Loading Now

ಕಾಂಗ್ರೆಸ್ ನಿಂದ RSS ಚಡ್ಡಿ ಸುಟ್ಟಿರುವ ಘಟನೆಯನ್ನು ತಾಲ್ಲೂಕು ಎಸ್ಸಿ ಮೋರ್ಚಾ ಖಂಡನೆ.

ಕಾಂಗ್ರೆಸ್ ಪಕ್ಷ ಆರ್.ಎಸ್.ಎಸ್. ಚಡ್ಡಿ ಸುಟ್ಟಿರುವ ಘಟನೆಯನ್ನು ತಾಲ್ಲೂಕು ಬಿಜೆಪಿ ಎಸ್ಸಿ ಮೋರ್ಚಾ ಖಂಡಿಸಿ ಪ್ರತಿಭಟನೆ ನೆಡಸಿತು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ನಡೆಯನ್ನು ಖಂಡಿಸಿ ತಾಲ್ಲೂಕು ಎಸ್ಸಿ ಮೋರ್ಚಾದ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಚಡ್ಡಿ ಸಂಗ್ರಹಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮಾತನಾಡಿದ ಎಸ್ಸಿ ಮೊರ್ಚಾ ತಾಲ್ಲೂಕು ಅಧ್ಯಕ್ಷ ಸೋಸಲೆ ಬಡ್ಡು ಶಿವಕುಮಾರ್ ಕಾಂಗ್ರೆಸ್ ಪಕ್ಷ ಆರ್.ಎಸ್.ಎಸ್. ಚಡ್ಡಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ, ಆರ್.ಎಸ್. ಎಸ್.ಬಗ್ಗೆ ಕಿಳು ಮಟ್ಟದ ಮಾತನಾಡುತ್ತಿರುವ ಕಾಂಗ್ರೇಸ್ ಪಕ್ಷದ ನಾಯಕರಿಗೆ ಶೋಭೆಯಲ್ಲ ದೇಶಕ್ಕಾಗಿ ಕೆಲಸ ಮಾಡುತ್ತಿರುವುದು ಆರ್.ಎಸ್.ಎಸ್.ಮಾತ್ರ ಕಾಂಗ್ರೇಸ್ ಪಕ್ಷ ಅಲ್ಲ ಎಂದು ವಾಗ್ದಾಳಿ ನೆಡಸಿದರು.

ಈ ದೇಶದಲ್ಲಿ ಆರ್.ಎಸ್.ಎಸ್. ಸಂಘಟನೆ ಒಂದು ಬೃಹತ್ ಸಂಘಟನೆಯಾಗಿ ದೇಶ ಕ್ಕೋಸ್ಕರ ಸೇವೆ ಸಲ್ಲಿಸುತ್ತಿದೆ.ನೆರೆ, ಪ್ರವಾಹ, ಪ್ರಕೃತಿ ವಿಕೋಪ ಸಮಯದಲ್ಲಿ ಸ್ವಯಂ ಪ್ರೇರಿತವಾಗಿ ಜನರ ಜೊತೆ ನಿಲ್ಲುತ್ತದೆ ಇಂತಹ ದೇಶ ಪ್ರೇಮ ಸಂಘಟನೆಯನ್ನು ಹಿಯಾಳಿಸುವುದು ಸರಿಯಲ್ಲ ಎಂದರಲ್ಲದೆ ಪ್ರತಿನಿತ್ಯ ಭಾರತಾಂಬೆಯ ಸೇವೆ ಸಲ್ಲಿಸುತ್ತಿರುವ ಆರ್.ಎಸ್.ಎಸ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗಿಲ್ಲ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾ ಪದಾಧಿಕಾರಿಗಳು ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು.

Post Comment

You May Have Missed