Loading Now

ಹೋಟೆಲ್ ಮೇಲೆ ಪುರಸಭೆ ಆರೋಗ್ಯಧಿಕಾರಿ ದಾಳಿ.

ತಿ.ನರಸೀಪುರ. ಮೇ.14:-ಹಣದ ದುರಾಸೆಯಿಂದ ಎಸ್.ಆರ್.ಮಾಂಸಹಾರಿ ಹೋಟೆಲ್ ಮಾಲೀಕ ವ್ಯಾಪಾರ ಆಗದೆ ಉಳಿದ ತಂಗಳು ಹಳಸಿದ ಮಾಂಸವನ್ನು ಮತ್ತೆ ಮಾಂಸಹಾರ ತಯಾರಿಸಿ ಊಟಕ್ಕೆ ಬಂದ ಗ್ರಾಹಕರಿಗೆ ಕೂಡುತ್ತಿದ್ದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರಿಗೆ ಐದು ಸಾವಿರ ದಂಡ ವಿಧಿಸಿವುದರ ಜೊತೆಗೆ ಎಚ್ಚರಿಕೆಯನ್ನು ಸಹ ಪುರಸಭೆ ಆರೋಗ್ಯಾಧಿಕಾರಿ ಚೇತನ್ ಕುಮಾರ್ ನೀಡಿದರು‌.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಭರತ್ ವೈನ್ಸ್ ಸ್ಟೊರ್ ಪಕ್ಕದಲ್ಕಿ ಇರುವ ಎಸ್ ಆರ್.ಮಾಂಸಹಾರಿ ಹೋಟೆಲ್ ಮಾಲೀಕ ಹಣದ ದುರಾಸೆಗೆ ಬಿದ್ದು ಗ್ರಾಹಕರಿಗೆ ಎರಡು ಮೂರು ದಿನದ ಹಳಸಿದ ಮಾಂಸವನ್ನು ಮತ್ತೊಮ್ಮೆ ಮಾಂಸಹಾರವನ್ನು ತಯಾರಿಸಿ ನೀಡುವ ಮೂಲಕ ಜನರ ಆರೋಗ್ಯದ ಬಗ್ಗೆ ಚೆಲ್ಲಾಟ ಆಡುತ್ತಿದ್ದ ಹಿನ್ನೆಲೆಯಲ್ಲಿ ಪುರಸಭೆ ಆರೋಗ್ಯಾಧಿಕಾರಿ ಚೇತನ್ ಕುಮಾರ್ ತಮ್ಮ ಸಹಾಯಕ ಸಿಬ್ಬಂದಿ ಮಹೇಂದ್ರ ಜೊತೆಗೂಡಿ ಹೋಟೆಲ್ ಮೇಲೆ ದಾಳಿ ನೆಡಸಿ
ಮಾಲೀಕರಿಗೆ ಸ್ಥಳದಲ್ಲೇ ಐದು ಸಾವಿರ ದಂಡ ವಿಧಿಸಿದರು.

ತದ ನಂತರ ಸುದ್ದಿಗಾರರ‌ ಜೊತೆ ಮಾತನಡಿದ ಚೇತನ್ ಕುಮಾರ್ ಎಸ್.ಆರ್. ಮಾಂಸ ಹಾರಿ ಹೋಟಲ್ ನವರು ವ್ಯಾಪಾರ ಆಗದೆ ಉಳಿದಿರುವ ಮಾಂಸವನ್ನು ಹೊರ ಹಾಕದೆ ಮತ್ತೆ ಅದೇ ಮಾಂಸವನ್ನು ಖ್ಯಾದವಾಗಿ ಮರು ತಯಾರಿಸಿ ಊಟಕ್ಕೆ ಬಂದ ಗ್ರಾಹಕ ರಿಗೆ ಕೂಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಹೋಟೆಲ್ ಗೆ ಬೇಟಿಕೂಟ್ಟು ಪರಿಶೀಲನೆ ಮಾಡಿದಾಗ ಎಸ್.ಆರ್.ಹೋಟೆಲ್ ಮಾಲೀಕ ಹಾಳಾಗಿರುವ ಮಾಂಸವನ್ನು ಹೊರ ಹಾಕದೆ ಅಲ್ಲೇ ಇಟ್ಟುಕೊಂಡು ಅದನ್ನೆ ಮತ್ತೊಮ್ಮೆ ಊಟ ತಯಾರಿಸಲು ಸಚ್ಚಾಗಿದ್ದ ಹಿನ್ನೆಲೆ ಯಲ್ಲಿ ಹೋಟೆಲ್ ಮಾಲೀಕರಿಗೆ ಐದು ಸಾವಿರ ದಂಡ ಹಾಕಿ ಸ್ಥಳದಲ್ಲೇ ಕಟ್ಟಿಸಲಾಗಿದೆ ಎಂದರು.

ಮುಂದುವರಿದು ಮಾತನಾಡಿದ ಚೇತನ್ ಕುಮಾರ್ ಎಸ್.ಆರ್.ಹೋಟೆಲ್ ಮಾಲೀಕರು ಹಳಸಿದ ಮಾಂಸಹಾರ ನೀಡುವುದರ ಜೊತೆಗೆ ಶುಚಿತ್ವ ಸಹ ಕಾಪಡಿಲ್ಲ ಕುಡಿಯುವ ನೀರು.ಆಹಾರ ತಯಾರಿಸುವ ಪಾತ್ರೆ ಸಹ ಶುಚಿಯಾಗಿಲ್ಲ ಹಾಗೂ ಕಸ ತುಂಬುವ ಪ್ಲಾಸ್ಟಿಕ್ ಡಬ್ಬಿಯಲ್ಲಿ ಮಾಂಸ ಸಹ ಶೇಖರಣೆ ಮಾಡಿದ್ದಾರೆ ಹಾಗಾಗಿ ಇವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದೇವೆ ಮುಂದೆ ಸರಿ ಪಡಿಸಿಕೊಳ್ಳದಿದ್ದರೆ ಇವರ ಮೇಲೆ ಪುರಸಭೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು ಅಲ್ಲದೆ ಬೇರೆ ಹೋಟೆಲ್ ನವರು ಸಹ ಈ ರೀತಿಯಲ್ಲಿ ನೆಡದುಕೊಳ್ಳುತಿದ್ದರೆ ಅವರ ಮೇಲೂ ಕ್ರಮ ವಹಿಸಲಾಗುವುದು ಎಂದರು.

Post Comment

You May Have Missed