Loading Now

ಹುಟ್ಟುಹಬ್ಬ ಆಚರಣೆಯಲ್ಲೂ ಮಾನವೀಯತೆ ಮೆರೆದ ಬಿಜೆಪಿ ಮುಖಂಡ!

, ಹುಟ್ಟುಹಬ್ಬ ಎಂದರೆ ಆಡಂಬರ ಮೋಜು-ಮಸ್ತಿ ಮಾಡುವ ಕಾಲದಲ್ಲಿ ನಿರ್ಗತಿಕ ಹಾಗೂ ಸಂಪೂರ್ಣ ಅಂಗವಿಕಲತೆ ಹೊಂದಿರುವ ಮಹಿಳೆಗೆ ಸೂರು ಕಲ್ಪಿಸಿಕೊಡುವ ಮೂಲಕ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಮಾನವೀಯತೆ ಮೆರೆದಿರುವ ಘಟನೆ ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ನಡೆದಿದೆ. ಅಪ್ಪ-ಅಮ್ಮ ಬಂಧು-ಬಳಗ ಯಾರು ಇಲ್ಲದ ನಿರ್ಗತಿಕ ಹಾಗೂ ವಿಶೇಷಚೇತನ ರಾಗಿರುವ ರಾಜಮ್ಮ ಹಲವಾರು ವರ್ಷಗಳಿಂದ ಮನೆ ಇಲ್ಲದೆ ಮುರುಕಲು ಗುಡಿಸಲಿ ನಲ್ಲಿಯೇ ವಾಸ ಮಾಡುತ್ತಿದ್ದರು. ಇದನ್ನು ಮನಗಂಡ ಅದೇ ಗ್ರಾಮದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಬಿಜೆಪಿ ಮುಖಂಡರು ಆದ ಹರತಲೆ ಚಿಕ್ಕ ರಂಗನಾಯಕ ತಮ್ಮ ಅಭಿಮಾನಿ ಬಳಗದ ವತಿಯಿಂದ ಆಕೆಗೆ ಮನೆ ಕಟ್ಟಿಕೊಡುವ ಸಂಕಲ್ಪ ಮಾಡಿದರು. ತಮ್ಮ ಹುಟ್ಟುಹಬ್ಬದ ನೆನಪಿನ ಅಂಗವಾಗಿ ಕಳೆದ ಎರಡು ವರ್ಷಗಳ ಹಿಂದೆ ಮನೆಗೆ ಶಂಕುಸ್ಥಾಪನೆ ನೆರವೇರಿಸಿ ಕಳೆದ ವರ್ಷ ಹುಟ್ಟುಹಬ್ಬದಲ್ಲಿ ಕಟ್ಟಡ ಪ್ರಾರಂಭಿಸಿದರು ಈ ಸಾಲಿನ ಹುಟ್ಟುಹಬ್ಬದಲ್ಲಿ ಆಕೆಗೆ ಸುಸಜ್ಜಿತ ಸೂರು ಕಲ್ಪಿಸಿಕೊಟ್ಟು ನಿರಾಶ್ರಿತಳ ಪಾಲಿಗೆ ಬೆಳಕಾಗಿದ್ದಾರೆ .ಇಂದು ತಮ್ಮ ಹುಟ್ಟುಹಬ್ಬ ಆಚರಣೆಯ ಸಂದರ್ಭ ನೂತನ ಮನೆಯ ಗೃಹಪ್ರವೇಶವನ್ನು ಅದ್ದೂರಿ ಯಾಗಿ ಆಚರಿಸಿ ಎಲ್ಲರ ಜನಮನ್ನಣೆಗಳಿಸಿದರು. ನಿರ್ಗತಿಕ ರಾಜಮ್ಮ ಮನೆಯ ಗೃಹಪ್ರವೇಶಕ್ಕೆ ಶಾಸಕ ಹರ್ಷವರ್ಧನ್ ಅವರನ್ನು ಕರೆಯಿಸಿ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಶಾಸಕ ಹರ್ಷವರ್ಧನ್ ಮಾತನಾಡಿ ಚಿಕ್ಕ ರಂಗನಾಯಕ ಅವರು ತಮ್ಮ ಅಭಿಮಾನಿ ಬಳಗದ ವತಿಯಿಂದ ಒಂದು ನಿರ್ಗತಿಕ ಮಹಿಳೆಗೆ ಸೂರು ಕಲ್ಪಿಸಿ ಕೊಡುವ ಮೂಲಕ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ ಒಬ್ಬ ಜನನಾಯಕನಲ್ಲಿ ಇರುವ ಎಲ್ಲಾ ಗುಣಲಕ್ಷಣಗಳು ಅವರಲ್ಲಿದೆ ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಶುಭಹಾರೈಸಿದರು.
ಚಿಕ್ಕ ರಂಗ ನಾಯಕ ಮಾತನಾಡಿ ಪ್ರತಿವರ್ಷ ನನ್ನ ಹುಟ್ಟುಹಬ್ಬದ ಸಂದರ್ಭ ನನ್ನ ಅಭಿಮಾನಿಗಳು ಇಂತಹ ಹತ್ತು ಹಲವಾರು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ ಅವರಿಗೆ ನಾನು ಋಣಿಯಾಗಿದ್ದೇನೆ ಎಂದು ಅವರ ಅಭಿಮಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ ಬಂದ ಗ್ರಾಮಸ್ಥರು ಹಾಗೂ ಅತಿಥಿ ಗಣ್ಯರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದೇ ಸಂದರ್ಭ ಅವರ ನೂರಾರು ಅಭಿಮಾನಿ ಗಳು ಗ್ರಾಮದೇವತೆ ದೇವಾಲಯ ಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಪೇಟ ತೊಡಿಸುವ ಮೂಲಕ ಅಭಿನಂದಿಸಿದರು.
ಅಂತೆಯೇ ಚಿಕ್ಕ ರಂಗನಾಯಕ ಹುಟ್ಟುಹಬ್ಬದ ಅಂಗವಾಗಿ ತಾಲೂಕಿನ ಹಗಿನವಾಳು ಗ್ರಾಮದಲ್ಲಿಕೂಡ ಅವರ ಅಭಿಮಾನಿ ಬಳಗದ ವತಿಯಿಂದ ಶಿಥಿಲಗೊಂಡಿದ್ದ ಬಸ್ ತಂಗುದಾಣವನ್ನು ರಿಪೇರಿ ಮಾಡಿಸಿ ಸುಣ್ಣ-ಬಣ್ಣ ಮಾಡುವುದರ ಮೂಲಕ ಹಾಗೂ ಪೌರಕಾರ್ಮಿಕರಿಗೆ ವೃದ್ಧರು ಅಂಗವಿಕಲರಿಗೆ ಬಟ್ಟೆ ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಹೊರಳವಾಡಿ ಮಹೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರುಗಳಾದ ಬಿ ಎಂ ರಾಮು ಶಿವಣ್ಣ ಕೊಂಗಳ್ಳಿ ಬಸವರಾಜು ಮುಖಂಡರಾದ ಯಾಲಹಳ್ಳಿ ಮಂಜುಪಟೇಲ್, ಗುರು ಪ್ರಸಾದ್ ಕಣೇನೂರು ಪರಶಿವಮೂರ್ತಿ ಹರತಲೆ ಗೋವಿಂದರಾಜ್ ಕಾಂತರಾಜ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Post Comment

You May Have Missed