Loading Now

ಹನೂರು ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಭೆ .

ಹನೂರು ಅ-14 : 14.08.1992 ರ ಮಿಣ್ಯ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿಗಳು ಹಾಗೂ ಆರಕ್ಷಕರುಗಳಿಗೆ ಶ್ರದ್ಧಾಂಜಲಿ ಸಭೆ ನಡೆಯಿತು.

ದಾಳಿಯಲ್ಲಿ ಹುತಾತ್ಮ ರಾದ ಪೊಲೀಸ್ ಅಧಿಕಾರಿ ಗಳಿಗೆ ಕೊಳ್ಳೇಗಾಲ ಡಿವೈಎಸ್ಪಿ ನಾಗರಾಜ್, ಸಂತೋಷ್ ಕಶ್ಯಪ್, ಬಿ ವಿ ರಂಗಸ್ವಾಮಿ ರವರು ಪುಷ್ಪರ್ಚನೆ ಮಾಡಿ ಶ್ರದ್ದಾಂಜಲಿ ಅರ್ಪಿಸಿದರು.

ಈ ಸಭೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಿಬಿ ರಂಗಸ್ವಾಮಿ ರವರು ಮಾತನಾಡಿ ಇತಿಹಾಸವನ್ನು ಮೇಲಕ್ಕೂ ಹಾಕಿದರು. ಈ ದಿನ ಎಲ್ಲರಿಗೂ ನೋವುಂಟು ಮಾಡುವ ದಿನವಾಗಿದೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಕಮಲ ನಾಯಕ್ ಎಂಬ ಗುಪ್ತ ಮಾಹಿತಿದಾರನ ಕುತಂತ್ರ ಮೋಸ ಮತ್ತು ನಂಬಿಕೆ ದ್ರೋಹದಿಂದ ಇಂತಹ ಯುವ ಪೊಲೀಸ್ ಪಡೆಗಳನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಯಿತು. ಪೊಲೀಸ್ ಮಾಹಿತಿಧಾರನಂತೆ ಕೆಲಸ ಮಾಡುತ್ತಿದ್ದು, ಒಳಗೆ ವೀರಪ್ಪನ್ ಸಹಚರನಾಗಿರುವುದು ಪೊಲೀಸರಿಗೆ ತಿಳಿದಿರಲಿಲ್ಲ . ವೀರಪ್ಪನ್ ಒಳಸಂಚಿನಂತೆ ಕಮಲ ನಾಯಕ್ ಕೆಂಪು ಬಟ್ಟೆ ಧರಿಸಿ ಬಂದಿದ್ದರು. ಕಾರ್ಯಾಚರಣೆ ವೇಳೆ ಮಿಣ್ಯ ಅರಣ್ಯ ಪ್ರದೇಶದಲ್ಲಿ ಜೀಪ್ ಇಳಿದು ಓಡಿಬಿಟ್ಟ. ನಂತರ ವೀರಪ್ಪನ್ ಸಹಚರರು ಗುಂಡಿನ ದಾಳಿ ನಡೆಸಿದರು. ಕಮಲಾ ನಾಯಕ್ ಎಂಬ ಕುತಂತ್ರ ಬುದ್ಧಿಯಿಂದ ಎಸ್ ಟಿ ಎಫ್ ಪೊಲೀಸ್ ವರಿಷ್ಠಾಧಿಕಾರಿ ಹರಿಕೃಷ್ಣ ಸೇರಿ 6ಜನ ಪೊಲೀಸ್ ಸಿಬ್ಬಂದಿಗಳು ಹುತಾತ್ಮರಾದರು ಎಂದು ಸ್ಮರಿಸಿದರು.

ದಾಳಿ ಯಲ್ಲಿ ಹುತಾತ್ಮ ರಾದ ಹರಿಕೃಷ್ಣ, ಶಕೀಲ್ ಅಹಮದ್, ಅಪ್ಪಚ್ಚು, ಸುಂದರ್, ಕಾಳಪ್ಪ, ಸೋಮಪ್ಪ ಬೆನಗೊಂಡ ಮೃತರಾದ ಪೊಲೀಸ್ ಅಧಿಕಾರಿಗಳು

ಈ ಸಂದರ್ಭದಲ್ಲಿ ಕೊಳ್ಳೇಗಾಲ ಡಿವೈಎಸ್ಪಿ ನಾಗರಾಜ್, ಹನೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಸ್ಯಪ್ ಹಾಗೂ ಬಿ ವಿ ರಂಗಸ್ವಾಮಿ, ಹನೂರು ಪತ್ರಕರ್ತ ಸಂಘದ ಅಧ್ಯಕ್ಷ ಮಹದೇಶ ಎಂ. ಹಾಗೂ ಪತ್ರಕರ್ತರು ಇದ್ದರು.

Post Comment

You May Have Missed