ಕರ್ನಾಟಕದ ಭವ್ಯ ಭವಿಷ್ಯ ನಿಮ್ಮ ಆಶೀರ್ವಾದದಿಂದ ಪೂರ್ಣಗೊಳ್ಳಲಿದೆ-ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ದಿಗೆ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು 200 ಕೋಟಿಗಿಂತ ಹೆಚ್ಚು ಅನುದಾನ ಬಿಡುಗಡೆ-ವಸತಿ ಸಚಿವ ವಿ.ಸೋಮಣ್ಣ ,ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ವಾರ್ಡ್ ನಲ್ಲಿ ನೂತನವಾಗಿ ನಿರ್ಮಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂಡಲಪಾಳ್ಯ ವಾರ್ಡ್ ನಲ್ಲಿ ನೆಲಮಟ್ಟದ ಜಲಸಂಗ್ರಹಾಗಾರ ಹಾಗೂ ಕಾವೇರಿಪುರ ನಾಡಪ್ರಭು ಕೆಂಪೇಗೌಡ ಬಹುಪಯೋಗಿ ಕಟ್ಟಡವನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ವಸತಿ ಸಚಿವರಾದ ವಿ.ಸೋಮಣ್ಣರವರು,ತೋಟಗಾರಿಕೆ ಸಚಿವರಾದ ಮುನಿರತ್ನರವರು,ವಿಧಾನಪರಿಷತ್ ಸದಸ್ಯರುಗಳಾದ ಅ.ದೇವೇಗೌಡ,ಪುಟ್ಟಣ್ಣ,
ಆಯುಕ್ತರಾದ ತುಷಾರ್ ಗಿರಿನಾಥ್,ರಾಜ್ಯ ಬಿ.ಜೆ.ಪಿ.ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣರವರು ಲೋಕಾರ್ಪಣೆ ಮಾಡಿದರು.
ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರು* ಮಾತನಾಡಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನರ ಅಭಿಮಾನ, ಪ್ರೀತಿ,ವಿಶ್ವಾಸವನ್ನು ವಿ.ಸೋಮಣ್ಣರವರು ಗಳಿಸಿದ್ದಾರೆ.ರಾಜ್ಯ,ಬೆಂಗಳೂರು ಅಭಿವೃದ್ದಿಗೆ ಕಾಯಕ ಸೇವೆ ಮಾಡುತ್ತಿದ್ದೇನೆ.
ಜನರ ಸೇವೆಯೆ ಶಾಶ್ವತವಾಗಿ ಉಳಿಯುತ್ತದೆ.
ವಿ.ಸೋಮಣ್ಣರವರು ಕಲಾಪದವಿದರಾದರು,ಇಂಜನಿಯರ್ ಇರುವ ತಂತ್ರಜ್ಞತೆ ಅವರಲ್ಲಿ ಇದೆ.ಸಾಮಾಜಿಕ ಕಳಕಳಿ,ಜನರ ಉಪಯೋಗಿ ಶಾಸಕರು ಬೇಕು .ಅದರೆ ವಿ.ಸೋಮಣ್ಣ ರವರು ಜನರ ಪ್ರೀತಿ ಗಳಿಸಿದ್ದಾರೆ .
ಜಲಸಂಗ್ರಹಕೇಂದ್ರದಿಂದ 9ಸಾವಿರ ಮನೆಗಳಿಗೆ ನೀರು ಲಭಿಸಲಿದೆ.
ಜನ ಸೇವೆಯೆ ರಾಜಕಾರಣಿ ಎಂದರೆ.ವಿ.ಸೋಮಣ್ಣರವರು ,
ಬಸವ ಯೋಜನೆ 5ಲಕ್ಷ ಮನೆ,ಪ್ರಧಾನಿ ಅವಾಸ್ ಯೋಜನೆ 2ಲಕ್ಷ ಮನೆ ಮತ್ತು ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ 1ಲಕ್ಷ ಮನೆ ನಿರ್ಮಾಣ .
ಮೆಟ್ರೋ ಯೋಜನೆ ಮತ್ತು 17ಸಾವಿರ ಕೋಟಿ ವೆಚ್ಚದಲ್ಲಿ ಸಬ್ ಅರ್ಬನ್ ರೈಲು,15ಸಾವಿರ ಕೋಟಿ ವೆಚ್ಚದಲ್ಲಿ ಫಿರಿಫೆರಲ್ ರಸ್ತೆ ,6000ಸಾವಿರ ಕೋಟಿ ಬೆಂಗಳೂರುನಗರ ಅಭಿವೃದ್ದಿಗೆ ನೀಡಲಾಗಿದೆ .ಐದು ಆಧುನಿಕ ನಗರ ,6ಐ.ಐ.ಟಿ.ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ .ಕರ್ನಾಟಕ ಭವ್ಯ ಭವಿಷ್ಯವು ನಿಮ್ಮ ಆಶೀರ್ವಾದದಿಂದ ಸಹಕಾರ ಗೊಳ್ಳಲಿದೆ ಎಂದು ಹೇಳಿದರು.
ಸಚಿವರಾದ ವಿ.ಸೋಮಣ್ಣರವರು ಮಾತನಾಡಿ* ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ರವರ ನೇತೃತ್ವ ರಾಜ್ಯ ಅಭಿವೃದ್ದಿ ಪಥದತ್ತ ಸಾಗುತ್ತಿದೆ.ನಾಡಪ್ರಭು ಕೆಂಪೇಗೌಡ ಸ್ಮರಣೆಯಲ್ಲಿ ಬಹುಉಪಯೋಗಿ ಬಸ್ ನಿಲ್ದಾಣ ಲೋಕರ್ಪಣೆ ಮತ್ತು 3.5ದಶಲಕ್ಷ ಲೀಟರ್ ಜಲಸಂಗ್ರಹ ಕೇಂದ್ರ 52ದೇವಸ್ಥಾನ ಜೀರ್ಣೋದ್ದಾರ ಮಾಡಲಾಗಿದೆ .75ಶುದ್ದ ಕುಡಿಯುವ ನೀರಿನ ಘಟಕ ಮತ್ತು 17ಗ್ರಂಥಾಲಯ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ ಮತ್ತು ಪೇಜಾವರ ಶ್ರೀ ಕ್ರೀಡಾಂಗಣ ,24ಬ್ಯಾಡ್ಮಿಂಟನ್ ಕೋರ್ಟ್ ,17ವ್ಯಾಯಾಮ ಕೇಂದ್ರ .
10ಕೋಟಿ ರೂಪಾಯಿ ವೆಚ್ಚದಲ್ಲಿ ಕನಕ ಭವನ ಮತ್ತು ಸಾರ್ವಜನಿಕರ ಉಪಯೋಗಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ,ಡಾ||ಬಿ.ಆರ್.ಅಂಬೇಡ್ಕರ್ ರವರ ಸವಿ ಸ್ಮರಣೆಯಲ್ಲಿ ಕ್ರೀಡಾಂಗಣ ಶೀಘ್ರದಲ್ಲಿ ಲೋಕರ್ಪಣೆ ಮಾಡಲಾಗುವುದು ,ರಾಜ್ಯ ಸರ್ಕಾರದಿಂದ 200ಕೋಟಿಗಿಂತ ಹೆಚ್ಚು ಅನುದಾನ ಮುಖ್ಯಮಂತ್ರಿಗಳು ನೀಡಿದ್ದಾರೆ.
ಸ್ವಚ್ಚತೆ ಆದ್ಯತೆ ನೀಡಲಾಗಿದೆ ಮತ್ತು 60ಕ್ಕೂ ಹೆಚ್ಚು ಉದ್ಯಾನವನ ಗಳು ಗೋವಿಂದರಾಜನಗರ ಮಾದರಿ ವಿಧಾನಸಭಾ ಎಂಬ ಕೀರ್ತಿ ಗಳಿಸಿದೆ ಎಂದು ಹೇಳಿದರು.
ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ,ಮಾಜಿ ಬಿ.ಬಿ.ಎಂ.ಪಿ.ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ,ಮೋಹನ್ ಕುಮಾರ್,ವಾಗೇಶ್,
ದಾಸೇಗೌಡ,ಪಲ್ಲವಿ ಚನ್ನಪ್ಪ,ಶ್ರೀಮತಿ ರೂಪಲಿಂಗೇಶ್ವರ್ ರವರು ಉಪಸ್ಥಿತರಿದ್ದರು.

Post Comment