Loading Now

ದೇಶ ಸೇವೆಗೆ ಅಗ್ನಿಪಥ್ ಯೋಜನೆ.

ತಿ.ನರಸೀಪುರ-ಅಗ್ನಿಪಥ್ ಯೋಜನೆ ದೇಶ ಸೇವೆ ಮಾಡಲು ಒಂದು ಅತ್ಯುತ್ತಮ ಅವಕಾಶ ಎಂದು ಚಿಕ್ಕ ಮಂಗಳೂರು ಜಿಲ್ಲೆ ಸಾಮಾಜೀಕ ಕಾರ್ಯಕರ್ತ ಪುಣ್ಯಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಗಳ ಪದವಿ ಕಾಲೇಜಿನ ಸಭಾಂಗಣದಲ್ಲಿ ತಾಲ್ಲೂಕು ಬಿಜೆಪಿ ಯುವಮೋರ್ಚಾ ವಿದ್ಯಾರ್ಥಿಗಳ ಜೊತೆ ಹಮ್ಮಿಕೊಂಡಿದ್ದ
ಅಗ್ನಿಪಥ್ ಯೋಜನೆಯ ಸತ್ಯ ಮಿತ್ಯ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪುಣ್ಯಪಾಲ್ ಅಗ್ನಿಪಥ್ ಯೋಜನೆ ಅಗ್ನಿವೀರರ ಗನತೆ ಮತ್ತು ಬದುಕನ್ನು ಕಟ್ಟಿ ಕೊಡಲಿದೆ ಎಂದರು.

ಸೇನೆಯಲ್ಲಿ ಅಗ್ನಿವೀರರಾಗಿ ಸೇರಿಕೊಂಡ ಮೇಲೆ ನಮಗೆ ಸಂಬಳ ಸಿಕ್ಕರು ಅದನ್ನು ನೌಕರಿ ಎಂದು ಪರಿಗಣಿಸಬಾರದು ಬದಲಿಗೆ ಮಾತೃ ಮತ್ತು ಮಾತೃ ದೇಶದ ಸೇವೆ ಮಾಡಲು ಸಿಕ್ಕಿರುವ ಅದ್ಭುತ ಅವಕಾಶ ಎಂದು ಬಾವಿಸಬೇಕು ಈ ಅವಕಾಶವನ್ನು ನಮ್ಮ ರಾಷ್ಟ್ರದ ಯುವಕರು ಬಳಸಿಕೊಳ್ಳ ಬೇಕು ಯಾರು ಯಾರಿಗೆ ಅಗ್ನಿಪಥ್ ಯೋಜನೆಗೆ ಸೇರಿಕೊಳ್ಳಲು ಮನಸ್ಸು ಇದೇಯೂ ಅವರೆಲ್ಲರು ಸೇರಿಕೊಳ್ಳಬೇಕು ಎಂದರು.

ಮುಂದುವರಿದು ಮಾತನಾಡಿದ ಪುಣ್ಯಪಾಲ್ ಕಳೆದ 75 ವರ್ಷಗಳಲ್ಲಿ ದೇಶದಲ್ಲಿ ಯಾವ ಯಾವ ಸುಧಾರಣೆ ಬರಬೇಕೆಂದು ಜನಮಾನಸದಲ್ಲಿತ್ತೊ ಅವೇಲ್ಲ ಈಗ ಈಡೇರುತ್ತಿವೆ ಸೈನ್ಯ ಸುಧಾರಣೆ ಆಗಲಿದೆ ಒಂದು ವರ್ಷದಲ್ಲಿ 45 ಸಾವಿರ ಯವಕರನ್ನು ಅಗ್ನಿವೀರರಾಗಿ ಆರ್ಹತೆಯಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ರಕ್ಷಣಾ ಸಚಿವರು
ಹೇಳಿದ್ದಾರೆ ಈ ಯೋಜನೆಯಿಂದ ದೇಶದ ಸೈನ್ಯ ನೂರಾರು ವರ್ಷ ಶಸಕ್ತವಾಗಿರಲು ಅವಕಾಶವಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ಗ್ರಾಮಾಂತರ ಅಧ್ಯಕ್ಷೆ ಮಂಗಳ ಸೋಮಶೇಖರ್ ಬಿಜೆಪಿ ಯುವಮೋರ್ಚಾ ಅಧ್ಯಕ್ಷರುಗಳಾದ ಕುರುಬೂರು ಶಿವು,ಮೋಹನ್, ಮೋಹನ್, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಬ್ಬೆಹುಂಡಿ ಶಿವಕುಮಾರ್, ಪುರಸಭೆ ಸದಸ್ಯ ಎಸ್ .ಕೆ.ಕಿರಣ್ , ರಂಗುನಾಯಕ, ವೆಂಕಟರಣ ಶೆಟ್ಟಿ, ಯುವ ಮೋರ್ಚ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಿಜಯಕುಮಾರ್ , ತಾಲ್ಲೂಕು ಉಪಾಧ್ಯಕ್ಷ ಸಿ.ಬಿ.ಹುಂಡಿ ಸಿದ್ದೇಶ್ ,ಹರೀಶ್ ,ಶಾಮ್ ,ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Post Comment

You May Have Missed