Loading Now

“ಜನಾಶ್ರಯ ಟ್ರಸ್ಟ್ ವತಿಯಿಂದ ಹನೂರಿನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ”

ಹನೂರು ಅ 08 : ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಜನಶ್ರಯ ಟ್ರಸ್ಟ್ ಹಾಗೂ ಹನೂರು ಬಿಜೆಪಿ ಮುಖಂಡ ಜನದ್ವನಿ ಬಿ.ವೆಂಕಟೇಶ್ ಋಣ ಸಂದಾಯ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಹನೂರು ಭಾಗದ ಜನರು ದೃಷ್ಟಿ ದೋಷದಿಂದ ಮುಕ್ತಿ ಹೊಂದಬೇಕು ಎಂಬ ಕಾಳಜಿಯಿಂದ ಜನ ಧ್ವನಿ ಬಿ ವೆಂಕಟೇಶ್ ರವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ ಹನೂರು ಪಟ್ಟಣದಲ್ಲಿ ಪ್ರತಿ ತಿಂಗಳು ಶಿಬಿರ ಆಯೋಜನೆ ಮಾಡುತ್ತಿದ್ದಾರೆ . ತಿಂಗಳ ಮೊದಲ ಭಾನುವಾರ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಈ ಪ್ರಯೋಜನವನ್ನು ಕ್ಷೇತ್ರದ ಎಲ್ಲಾ ಜನರು ಪಡೆದುಕೊಳ್ಳಬೇಕು ಎಂದು ಜನಾಶ್ರಯ ಟ್ರಸ್ಟ್ ನ ಪದಾಧಿಕಾರಿಗಳು ತಿಳಿಸಿದ್ದಾರೆ.

ಇಂದಿನ ಶಿಬಿರದಲ್ಲಿ 115 ಜನರು ತಪಾಸಣೆಗೆ ಒಳಗಾದರು. ಅದರಲ್ಲಿ 74 ಜನರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದು, ಅವರನ್ನು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆದುಯಲಾಯಿತು. ಹಾಗೆ ಹಿಂದಿನ ಶಿಬಿರದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 73 ಜನರಿಗೆ ಕನ್ನಡಕ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜನಾಶ್ರಯ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಹಾಜರಿದ್ದರು.

Post Comment

You May Have Missed