಿದ್ದಾರೆ.
ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಇಲ್ಲಿನ ಅಂಚೆ ಕಛೇರಿ ಮುಖ್ಯ ಕಛೇರಿಯಾಗಿದ್ದು. ಇಲ್ಲಿನ ಇಂತಹ ಅನೇಕ ಸಮಸ್ಯೆಗಳು ಇದೆ. ಜೊತೆಗೆ ಅತೀ ಹೆಚ್ಚಾಗಿ ಇಂಟರ್ನೆಟ್ ಸರ್ವರ್ ಸಮಸ್ಯೆ ಸಹ ಹೆಚ್ಚಾಗಿ ಕಾಡುತ್ತಿದ್ದು ಸಾರ್ವಜನಿಕರು ತಮ್ಮ ಕಾರ್ಯಗಳಿಗೆ ಕೆಲಸ ಕಾರ್ಯಗಳು ಬಿಟ್ಟು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.
ಪ್ರತಿ ವ್ಯವಹಾರ ಆನ್ಲೈನ್ ಮುಖಾಂತರವೇ ಆಗಬೇಕಾಗಿದೆ. ತಾಂತ್ರಿಕತೆಯನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಇಲಾಖೆಗಳು ಹೇಳುತ್ತಿವೆ.
*ಸಂಬಂಧಪಟ್ಟ ಇಲಾಖೆಗಳು ಸರಿಯಾದ ತಾಂತ್ರಿಕತೆಯನ್ನು ಅಳವಡಿಸಿ ಸಮಯಕ್ಕೆ ಸರಿಯಾಗಿ ಸಾರ್ವಜನಿಕರು ಕಾರ್ಯಗಳನ್ನು ಮಾಡಿ ಕೊಡುವುದರಲ್ಲಿ ವಿಫಲರಾಗಿದ್ದಾರೆ*
ಆದುದರಿಂದ ಕೂಡಲೇ ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಗೆಹರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ನರಸಾಪುರ ಅಂಚೆ ಕಛೇರಿಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ನರಸಾಪುರ ಹೋಬಳಿ ಅಧ್ಯಕ್ಷ ಎನ್ ಲೋಕೇಶ್, ನರಸಾಪುರ ಗ್ರಾಮ ಪಂಚಾಯ್ತಿ ಸದಸ್ಯ ಕೆ ಇ ಬಿ ಚಂದ್ರು, ಮಾಜಿ ಸದಸ್ಯ ಟಿ ಮಂಜುನಾಥ್, ಮುಖಂಡರಾದ ಮಹೇಶ್, ಟಿಪ್ಪು ಷರೀಫ್, ನರಸಿಂಹ, ಮಂಜುನಾಥ್, ಹಾಗೂ ಸಾರ್ವಜನಿಕರು ಒತ್ತಾಯಿಸಿದರು.



Post Comment