Loading Now

ಹನೂರು ತಹಶೀಲ್ದಾರ್ ಕಚೇರಿಗೆ ಉಪವಿಭಾಗಧಿಕಾರಿ ಅವರು ಬೇಟಿ ನೀಡಿದರು .

ಹನೂರು ಜು 26 : ಸರ್ಕಾರದ ಆದೇಶದಂತೆ ಪ್ರತಿಯೊಂದು ತಾಲೋಕಿಗೆ ತಿಂಗಳಿನ ಕೊನೆಯ ದಿನಾಂಕದಂದು ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಆದೇಶದಂತೆ ಇಂದು ಜಿಲ್ಲಾಧಿಕಾರಿ ಅವರ ಪರವಾಗಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಯವರು ಹನೂರು ತಾಲೂಕು ಕಚೇರಿಗೆ ಭೇಟಿ ನೀಡಿದರು.

ಹನುರು ಪಟ್ಟಣದ ತಹಸೀಲ್ದಾರ್ ಕಚೇರಿಗೆ ಉಪವಿಭಾಗಾಧಿಕಾರಿ ಗೀತಾ ಅವರು ಭೇಟಿ ನೀಡಿ ತಹಸೀಲ್ದಾರ್ ಕಚೇರಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪರಿಶೀಲಿಸಿದರು.

ನಂತರ ಹನೂರು ಗ್ರಾಮದ ಸುತ್ತಮುತ್ತಲಿನ ಸಾರ್ವಜನಿಕರು, ಪೌತಿ ಖಾತೆ, ಲೊಕ್ಕನಹಳ್ಳಿ,ರಾಮಪುರ ಹೋಬಳಿಗಳಿಗೆ ಸಂಬಂಧಿಸಿದಂತೆ ದರ್ಕಾಸ್ ಕಡತದ ಬಗ್ಗೆ ಇನ್ನು ಮುಂತಾದ ತಮ್ಮ ಅಹವಾಲು ಗಳನ್ನು ಅರ್ಜಿಗಳ ಮೂಲಕ ಉಪವಿಭಾಗಾಧಿಕಾರಿ ಅವರಿಗೆ ಸಲ್ಲಿಸಿದರು.

ಉಪ ವಿಭಾಗಾಧಿಕಾರಿ ಅವರು ಮಾತನಾಡಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬಮಾಡದೆ ಜರೂರಾಗಿ, ಸಾರ್ವಜನಿಕರಿಗೆ ಕೆಲಸಗಳನ್ನು ಪೂರ್ಣಪ್ರಮಾಣದಲ್ಲಿ ಮಾಡಿಕೊಳ್ಳಬೇಕೆಂದು ತಹಸಿಲ್ದಾರ್ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಹನೂರು ಪಟ್ಟಣ ತಹಸಿಲ್ದಾರ್ ಆನಂದಯ್ಯ, ರಾಮಾಪುರ ಉಪತಹಸೀಲ್ದಾರ್ ಸುರೇಖಾ, ರಾಜಸ್ವನಿರೀಕ್ಷಕರಾದ, ಶಿವಕುಮಾರ್, ಮಾದೇಶ್, ಮಹದೇವಸ್ವಾಮಿ, ಶಿರಸ್ತೇದಾರ್ ನಾಗೇಂದ್ರ, ವೆಂಕಟೇಶ್, ಗ್ರಾಮಲೆಕ್ಕಿಗರು, ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Post Comment

You May Have Missed