Loading Now

1000ಕ್ಕೂ ಹೆಚ್ಚು ಮಕ್ಕಳಿಂದ ಗಂಧದಗುಡಿ ಚಿತ್ರಕಲಾ ಸ್ಪರ್ಧೆ.

ಪರಿಸರ ಸಂರಕ್ಷಣೆ ಸಂದೇಶ ಸಾರಿದ ಅಪ್ಪು ಗುಣಗಳನ್ನ ಮಕ್ಕಳು ಅಳವಡಿಸಿಕೊಳ್ಳಿ:- ಮಿರ್ಲೆ ಶ್ರೀನಿವಾಸ್ ಗೌಡ ಕರೆ.

ಮೈಸೂರು ಅ-30 : 
ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿ ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಪುನೀತ್ ರಾಜಕುಮಾರ್ ಕೈಗೊಂಡ ಕಾರ್ಯಗಳು ನಮಗೆಲ್ಲ ಮಾದರಿಯಾಗಿವೆ ಎಂದು ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ  ಹೇಳಿದರು.

ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ  ಅಪ್ಪು ಅಭಿಮಾನಿ ಬಳಗ ಹಾಗೂ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಸಹಯೋಗದೊಂದಿಗೆ ಗಂಧದಗುಡಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿತ್ತು 1000ಕ್ಕೂ ಹೆಚ್ಚು ಮಕ್ಕಳು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪರಿಸರ ಬೆಟ್ಟಗುಡ್ಡಗಳು ನದಿಕೆರೆ ಅರಣ್ಯ ಪರ್ವತ ಜಲಪಾತಗಳಿಗೆ  ಸಂಭದಿಸಿದ ಚಿತ್ರಗಳು ಮತ್ತು ಅರಣ್ಯದಲ್ಲಿ  ಪುನೀತ್ ರಾಜ್ ಕುಮಾರ್ ಇರುವ ಚಿತ್ರಗಳನ್ನು ಬಿಡಿಸುವ ಮೂಲಕ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

ವಿವಿಧ ವಿಭಾಗದ ಅತ್ಯುತ್ತಮ ಚಿತ್ರಕಲೆ ಬಿಡಿಸಿದ ಸ್ಪರ್ಧಿಗಳಿಗೆ 8 ರಿಂದ 12 ವರ್ಷದ ವಯೋಮಿತಿಯ ವಿಜೇತರಾದ ಮೊದಲನೇ ಬಹುಮಾನ ಧೃತಿ ವಿಶಾ, ದ್ವಿತೀಯ ಬಹುಮಾನ ಹರ್ಷಿತ, ತೃತೀಯ ಬಹುಮಾನ ದ್ವೀತಿಚಾನಸ್ಯ ,12  ರಿಂದ 18 ವಯೋಮಿತಿಯ ಮೊದಲನೇ ಬಹುಮಾನ  ,ಕುಮಾರ್ ನಾಯಕ್, ದ್ವಿತೀಯ ಬಹುಮಾನ 
ವಿಷ್ಣು ಪ್ರಸಾದ, ತೃತೀಯ ಬಹುಮಾನ ಅಭಿಜ್ನ .

18ವರ್ಷದ ಮೇಲ್ಪಟ್ಟ ವಿಜೇತರಾದ  ಮೊದಲನೇ ಬಹುಮಾನ ಮದುಸೂದನ್ ಎಸ್, ದ್ವಿತೀಯ , ಮಹೇಶ್ ಬಸವೇಗೌಡ, ತೃತೀಯ  ಬಂಗಾರ ರವರಿಗೆ ಬಹುಮಾನ ವಿತರಿಸಿ ಅನಂತರ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ  ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೇ ಶ್ರೀನಿವಾಸ ಗೌಡ ರವರು ಪುನೀತ್ ಅವರ ಹೃದಯ ವೈಶಾಲ್ಯತೆಯನ್ನು ನಾವೆಲ್ಲರೂ ಅಳವಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯನಿರ್ವಹಿಸೋಣ ವರನಟ ಡಾ. ರಾಜಕುಮಾರ್ ರಂತೆಯೇ ಪುನೀತ್ ರಾಜಕುಮಾರ್ ರವರು ಪರಿಸರ ಸಂರಕ್ಷಣೆಯ ಸಂದೇಶವನ್ನ ಸಾಮಜಕ್ಕೆ ಸಾರಿದರು ಎಂದರು, ಜೆಡಿಎಸ್ ಮುಖಂಡ ಜಿ. ಮಂಜು ಗೌಡ ಮಾತನಾಡಿ  ಸಮಾಜದಲ್ಲಿ ತೊಂದರೆ ಒಳಗಾದವರಿಗೆ ನೆರವಾಗುವ ಗುಣ ಎಲ್ಲರಲ್ಲೂ ಇರಬೇಕು. ದಾನದಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಜಾತಿ, ಧರ್ಮ ಬದಿಗಿಟ್ಟು, ಮತ್ತೊಬ್ಬರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸಲು ಕಾರಣಕರ್ತರಾಗೋಣ’ ಎಂದು ಕರೆ ನೀಡಿದರು.

ಬಿಜೆಪಿ ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಹೇಮ ನಂದೀಶ್ ಮಾತನಾಡಿ 
‘ನಟ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಒಂದು ವರ್ಷ ಕಳೆದಿದೆ. ಕಳೆದ ವರ್ಷ ತೀವ್ರ ಹೃದಯಾಘಾತದಿಂದ ಪುನೀತ್ ನಿಧನ ಹೊಂದಿದಾಗ ಇಡೀ ಕರುನಾಡು ನಲುಗಿ ಹೋಗಿತ್ತು. ತಮ್ಮ ಮನೆ ಮಗನನ್ನು ಕಳೆದುಕೊಂಡಂತಹ ದುಃಖ ಕನ್ನಡಿಗರನ್ನು ಕಾಡಿತ್ತು’ ಎಂದು ಅವರು ಹೇಳಿದರು.

ಮುಡಾ ಸದಸ್ಯರಾದ ಲಕ್ಷ್ಮೀದೇವಿ ಮಾತನಾಡಿ ‘ಅಪ್ಪು ಗಂಧದಗುಡಿ ತೊರೆದು ಇಂದಿಗೆ 1 ವರ್ಷ. ಸಾಕಷ್ಟು ಸಾಮಾಜಿಕ ಕೆಲಸಗಳ ಮೂಲಕ ಪುನೀತ್ ಗುರುತಿಸಿಕೊಂಡಿದ್ದರು.
ಈಗ ಅವರನ್ನು ಇದೇ ರೀತಿಯ ಕೆಲಸಗಳ ಮೂಲಕ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ನೋವಿನ ನಡುವೆಯೇ ಪುಣ್ಯಸ್ಮರಣೆ ಕಾರ್ಯ ನಡೆಯುತ್ತಿದೆ’ ಎಂದರು.

ವಿಶೇಷವಾಗಿ ಸ್ಪರ್ಧಿಸಿದ ಮಕ್ಕಳಿಗೂ ಪೋಷಕರಿಗೂ ಬಿಜೆಪಿ ಮುಖಂಡರು ಪರಮೇಶ್ ಗೌಡ ರವರು ಪುನೀತ್ ರವರ ಹೆಸರಿನಲ್ಲಿ ಪ್ರತಿಯೊಬ್ಬರಿಗೂ ಬಿಸ್ಕೆಟ್ ಪೊಟ್ಟಣ ಹಾಗೂ ಚಾಕಲೇಟ್ ವಿತರಿಸಿದರು .

ಇದೇ ಸಂದರ್ಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ ಗೌಡ , ಜೆಡಿಎಸ್ ಮುಖಂಡರಾದ ಜಿ.ಮಂಜು ಗೌಡ , ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್ ,ಮುಡಾ ಸದಸ್ಯರಾದ ಲಕ್ಷ್ಮೀದೇವಿ , ಮನೋ ವಿಜ್ಞಾನಿ ಡಾ.ರೇಖಾ, ಶಶಿಕಲಾ,  ಡಾ. ಬಿಜೆಪಿ ಮುಖಂಡರಾದ ಪರಮೇಶ್ ಗೌಡ , ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ,  ಸುಚೀಂದ್ರ ,
ಜಿಎಸ್ಎಸ್ಎಸ್ ಚಿತ್ರಕಲಾ ಶಿಕ್ಷಕರಾದ ಅನಿತಾ ,ರವಿಚಂದ್ರ ,ಕಾಂಗ್ರೆಸ್ ಮುಖಂಡರಾದ ರೇಖಾ ಶ್ರೀನಿವಾಸ್ ,ಸವಿತಾ ಘಾಟ್ಕೆ , ವಿದ್ಯಾ , ನಾಗಶ್ರೀ ಹಾಗೂ ಇನ್ನಿತರರು ಹಾಜರಿದ್ದರು.

Post Comment

You May Have Missed