Loading Now

ವಿದ್ಯಾರ್ಥಿ ಸಂಘಟನೆ ರಾಮಸ್ವಾಮಿ ವೃತ್ತದ ಐಕ್ಯತೆ.

75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಸಂಧರ್ಭದಲ್ಲಿ ಪ್ರಜಾಪ್ರಭುತ್ವದ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾದ ವಿದ್ಯಾರ್ಥಿ  ರಾಮಸ್ವಾಮಿ ವೃತ್ತ ಅಭಿವೃದ್ಧಿಯಾಗಲಿ..
ಯುವಕರೇ ರಕ್ತವನ್ನ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ನೇತಾಜಿ ರವರ ಘೋಷಾವಾಕ್ಯ ಮಾಧ್ಯಮಗಳಿಲ್ಲದ ಕಾಲದಲ್ಲೇ ಭಾರತದಲ್ಲಿ ಕ್ರಾಂತಿಕಾರಿ ಸಂಘಟನೆ ನಿರ್ಮಾಣವಾಗಿ ಲಕ್ಷಾಂತರ ಯುವಕರು ಒಗ್ಗೂಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು, ಅದರಿಂದ ಪ್ರೇರಣೆಗೊಂಡು ಮೈಸೂರಿನ ಫೈವ್ ಲೈಟ್ ವೃತ್ತದಲ್ಲೂ (ರಾಮಸ್ವಾಮಿ ವೃತ್ತ) ಸಹ ವಿದ್ಯಾರ್ಥಿ ಸಂಘಟನೆಗಳ ಕೇಂದ್ರಬಿಂದು ಚಳವಳಿ ಹೋರಾಟ ಪ್ರತಿನಿತ್ಯ ನಡೆಯುತ್ತಲೆಯಿತ್ತು, ಅಂದು ಆಗಸ್ಟ್ 14ರಂದು ಸ್ವಾತಂತ್ರ್ಯ ಮಧ್ಯರಾತ್ರಿ ಸಿಕ್ಕಿತು ಬ್ರಿಟೀಷ್ ಅಧಿಕಾರಿ ವಯ್ಸ್ ರಾಯ್ ಭಾರತಕ್ಕೆ ಸ್ವಾತಂತ್ರ್ಯವನ್ನ ಘೋಷಿಸಿ ಭಾರತಧ್ವಜವನ್ನ ಹಾರಿಸಿಸಿದರು ನಂತರ ಬ್ರಿಟೀಷರು ಭಾರತ ಬಿಟ್ಟು ತೊಲಗಿದರು, ಸರ್ದಾರ್ ವಲ್ಲಭಭಾಯಿ ಪಟೇಲರು 565 ದೇಶದ ಉಪ ಸಾಮ್ರಾಜ್ಯಗಳನ್ನ ಒಗ್ಗೂಡಿಸಿ ಸ್ವಾತಂತ್ರ್ಯ ಭಾರತ ಒಕ್ಕೂಟ ಪ್ರಾರಂಭಿಸಿದರು

ನಮ್ಮ ಮೈಸೂರು ಸಾಮ್ರಾಜ್ಯದ ಮಹಾರಾಜ ಶ್ರೀ.ಜಯಚಾಮರಾಜೇಂದ್ರ ಒಡೆಯರ್ ರವರಿಗೆ 27ವರ್ಷ ಅವರೇ ಭಾರತ ಒಕ್ಕೂಟಕ್ಕೆ ಮೊದಲು ಬಹಿರಂಗ ಬೆಂಬಲ ಸೂಚಿಸಿದರು ಕೂಡ ಅಂದಿನ ದಿವಾನ್ ಆರ್ಕಾಟ್ ರಾಮಸ್ವಾಮಿ ಮೊದಳಿಯಾರ್ ಮತ್ತು ಆಪ್ತ ಸಹಾಯಕ ತಂಬೂರು ಚೆಟ್ಟಿ ಅವರ ಕೆಲವು ತಪ್ಪಿನ ನಿರ್ಧಾರದಿಂದ ಮೈಸೂರು ರಾಜ್ಯ ಭುಗಿಲೆಬ್ಬುತ್ತದೆ,
ಕರ್ನಾಟಕ ರಾಜ್ಯ ರಚನೆ ಪ್ರಜಾಪ್ರಭುತ್ವ  ಕಾನೂನು ಪರಿಪಾಲನೆ ಭಾರತದೊಂದಿಗೆ ಮೈಸೂರು ರಾಜ್ಯ ಒಡಂಬಡಿಕೆ ಒಪ್ಪಂದ ವಿಳಂಬದಿಂದ ಪ್ರಜಾಪ್ರಭುತ್ವಕ್ಕಾಗಿ ಹೋರಾಟಗಳು ನಡೆಯುತ್ತವೆ, ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು 1947ರ ಆಗಸ್ಟ್15 ಆದರೂ ಮೈಸೂರು ರಾಜ್ಯದ ಹಳೇಪ್ರಾಂತ್ಯಕ್ಕೆ ರಾಜಾಡಳಿತ ನಂತರ ಪ್ರಜಾಪ್ರಭುತ್ವ ಸ್ವಾತಂತ್ರ್ಯ ದೊರೆತಿದ್ದು 1947 ಅಕ್ಟೋಬರ್ 24ರಂದು 70ದಿನಗಳ ಅಂತರದಲ್ಲಿ ನಡೆದಿದ್ದೇ ಮೈಸೂರು ಚಲೋ, ಸ್ವಾತಂತ್ರ್ಯ ಚಳವಳಿಯಲ್ಲಿ ವಿದ್ಯಾರ್ಥಿ  ಸಂಘಟನೆಗಳ ಹೋರಾಟ ಬಾಯ್ಕಟ್ ಆರ್ಕಾಟ್ ತಂಬೂಚೆಟ್ಟಿ ಚಟ್ಟಕಟ್ಟಿ ವಿರೋಧ ಘೋಷಣೆಗಳ  ಹೋರಾಟ ಹೆಚ್ಚಿರುತ್ತದೆ, ಮೈಸೂರು ಆಜಾದ್ ಕಾಂಗ್ರೆಸ್ ರಚಿಸಿದ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕೆಸಿ. ರೆಡ್ಡಿ, ಪ್ರಜಾಪ್ರಭುತ್ವದ ಶಕ್ತಿ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಸಿ ದಾಸಪ್ಪ, ಮೈಸೂರು ರಾಜ್ಯದ ಹಣಕಾಸು ಸಚಿವ ಟಿ. ಮರಿಯಪ್ಪ, ಗಾಂಧಿವಾದಿ ತಾಳೆಕೆರೆ ಸುಬ್ರಹ್ಮಣ್ಯ,  ರವರು ಸೇರಿದಂತೆ ಅನೇಕ ನಾಯಕರು ಮೈಸೂರು ಚಲೋ ಪ್ರಜಾಪ್ರಭುತ್ವ ಸ್ವಾತಂತ್ರ್ಯ ಹೋರಾಟಕ್ಕೆ ಕರೆ ನೀಡುತ್ತಾರೆ, 

 1947 ಜನವರಿಯಲ್ಲಿ ಭಾರತ ಒಕ್ಕೂಟದಲ್ಲಿ ಮೈಸೂರು ಸಂಸ್ಥಾನ‌ ಮಹಾರಜರು ಮೊದಲು ಪ್ರಜಾಪ್ರಭುತ್ವಕ್ಕೆ ಬಹಿರಂಗ ಬೆಂಬಲ ಸೂಚಿಸಿದರೂ ಸಹ ಆರ್ಕಾಟ್ ರಾಮಸ್ವಾಮಿ ಮೊದಳಿಯಾರ್ ಮತ್ತು ತಂಬೂ ಚಟ್ಟಿ ಕುತಂತ್ರದಿಂದ ಆಗಸ್ಟ್ 15ರಂದು ಮೈಸೂರು ಅರಮನೆಯಲ್ಲಿ ಭಾರತ ರಾಷ್ಟ್ರ ಧ್ವಜಾರೋಹಣ ಮಾಡಿರಲಿಲ್ಲ ರಾಷ್ಟ್ರಗೀತೆ ಹಾಡಿರಲಿಲ್ಲ ಹಾಗಾಗಿ ಪ್ರಜಾಪ್ರಭುತ್ವಕ್ಕಾಗಿ ಮೈಸೂರು ಚಲೋ ಕ್ರಾಂತಿರೂಪ ಪಡೆದುಕೊಳ್ಳುತ್ತದೆ

ಪ್ರಜಾಪ್ರಭುತ್ವಕ್ಕಾಗಿ ಪೋಲಿಸರ ಗುಂಡಿಗೆ ಎದೆಯೊಡ್ಡಿದ ರಾಮಸ್ವಾಮಿ:- ಅಂದು ಸೆಪ್ಟಂಬರ್ 24ರಂದು ಫೈವ್ ಲೈಟ್ ಸರ್ಕಲ್ (ರಾಮಸ್ವಾಮಿ ಸರ್ಕಲ್) ರೈಲ್ವೆ ನಿಲ್ದಾಣ ಮಹಾರಾಜ ಕಾಲೇಜು ಕಡೆಯಿಂದ ಮತ್ತು ಹಾರ್ಡ್ವೀಕ್ ಶಾಲೆ ದಿಕ್ಕಿನಿಂದ ವಿದ್ಯಾರ್ಥಿಗಳ ಚಳವಳಿ ದೊಡ್ಡ ಮಟ್ಟದಲ್ಲಿ ರಾಮಸ್ವಾಮಿ ವೃತ್ತಕ್ಕೆ ಸೇರಲು ಮುಂದಾಗುತ್ತದೆ, 13ವರ್ಷದ ಬಾಲಕ ರಾಮಸ್ವಾಮಿ ಪ್ರಜಾಪ್ರಭುತ್ವದ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆ ಹೋರಾಟದಲ್ಲಿ ಮುನ್ನುಗ್ಗುತ್ತಾನೆ, ಅಂದಿನ ನಾಗರಾಜರಾಯರು ಮೈಸೂರು ಸಂಸ್ಥಾನದ ಕಮೀಷನರ್ ಎರಡ್ಮೂರು ಬಾರಿ ಗುಂಪಿಗೆ ತಾಕೀತು ಮಾಡುತ್ತಾರೆ ಚಳವಳಿಯನ್ನು ನಿಲ್ಲಿಸಿ ಘೋಷಣೆ ಕೂಗದೆ ಹಿಂದಿರುಗಲು, ಆದರೆ ಹೋರಾಟವಿನ್ನೂ ತಾರಕಕ್ಕೇರುತ್ತದೆ, ಕಡೆಗೆ ಸ್ವತಃ ಫೈರಿಂಗ್ ಮಾಡಲು ಮುಂದಾದ ಕಮೀಷನರ್ ನಾಗರಾಜರಾಯರು ರಾಮಸ್ವಾಮಿ ಎದೆಗೆ ಗುಂಡನ್ನ ಹಾರಿಸಿಯೇ ಬಿಡುತ್ತಾರೆ, ರಾಮಸ್ವಾಮಿ ಮೃತ್ತ ಪಟ್ಟು ಬಿದ್ದ ಸ್ಥಳವೇ ಇಂದಿನ ರಾಮಸ್ವಾಮಿ ವೃತ್ತ ನಂತರ ಹೋರಾಟಗಳು ಇನ್ನಷ್ಟು ಕಾವೇರುತ್ತದೆ ದಿವಾನ್ ರಾಮಸ್ವಾಮಿ ಮೊದಳಿಯಾರ್ ತಂಬುಚೆಟ್ಟಿ ಮಾಡಿದ ಎಡವಟ್ಟಿಂದ ರಾಜಾಪ್ರಭುತ್ವ ಬೇಡ ಪ್ರಜಾಪ್ರಭುತ್ವ ಬೇಕು ಎಂದು ಆಗ್ರಹಿಸಿ ನಡೆದ ಮೈಸೂರು ಚಲೋ ಕಡೆಗೆ 1947 ಅಕ್ಟೋಬರ್ 24ರಂದು ನಮ್ಮ ಮೈಸೂರು ಸಂಸ್ಥಾನಕ್ಕೆ ಪ್ರಜಾಪ್ರಭುತ್ವದ ಸ್ವಾತಂತ್ರ್ಯ ಸಿಗುತ್ತದೆ, ತಂಜಾವೂರಿಗೆ ಆರ್ಕಾಟ್ ರೈಲಿನಲ್ಲಿ ಹಿಂದಿರುಗುತ್ತಾರೆ, ನೇತಾಜಿ ರವರ ಜೈಹಿಂದ್ ಕರೆಯಿಂದ ಪ್ರೇರೆಪಿತನಾಗಿದ್ದ ವಿದ್ಯಾರ್ಥಿ  ರಾಮಸ್ವಾಮಿಯ ಬಲಿದಾನ‌ ತ್ಯಾಗವನ್ನ ಮೈಸೂರಿನ ಜನರಿಗೆ ತಿಳಿಸಲು ಜಿಲ್ಲಾಡಳಿತ ನಗರಪಾಲಿಕೆ ಮಾಹಿತಿಯ ನಾಮಫಲಕಗಳನ್ನ  ರಸ್ತೆಯ ಬದಿಗಳಲ್ಲಿ ಅಮೃತ ಮಹೋತ್ಸವ ಆಚರಣೆಯಲ್ಲಿ ಅಳವಡಿಸಲು ಮುಂದಾಗಬೇಕಿದೆ, 

ರಾಮಸ್ವಾಮಿ ವೃತ್ತ ಮತ್ತು ಸುಬ್ಬರಾಯನಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಶಾಲಾ‌ಮಕ್ಕಳ ನೇತೃತ್ವದಲ್ಲಿ  ಸ್ವಾತಂತ್ರ್ಯಪೂರ್ವ ಮೈಸೂರಿನ‌ ಇತಿಹಾಸ ತಿಳಿಸುವ ಕಾರ್ಯಕ್ರಮಗಳನ್ನ ದಸರಾ ಸಂಧರ್ಭದಲ್ಲಾದರೂ ಆಯೋಜಿಸಿ ಗೌರಿಸುವಂತಾಗಲಿ ಜೈಹಿಂದ್.
ಅಜಯ್ ಶಾಸ್ತ್ರಿ

Post Comment

You May Have Missed