“ಯೂಥ್ ಜೋಡ ಬೂತ್ ಜೋಡೋ “ಕಾರ್ಯಕ್ರಮ ಉದ್ಘಾಟನೆ .
ಮೈಸೂರು ಅ 08 – ಇಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ದೇವರಾಜ ಅರಸು ಬ್ಲಾಕ್ ಮತ್ತು ಕೃಷ್ಣರಾಜ ಬ್ಲಾಕ್ ಒಳಗೊಂಡಂತೆ ರಾಷ್ಟ್ರೀಯ ಯುವ ಕಾಂಗ್ರೆಸ್ನ ಯೂಥ್ ಜೋಡ ಬೂತ್ ಜೋಡೋ ಕಾರ್ಯಕ್ರಮವನ್ನು ಕೃಷ್ಣರಾಜ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ ರವರು ಚಾಮುಂಡಿಪುರಂ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಯುವಕರು ಒಗ್ಗಟ್ಟಾಗಬೇಕೆಂದು ಮತ್ತು 40ರ ವಯಸ್ಸಿಗಿಂತ ಕಮ್ಮಿ ಇರುವ ಯುವಕರು 60ರಷ್ಟು ಇದ್ದು ಮುಂದೆ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಬೂತ್ ಮಟ್ಟದಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚೇತನ್, ದೊರೆರಾಜ್, ದೀಪಕ್ ಶಿವಣ್ಣ, ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಹರೀಶ್ ,ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪೈಲ್ವಾನ್ ಸುನಿಲ್, ಕೃಷ್ಣರಾಜ ಬ್ಲಾಕ್ ಅಧ್ಯಕ್ಷರಾದ ಹರ್ಷ, ಮತ್ತು ಮುಖಂಡರಾದ ಶ್ರೀಧರ್ ಇನ್ನಿತರರು ಪಾಲ್ಗೊಂಡಿದ್ದರು.

Post Comment