ನಮಗೆ ಯಾವುದು ಉತ್ತಮ?
ಈ ಹಿಂದೆ ಒಂದು ಪ್ರವಚನದಲ್ಲಿ, ಶ್ರೀಗುರುಗಳು ‘ಭಗವಂತನ ದಾರಿಯನ್ನು ತಲುಪಲು 5 ದಾರಿಗಳಿವೆ… ರಾಜಯೋಗ, ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ ಹಾಗೂ ಹಠಯೋಗ’ ಎಂದು ತಿಳಿಸಿದ್ದರು. ಈ ಐದು ಮಾರ್ಗಗಳಲ್ಲಿ ನಾವು ಯಾವ ಮಾರ್ಗವನ್ನು ಪಾಲಿಸಬೇಕು? ನಮಗೆ ಅತಿ ಸೂಕ್ತವಾದ ಮಾರ್ಗವು ಯಾವುದು? ಬನ್ನಿ ಗುರುಗಳಿಂದ ತಿಳಿಯೋಣ.
“ಇಂದಿನ ಜೀವನದಲ್ಲಿ ಹೆಚ್ಚಿನ ಜನರು ಕರ್ಮ ಯೋಗವನ್ನು ಅನುಸರಿಸಲು ಇಚ್ಚಿಸುವವರಂಥವರು ಅಥವಾ ಈ ಪೀಳಿಗೆಗೆ ಇದು ಅತ್ಯಂತ ಸೂಕ್ತವಾಗಿರುವಂತದ್ದು. ಏಕೆಂದರೆ ಇದರಲ್ಲಿ ನೀವು ಇತರ ಸಂತರ ನೀತಿಗಳು ಮತ್ತು ಅನುಭವಗಳನ್ನು ಕಾರ್ಯಗತಗೊಳಿಸುವುದಿಲ್ಲ. ಈ ಭಾಗದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ನೀವು ಅನುಸರಿಸುವ ಕರ್ಮಗಳನ್ನು ಕ್ಷಣಕ್ಷಣವೂ ಗಮನಿಸುವುದು, ನೀವು ವಿದ್ಯಾರ್ಥಿ ಅಥವಾ ಕಾರ್ಯಕರ್ತರೇ ಆಗಿರಬಹುದು. ಉದಾಹರಣೆಗೆ ನಾವು ಕರ್ಮ ಯೋಗ ಮಾರ್ಗವನ್ನು ಪರಿಗಣಿಸಿದಾಗ, ನೀವು ವಿದ್ಯಾರ್ಥಿಯಾಗಿದ್ದರೆ, ನಿಮ್ಮ ಅಧ್ಯಯನ ಮತ್ತು ನಿಮ್ಮ ದೈಹಿಕ ಯೋಗಕ್ಷೇಮಕ್ಕೆ ಮತ್ತು ಮನೆಯ ಸಂದರ್ಭಗಳಿಗೆ ನೂರು ಪ್ರತಿಶತ ನ್ಯಾಯವನ್ನು ನೀಡಬೇಕು. ನೀವು ಕೌಟುಂಬಿಕ ವ್ಯಕ್ತಿಯಾಗಿದ್ದರೆ , ನಿಮ್ಮ ಜವಾಬ್ದಾರಿಯನ್ನು ಪಾಲಿಸುವುದು, ಕುಟುಂಬ ಸದಸ್ಯರಿಗೆ ಸಂಪಾದಿಸುವುದು, ರಕ್ಷಿಸುವುದು, ಕಾಳಜಿ ವಹಿಸುವುದು, ಪ್ರೀತಿಸುವುದು ಮತ್ತು ಸುತ್ತಮುತ್ತಲಿನವರನ್ನು ಗೌರವಿಸುವುದು. ವೃದ್ಧಾಪ್ಯಕ್ಕೆ ಬಂದಾಗ ಜನರು ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು, ಅವರು ತಮ್ಮ ಪೂರ್ವಜರಿಂದ ಪಡೆದ ಸಂಸ್ಕಾರವನ್ನು ಅನುಸರಿಸಬೇಕು, ಚಿಕ್ಕವರಿಂದ ದೊಡ್ಡವರವರೆಗೆ, ಇಡೀ ಕುಟುಂಬದ ಸದಸ್ಯರಿಗೆ ಆದರ್ಶಪ್ರಾಯವಾಗಿರಬೇಕು. ಈ ಅವಧಿಯಲ್ಲಿ ಆಧ್ಯಾತ್ಮಿಕ ಗುರುವನ್ನು ಪಡೆಯಬೇಕು, ಮುಕ್ತಿಗಾಗಿ ಮಾರ್ಗವನ್ನು ಹುಡುಕಬೇಕು.
ಹುಟ್ಟಿನಿಂದ ಸಾಯುವವರೆಗಿನ ಮಹಾನ್ ಕರ್ಮಯೋಗಿ ಎಂದರೆ ಹೀಗೆಯೇ. ಅವನೇ ಜೀವನದ ವಿವಿಧ ಹಂತಗಳ ಉದಾಹರಣೆಯಾಗುತ್ತಾನೆ. ಭಗವದ್ಗೀತೆಯಲ್ಲಿ ‘ಚಾತುರ್ವರ್ಣ್ಯಂ ಮಯಾ ಸೃಷ್ಟಂ-ನಾಲ್ಕು ವರ್ಣಗಳು ನನ್ನಿಂದ ಸೃಷ್ಟಿಯಾಗಿವೆ’ ಎಂದು ಶ್ರೀ ಕೃಷ್ಣನು ಹೇಳುತ್ತಾನೆ. ವಾಸ್ತವದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಷ್ಣವ ಅಥವಾ ಶೂದ್ರ ಎಂದು ಯಾರೂ ಇಲ್ಲ. ‘ಜನ್ಮನಾ ಜಾಯತೇ ಶೂದ್ರಃ’ ಎಂದರೆ ಎಲ್ಲರೂ ಶೂದ್ರರಾಗಿ ಹುಟ್ಟುತ್ತಾರೆ.
ಹಳೆಯ ದಿನಗಳಲ್ಲಿ, ಬಡಗಿ ಕುಟುಂಬದಲ್ಲಿ ಜನಿಸಿದವರು ವೃತ್ತಿಯಲ್ಲಿ ಅದೇ ಅನುಸರಿಸುತ್ತಾರೆ, ಬ್ರಾಹ್ಮಣನ ಕುಟುಂಬದವರಾಗಲಿ , ವ್ಯಾಪಾರಿಗಳಾಗಲಿ, ರಾಜರುಗಳಾಗಲಿ….ಹೀಗೆ ಜಾತಿ ಪದ್ಧತಿಯು ಅಭಿವೃದ್ಧಿಯಾಗಿರುವುದು.
ಈಗ ವಿಷಯಕ್ಕೆ ಮರಳೋಣ…. ಒಬ್ಬನು ಕರ್ಮಯೋಗಿಯಾಗಬೇಕೆಂದರೆ ಫಲಿತಾಂಶಗಳ ಯಾವುದೇ ನಿರೀಕ್ಷೆಗಳಿಲ್ಲದೆ ಕರ್ಮವನ್ನು ನಿರ್ವಹಿಸುವುದು ಬಹಳ ಮುಖ್ಯ. ತಮ್ಮ ದೇವರ (ಯಾವುದೇ ಸಿದ್ಧಾಂತವಾಗಿರಬಹುದು) ಹೆಸರಿನಲ್ಲಿ ಕರ್ಮವನ್ನು ಮಾಡಿ. ಕರ್ಮಯೋಗವು ಪುರುಷಾರ್ಥಗಳನ್ನು (ಧರ್ಮ, ಅರ್ಥ, ಕಾಮ ಹಾಗು ಮೋಕ್ಷ) ಸಾಧಿಸುವಂತಹ ಒಂದು ಮಾರ್ಗ.”
ನಮ್ಮ ಜೀವನವು ಕರ್ಮಗಳಿಂದ ಆಗಲ್ಪಟ್ಟಿದೆ. ನಮ್ಮ ಪ್ರತಿಯೊಂದು ಚಲನವಲನಗಳು ಕರ್ಮಗಳೇ ಆಗಿಬಿಡುತ್ತವೆ. ನಾವು ಎಲ್ಲಾ ಚಲನವಲನಗಳಿಗೆ ಒಂದು ಹೆಸರನ್ನು ನೀಡಿ ಅದಕ್ಕೆ ಅತಿಯಾದ ಅಪೇಕ್ಷೆಗಳನ್ನು ಜೋಡಿಸುತ್ತೇವೆ. ಅಪೇಕ್ಷಿಗಳು ತಲಪಿದಾಗ ಅತ್ಯಂತ ಆನಂದ, ತಲುಪದಿದ್ದರೆ ಭೂಮಿಯೇ ಮುಳುಗಿತೇನೋ ಎನ್ನುವ ದುಃಖ. ಗುರುಗಳ ಮಾತನ್ನು ಪಾಲಿಸುತ್ತಾ ನಮ್ಮ ಕರ್ಮಗಳಿಗೆ ಯಾವುದೇ ಅಪೇಕ್ಷೆಗಳನ್ನು ಜೋಡಿಸದಿದ್ದರೆ ನಮ್ಮ ಜೀವನವು ಶಾಂತತೆಯಿಂದ ಕೊಡುವುದು. ಮನಸ್ಸಿನ ಅಶಾಂತತೆಯನ್ನು ದೂರ ಮಾಡಿಸುವ ಶಾಂತಿಯ ಮೂರ್ತಿಯೇ ನಮ್ಮ ಈ ‘ಧ್ರುವತಾರೆ’.
-ಸೌದಾಮಿನಿ.

Post Comment