ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಹಾಸು ಮಾರಾಟ ಅಂಗಡಿ ಮಾಲೀಕನ ವಿರುದ್ಧ ರೈತ ಶಿವಕುಮಾರ್ ದೂರು.
ನರಸಾಪುರ : ಕೋಲಾರದ ಟಮಕ ಬಳಿ ಇರುವ ಗೌತಮ್ ಅಗ್ರಿಮಾರ್ಟ್ ಅಂಗಡಿಯ ಮಾಲೀಕ ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಹಾಸು(ಮಲ್ಚಿಂಗ್ ಪೇಪರ್) ನೀಡಿ ನನಗೆ ವಂಚಿಸಿರುತ್ತಾನೆ ಎಂದು ಅಂಗಡಿ ಮಾಲೀಕನ ವಿರುದ್ಧ ನರಸಾಪುರ ರೈತ ಶಿವಕುಮಾರ್ ಆರೋಪಿಸಿರುತ್ತಾನೆ,
ಗೌತಮ್ ಅಗ್ರಿ ಮಾರ್ಟ್ ಅಂಗಡಿಯಿಂದ ನನ್ನ ಜಮೀನಿನಲ್ಲಿ ಟೊಮೆಟೊ ಬೆಳೆಯಲು ಪ್ರತಿ ಕೆಜಿಗೆ 175 ರೂಗಳಂತೆ ಬಿಲ್ ಸಂಖ್ಯೆ 788 ಮತ್ತು 875 ರಲ್ಲಿ ಒಟ್ಟು 23.900 ರೂಗಳನ್ನು ನೀಡಿ ಪ್ಲಾಸ್ಟಿಕ್ ಮಲ್ಚಿಂಗ್ ಪೇಪರ್ ತರಲಾಗಿದ್ದು,
ಟೊಮೊಟೊ ಬೆಳೆಗೆ ಪ್ಲಾಸ್ಟಿಕ್ ಹಾಸು (ಮಲ್ಚಿಂಗ್ ಪೇಪರ್ ) ಹಾಕಿದ ಒಂದೇ ತಿಂಗಳಿಗೆ ನಾಶವಾಗಿ ಚಿಂದಿ ಆಗಿರುತ್ತದೆ, ಮಾರಾಟ ಮಾಡಿದ ಷರತ್ತಿನಂತೆ ಬಾಳಿಕೆ ಬಾರದ ಕಾರಣ ವ್ಯಾಪಾರಿ ಮಾಲೀಕರನ್ನು ಕೇಳಲು ಹೋದರೆ ಜೀವ ಬೆದರಿಕೆ ಹಾಕಿರುತ್ತಾನೆ,
ಬೆದರಿಸಿರುವ ಮತ್ತು ಕಳಪೆ ಸಾಮಗ್ರಿ ನೀಡಿರುವ ಅವರ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ರವರಿಗೆ ಹಾಗೂ ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣೆಯ ಆರಕ್ಷಕ ಉಪ ನೀರಿಕ್ಷಕರಿಗೆ
ದೂರು ನೀಡಿ ಮನವಿ ಸಲ್ಲಿಸಲಾಗಿತ್ತು.
ಮನವಿಗೆ ಸ್ಪಂದಿಸಿದ ಪೋಲಿಸ್ ವರಿಷ್ಠಾಧಿಕಾರಿ ನಾನಾ ಕಡೆಗಳಿಂದ ಮಲ್ಚಿಂಗ್ ಪೇಪರ್ ನ ಗುಣಮಟ್ಟ ಮತ್ತು ಅದರ ಬಾಳಿಕೆಯ ವಿಧಾನಗಳನ್ನು ತಿಳಿದುಕೊಂಡು ಕೂಡಲೇ ಅಂಗಡಿಯ ಮಾಲೀಕನ ವಿರುದ್ಧ ದೂರು ದಾಖಲಿಸಿ ರೈತನ ಜಮೀನಿನಲ್ಲಿರುವ ಮಲ್ಚಿಂಗ್ ಪೇಪರ್ ಲ್ಯಾಬ್ ಗೆ ಕಳಿಸುವಂತೆ ಗಲ್ ಪೇಟೆ ಸಬ್ ಇನ್ಸ್ಪೆಕ್ಟರ್ ಗೆ ನಿರ್ದೇಶನ ನೀಡಲಾಗಿದ್ದು. ಅದರಂತೆ ಗಲ್ ಪೇಟೆ ಸಬ್ ಇನ್ಸ್ಪೆಕ್ಟರ್ ಗೌತಮ್ ಅಗ್ರಿಮಾರ್ಟ್ ಕಂಪನಿಯ ವಿರುದ್ಧ ಕೋಲಾರ ನಗರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ 68/2022 ಕಲಂ 506, 420 ಜೆಪಿಸಿ ರೀತ್ಯ ಪ್ರಕರಣ ಕಾನೂನು ದಾಖಲಿಸಿಕೊಂಡು ರೈತರ ಜಮೀನನ್ನು ಪರಿಶೀಲಿಸಿ ಅಲ್ಲಿದ್ದಂತಹ ಕಳಪೆ ಗುಣಮಟ್ಟದ ಮಲ್ಚಿಂಗ್ ಪೇಪರ್ ಲ್ಯಾಬ್ ಗೆ ಕಳಿಸಲು ತೆಗೆದುಕೊಂಡು ಹೋಗಿರುತ್ತಾರೆ
ಟೊಮೊಟೊ ಬೆಳೆಯಲ್ಲಿ ಮೋಸ ಹೋಗಿರುವ ರೈತ ಶಿವಕುಮಾರ್ ಮಾತನಾಡಿ ನಾವು ರೈತರಾಗಿದ್ದು ನಮ್ಮ ಜಮೀನುಗಳಲ್ಲಿ ಟೊಮೊಟೊ ಬೆಳೆಯುವ ಸಲುವಾಗಿ ಗಿಡಗಳ ರಕ್ಷಣೆಗಾಗಿ ಪ್ಲಾಸ್ಟಿಕ್ ಸೀಟು ಅಗತ್ಯವಾಗಿದ್ದ ಕಾರಣ ನಾವುಗಳು ಕೋಲಾರ ನಗರದ ಗೌತಮ್ ಅಗ್ರಿಮಾರ್ಟ್ ರವರಿಂದ ಅವರು ಹೇಳಿದಂತೆ ಎರಡು ಬೆಳೆಗಳಿಗೆ ಅನುಕೂಲವಾಗದಂತೆ ಇರುವ ಪ್ಲಾಸ್ಟಿಕ್ ಹಾಸನ್ನು ಒಂದು ಕೆ ಜಿ ಗೆ 175 ರೂನಂತೆ ಬಿಲ್ ಸಂಖ್ಯೆ 788 ರಲ್ಲಿ 17,100 ಮತ್ತು ಬಿಲ್ ಸಂಖ್ಯೆ900 ರೂಗಳನ್ನು ನೀಡಿ 875 ರಲ್ಲಿ 6 800 ರೂಗಳನ್ನು ಸಂದಾಯ ಮಾಡಿ ಪೇಪರ್ ಖರೀದಿ ಮಾಡಲಾಗಿತ್ತು,
ಆದರೆ ಇವರು ಕೊಟ್ಟ ಸರಕನ್ನು ಜಮೀನಿನ ತೋಟದಲ್ಲಿ ಹಾಸಿ ಒಂದೇ ತಿಂಗಳಿಗೆ ಹಾಸು ನಾಶವಾಗಿ ಚಿಂದಿಯಾಗುತ್ತಿದೆ.
ಇದರಿಂದ ಈ ವ್ಯಾಪಾರಿ ನಮಗೆ ಮೋಸ ಮಾಡುವ ಮೂಲಕ ರೈತರಾದ ನಮ್ಮ ಹಣ ಲಪಾಟಿಯಿಸಿ ಬೆಳೆಗೆ ನಷ್ಟವನ್ನು ಉಂಟು ಮಾಡುವ ಕೆಲಸಕ್ಕೆ ಕೈಹಾಕಿರುತ್ತಾರೆ, ಇವರು ಎರಡು ಬೆಳೆಗಳಿಗೆ ಹಾಸು ಬರುತೆಂದು ತಿಳಿಸಿರುವ ವ್ಯಾಪಾರಿ ಕನಿಷ್ಠ ಒಂದು ಬೆಳೆಗೂ ಬಾಳಿಕೆ ಬಾರದಂತೆ ಮಾಡಿರುತ್ತಾರೆ.
ಈ ಸಂಬಂಧವಾಗಿ ಸದರಿ ಮಾಲೀಕರ ಬಳಿ ಹೋಗಿ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸಿಕೊಡುವಂತೆ ಕೋರಿದರು.
ಪ್ರಯೋಜನವಾಗಿಲ್ಲ ಜೊತೆಗೆ ಗೌತಮ್ ಅಗ್ರಿಮಾಟ್ ಮಾಲೀಕರು ಅಸಭ್ಯವಾಗಿ ವರ್ತಿಸಿ ನಾನು ಯಾವುದೇ ಬದಲಾವಣೆ ಮಾಡಿಕೊಡುವುದ್ದಿಲ್ಲವೆಂದು ಬೆದರಿಸಿದ್ದು. ಇನ್ನು ನೀವು ಮುಂದುವರಿದು ಮಾತನಾಡಿದರೆ ನಾನು ಏನು ಬೇಕಾದರು ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ,
ರೈತರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ಸದರಿ ವ್ಯಾಪಾರಿ ಮೇಲೆ ಕಾನೂನು ರೀತಿ ಕ್ರಮಕೈಗೊಂಡು ರೈತರಾದ ನಮಗೆ ನಷ್ಟ ಪರಿಹಾರ ನ್ಯಾಯ ಕೊಡಿಸಿಕೊಡುವ ಮೂಲಕ ಕಾನೂನು ರೀತಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಈ ಗಲ್ ಪೇಟೆ ಸಬ್ ಇನ್ಸ್ಪೆಕ್ಟರ್ ಅರುಣ್ ಗೌಡ ಪಾಟೀಲ್, ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ದಿನ್ನೆ ಹೊಸಳ್ಳಿ ರಮೇಶ್, ರೈತ ಸಂಘದ ಮುಖಂಡರುಗಳಾದ ಮಂಜು, ದಿನ್ನೆ ಹೊಸಳ್ಳಿ ಲೋಕೇಶ್, ವಿಜಿ ಹಾಗೂ ಇತರರು ಇದ್ದರು.

Post Comment