Loading Now

ಬದುಕುನುದ್ದಕ್ಕೂ ಕನ್ನಡವನ್ನು ಕನವರಿಸಿದವರು -ಆಲೂರು :ಡಾ॥ವೈ ಡಿ ರಾಜಣ್ಣ .

ಮೈಸೂರು – ಹಸಿರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂದು ಕೂಗಿ ಹೇಳಿದರೂ ಆಲೂರು ವೆಂಕಟರಾಯರು ,ಕರ್ನಾಟಕವೆಂಬ ಹೆಸರಾಗಿದೆ -ಆದರೆ ಕನ್ನಡ ಇನ್ನೂ ಹಸಿರಾಗಬೇಕಿದೆ,ಆಲೂರು ವೆಂಕಟರಾಯರ ಪಾತ್ರ ಸ್ಮರಣೀಯರು ಮತ್ತೆ ಹುಟ್ಟಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ॥ವೈ ಡಿ ರಾಜಣ್ಣ ಅಭಿಪ್ರಾಯಪಟ್ಟರು , ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ 143ನೇ ಜಯಂತಿ ಅಂಗವಾಗಿ ಎಂ ಜಿ ರಸ್ತೆಯಲ್ಲಿರುವ ನ್ಯಾಯಾಲಯದ ಮುಂಭಾಗ ಮನುವನ ಉದ್ಯಾನವನದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಆಲೂರು ವೆಂಕಟರಾಯರ ಒಂದು ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ. ಪತ್ರಿಕೋದ್ಯಮ ಕ್ಷೇತ್ರಕ್ಕೆ ಸ್ವತಂತ್ರ ಪೂರ್ವದಲ್ಲೇ ತಮನ್ನ ಸಮರ್ಪಿಸಿಕೊಂಡವರು ಆಲೂರು ವೆಂಕಟರಾಯರು .

ಕನ್ನಡ ನಮ್ಮ ಉಸಿರಾಗದ ಹೊರತು ಕನ್ನಡ ಸಂಸ್ಕೃತಿಗೆ ಉಳಿಗಾಲವಿಲ್ಲ ಎಂದು ಮನಗೊಂಡಿದ್ದ ಆಲೂರರು ಬದುಕಿನ ಉದ್ದಕ್ಕೂ ಕನ್ನಡಕ್ಕಾಗಿ ಕನವರಿಸಿದವರು,1907 ರಲ್ಲೇ ಕನ್ನಡ ಗ್ರಂಥ ಕರ್ತರ ಸಮ್ಮೇಳನ ವನ್ನು ಆಯೋಜಿಸಿದ್ದರು, ಕನ್ನಡಿಗರು ಹೈದರಾಬಾದ್ ಬಾಂಬೆ ಮದ್ರಾಸ್ ಮೈಸೂರು ಪ್ರಾಂತ್ಯದಲ್ಲಿ ಹಂಚಿ ಹೋಗಿದ್ದಾಗ.ಆ ಎಲ್ಲಾ ಕನ್ನಡಿಗರು ಕರ್ನಾಟಕದ ಹೆಸರಿನಲ್ಲಿ ಐಕ್ಯವಾಗಬೇಕು. ಕನ್ನಡಿಗರಿಗೊಂದು ಅಸ್ಮಿತೆ ಇರಬೇಕು ಎಂದು ಹಂಬಲಿಸಿದವರು .ಅವರ ಬದುಕಿನ ಗುರಿ ಕರ್ನಾಟಕದ ಏಕೀಕರಣ ಆ ಮೂಲಕ ವಿಶಾಲ ಕರ್ನಾಟಕ ರಾಜ್ಯದ ಅಸ್ತಿತ್ವ ಆಗಬೇಕು ಎಂಬುದಾಗಿತ್ತು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ್ ಮಾತನಾಡಿ ಕನ್ನಡದ ಮಹಾನ್ ಚೇತನ, ಕನ್ನಡ ಕನ್ನಡಿಗ ಕರ್ನಾಟಕ ಇರುವತನಕ ಮರೆಯದ ಮರೆಯಲಾಗದ ವ್ಯಕ್ತಿತ್ವ,25ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ ಆಲೂರು ವೆಂಕಟರಾಯರು ಬಾಲಗಂಗಾಧರ ತಿಲಕರ ಗೀತಾ ರಹಸ್ಯವನ್ನ ಕನ್ನಡಕ್ಕೆ ಅನುವಾದಿಸಿ ಕನ್ನಡ ಸಾಹಿತ್ಯಕ್ಕೆ ಘನತೆ ಗೌರವ ತಂದುಕೊಟ್ಟವರು ಎಂದರು.

ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ ,
ಕರ್ನಾಟಕದ ಏಕೀಕರಣ ಚಳುವಳಿಗೆ ಮುಂಚೂಣಿ ನಾಯಕರಾಗಿದ್ದ ಆಲೂರು ವೆಂಕಟರಾಯರು ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪನೆ ,ಕರ್ನಾಟಕ ವಿಶ್ವವಿದ್ಯಾಲಯದ ಕಲ್ಪನೆ ,ನಾಡಹಬ್ಬದ ಯೋಜನೆ ,ವಿಜಯನಗರ ಮಹೋತ್ಸವ..ಹಾಗೆ ಕನ್ನಡ ಸಾಂಸ್ಕೃತಿಕ ವಾಗಿ ಹಲವು ಆಯಾಮಗಳಲ್ಲಿ ವಿಸ್ತಾರಗೊಳ್ಳಬೇಕು ಎಂದು ಕನಸು ಕಂಡವರು .ಆ ಮೂಲಕ ಜನ ಮಾನಸ ದಲ್ಲಿ ಕನ್ನಡದ ದಿಕ್ಸೂಚಿಯಾಗಿ ಕಂಗೊಳಿಸಿದವರು,ಆಲೂರು ವೆಂಕಟರಾಯರು ಅವರ ಸ್ಮರಣೆಯ ಕನ್ನಡದ ರೋಮಾಂ ಚನ ಅವರ ಕನ್ನಡದ ಕೆಚ್ಚು ನಮ್ಮೆಲ್ಲರಿಗೂ ರೋಮಾಂಚನ ಉಂಟುಮಾಡುವಂತಹುದು ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಾ॥ ವೈ ಡಿ ರಾಜಣ್ಣ ,ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರಾದ ಚಂದ್ರಶೇಖರ್ ,ಕಾಂಗ್ರೆಸ್ ಹಿರಿಯ ಮುಖಂಡ ಎನ್ ಎಂ ನವೀನ್ ಕುಮಾರ್, ನಗರ ಪಾಲಿಕಾ ಸದಸ್ಯರಾದ ಸೌಮ್ಯಾ ಉಮೇಶ್ ,ಜಗದೀಶ್ ,ವಕೀಲರ ಸಂಘದ ಕಾರ್ಯದರ್ಶಿ ಉಮೇಶ್,
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,ಅಪೂರ್ವ ಸುರೇಶ್ , ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಶಿವರಾಜ್ ,ರಾಕೇಶ್ ಕುಂಚಿಟಿಗ ,ಸುಚೀಂದ್ರ ,ಚೇತನ್ ಕಾಂತರಾಜು ,ರಂಗನಾಥ್,
ಚಕ್ರಪಾಣಿ ,ಪುರುಷೋತ್ತಮ್ ,ಶಿವಕುಮಾರ್ ,ಜೀವನ್ ,ಹಾಗೂ ಇನ್ನಿತರರು ಹಾಜರಿದ್ದರು.

Post Comment

You May Have Missed