Loading Now

ನಂಜನಗೂಡು ನಗರಸಭೆಯಲ್ಲಿ ಅಧಿಕಾರಿಗಳಿಗೆ ಗೂಬೆ ಕಾಟವಂತೆ ಸದಸ್ಯರ ಆರೋಪ.

ನಂಜನಗೂಡು ಜು23, ನಗರಸಭೆಯಲ್ಲಿ ನೆನ್ನೆನಡೆದ ಸಾಮಾನ್ಯ ಸಭೆಯಲ್ಲಿ ನಗರಸಭಾ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಪ್ರದೀಪ್ ಕುಮಾರ್ ಮಾತನಾಡಿ ನಂಜನಗೂಡು ನಗರಸಭೆಯು ಸೇರಿದಂತೆ ತಾಲೂಕಿನ ಅಧಿಕಾರಿಗಳಿಗೆ ಗೂಬೆ ಕಾಟವಂತೆ ಎಂಬ ಬಾಂಬ್ ಸಿಡಿಸಿದ್ದಾರೆ.

ನಗರಸಭಾಧ್ಯಕ್ಷ ಮಹಾದೇವಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯ ಪ್ರದೀಪ್ ಕುಮಾರ್ ಮಾತನಾಡಿ ನಗರಸಭೆಯ ಎಂಟು ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಾರಸಗಟ್ಟಾಗಿ ವರ್ಗಾವಣೆ ಮಾಡಿರುವುದನ್ನು ಕುರಿತು ಪ್ರಶ್ನಿಸಿದಾಗ ಅದಕ್ಕೆಅಧ್ಯಕ್ಷರು ನಗರಸಭೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕಿ ಯಾವುದೇ ಕೆಲಸಗಳು ಆಗುತ್ತಿರಲಿಲ್ಲ ಅದಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು ಅದಕ್ಕೆ ಅಧ್ಯಕ್ಷರನ್ನು ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದ ಸದಸ್ಯರು ಮುಂದುವರಿದು ಮಾತನಾಡಿ ನಗರ ಸಭೆಯು ಸೇರಿದಂತೆ ತಾಲೂಕಿನಾದ್ಯಂತ ಅಧಿಕಾರಿಗಳಿಗೆ ಗೂಬೆ ಕಾಟವಿದೆಯಂತೆ ಅದರಿಂದಾಗಿ ಕೆಲಸ ಕಾರ್ಯಗಳು ನಡೆಯದೆ ಭ್ರಷ್ಟಾಚಾರದಲ್ಲಿ ತೊಡಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆಲವು ನೊಂದ ಅಧಿಕಾರಿಗಳೇ ನನ್ನ ಜತೆ ಖುದ್ಧು ತಮ್ಮ ಅಳಲು ತೋಡಿಕೊಂಡಿದ್ದಾರೆ ಹಾಗಾಗಿ ಯಾರು ಆ ಗೂಬೆ ?ಎಂದು ಸಭೆಯಲ್ಲಿ ತಿಳಿಸುತ್ತಿದ್ದಂತ್ತೆ ಅಧ್ಯಕ್ಷರಾದಿಯಾಗಿ ಸದಸ್ಯರುಗಳು ಅಧಿಕಾರಿಗಳು ಸೇರಿದಂತೆ ಇಡೀ ಸಭೆಯೇ ಒಂದು ರೀತಿ ಸ್ತಬ್ಧ ವಾಗಿ ಮೌನಕ್ಕೆ ಶರಣಾಯಿತು ಆದರೂ ನಂಜನಗೂಡಿನ ಅಧಿಕಾರಿಗಳಿಗೆ ಕಂಟಕವಾಗಿರುವ ಆ ಗೂಬೆ ಯಾವುದು ಇದರ ಬಗ್ಗೆ ತನಿಖೆ ನಡೆಸಿ ನಂಜನಗೂಡಿನಲ್ಲಿ ಅಧಿಕಾರಿಗಳು ಉತ್ತಮ ಕೆಲಸ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ವಲಯದಲ್ಲಿ ಈಗ ಗೂಬೆಯ ಕಾಟದ್ದೇ ಚರ್ಚೆಗೆ ಗ್ರಾಸವಾಗಿದ್ದು ಅದು ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ.

Post Comment

You May Have Missed