ಚಿಕ್ಕಮಂಗಳೂರಿನಲ್ಲಿ ಬೆಲ್ ಬಟನ್ ಶೂಟಿಂಗ್
ಕನ್ನಡದ ಖ್ಯಾತ ನಿರ್ದೇಶಕರ ಜೊತೆ ಸಹ ನಿರ್ದೇಶಕರಾಗಿ, ಹಾಗು ರಂಗಭೂಮಿ ನಟರಾಗಿ ಅನುಭವವಿರುವ ಲಕ್ಷ್ಮಿನರಸಿಂಹ. ಎಂ “ಬೆಲ್ ಬಟನ್” ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಲವ್ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಫ್ರೆಶ್ ಫಿಲಂಸ್ ಮೂಲಕ ಗಂಗರಾಜ್ ಗೌಡ ಆರ್, ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಎ.ಆರ್ ರೆಹಮಾನ್ ಬಳಿ ಕೆಲಸ ಮಾಡಿರುವ ಎಸ್ ಎಂ ರಾಹಿತ್ಯ ಸಂಗೀತ ನೀಡುತ್ತಿದ್ದಾರೆ. ಲಕ್ಕಿ ಛಾಯಾಗ್ರಹಣ ಹಾಗೂ ಎಸ್ ಆಕಾಶ್ ಮಹೇಂದ್ರಕರ್
ಸಂಕಲನ ಈ ಚಿತ್ರಕ್ಕಿದೆ.
ಜೈ, ಈ ಚಿತ್ರದ ನಾಯಕ, ನಿಸರ್ಗ ಅಪ್ಪಣ್ಣ ಮತ್ತು ಚೈತ್ರಾ ಗೌಡ , ನಾಯಕಿಯರು, ಪ್ರಮೀಳಾ ಸುಬ್ರಮಣ್ಯ, ಭಾನುಪ್ರಕಾಶ್, ರತ್ನಾ ಕುಮಾರಿ, ರಮೇಶ್, ಪವನ್ ರಿಚ್ಚಿ, ವೇಣು, ಸುಜನಿತ್ ಶೆಟ್ಟಿ, ಗಿರೀಶ್, ಅರವಿಂದ್, ಹರೀಶ್, ಮುಂತಾದವರು ಅಭಿನಯಸುತ್ತಿದ್ದಾರೆ, ಮೇ 15 ರಿಂದ ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ ಎಂದು ನಿರ್ದೇಶಕ ಲಕ್ಷ್ಮಿನರಸಿಂಹ ಅವರು ತಿಳಿಸಿದ್ದಾರೆ.

Post Comment