ರಕ್ತದಾನ ಮಾಡುವ ಮೂಲಕ ಕಾರ್ಗಿಲ್ ವಿಜಯ್ ದಿವಸ್ ಆಚರಣೆ.
ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಬ್ಲಡ್ ಆನ್ ಕಾಲ್ ಕ್ಲಬ್
ವತಿಯಿಂದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದ 30ಕ್ಕೂ ಹೆಚ್ಚು ಯುವಕ ಯುವತಿಯರು ಸ್ವಯಂಪ್ರೇರಿತ ಯೋಧರನ್ನು ಸ್ಮರಿಸುತ್ತಾ ರಕ್ತದಾನ ಮಾಡಿದರು
ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್
ದೇಶ ಕಾಯುವ ಸೈನಿಕರು ಪ್ರಾಣವನ್ನು ದೇಶಕ್ಕಾಗಿ ಮುಡಿಪಾಗಿಡುತ್ತಾರೆ. ಯುವ ಸಮೂಹ ಕೂಡ ದೇಶದ ಪ್ರಗತಿಗಾಗಿ ತ್ಯಾಗಮನೋಭಾವ ಬೆಳೆಸಿಕೊಳ್ಳಬೇಕು ಎಂದು
‘ಗಡಿ ಪ್ರದೇಶದಲ್ಲಿ ನಮ್ಮ ಸೈನಿಕರು ಶತ್ರು ರಾಷ್ಟ್ರಗಳಿಂದ ದೇಶವನ್ನು ರಕ್ಷಣೆ ಮಾಡುತ್ತಿದ್ದಾರೆ. ಇದರಿಂದ ನಾವು ದೇಶದ ಒಳಗಡೆ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದೇವೆ’
ಇದೇ ರೀತಿ ಸಾವಿರಾರು ಯೋಧರು ಸಹ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ಮಾಡಿದ್ದಾರೆ. ಇಂತಹವರ ಸ್ಮರಣೆ ಅಗತ್ಯವಾಗಿದೆ’, ‘ಯುವಪೀಳಿಗೆ ದೇಹಮುಖಿಯಾಗಬಾರದು; ಬದಲಿಗೆ ದೇಶಮುಖಿಯಾಗಬೇಕು’
ದೇಶದ ಅಭಿವೃದ್ಧಿಗೆ ಯುವಪೀಳಿಗೆ ಶ್ರಮಿಸಬೇಕು. ದೇಶವನ್ನು ಪ್ರೀತಿಸಬೇಕು. ಕೊಡುಗೆ ನೀಡಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು ,ಭ್ರಷ್ಟಚಾರಕ್ಕೆ ಒತ್ತು ನೀಡಿದರೆ ದೇಶ ಹಾಳಾಗುತ್ತದೆ.
ಜಾತಿಗೆ ಅಂಟಿದರೆ ಧರ್ಮ ಹಾಳಾಗುತ್ತದೆ. ಸಂಶಯಪಟ್ಟರೆ ದಾಂಪತ್ಯ ಹಾಳಾಗುತ್ತದೆ ಎನ್ನುವುದನ್ನು ಯುವಪೀಳಿಗೆ ಅರ್ಥಮಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹಾಗೂ ಮುತ್ತಣ್ಣ
ಬ್ಲಡ್ ಆನ್ ಕಾಲ್ ಕ್ಲಬ್ ನ ಆನಂದ್ ಮಂಡೋತ್, ದೇವೇಂದ್ರ ಪರಿಹಾರೀಯ,ಡಾ.ಮಮತಾ , ವಿದ್ಯಾ, ಗೌತಮ್, ವಿಕಾಶ್, ತ್ಯಾಗರಾಜು, ಸೋನಾಲ್ ,ಆಶಾ, ಸುಚಿಂದ್ರ , ಇನ್ನಿತರರು ಹಾಜರಿದ್ದರು.

Post Comment