ಶಂಕರಾಚಾರ್ಯರಿಗೆ ಆರತಿ !
ಶಂಕರಿಚಾರ್ಯರಿಗಾರತಿ ಎತ್ತಿರೆ
ಶಂಕರ ಭಗವತ್ಪಾದರ ಪಾದ ಹಿಡಿಯಿರೆ
ಶಂಕರರ ಶ್ಲೋಕದರ್ಥ ಅರಿತು ಪಠಿಸುತ
ಶಂಕರರ ಕೃಪೆಗೆ ಪಾತ್ರರಾಗಿ ಸುಖಿಸಿರೆ
ಬಾಲ ಸನ್ಯಾಸಿ ರೂಪ ಮನದಿ ಧ್ಯಾನಿಸಿ
ಕಾಲಟಿಯ ಮಗನ ಧೈರ್ಯ ಸ್ಥೈರ್ಯ ಚಿಂತಿಸಿ
ಆಲಯದ ಮುಂದೆ ನದಿಯ ತಂದು ಹರಿಸಿದ
ಎಲ್ಲಿದ್ದರು ಬರುವೆನೆಂದು ತಾಯಿಗೆ ತಿಳಿಸಿದ
ನಡೆದರು ಗುರುವನು ಅರಸಿ ಜಗದ್ಗುರುಗಳು
ಪಡೆದರು ತತ್ವಜ್ಞಾನವ ಶ್ರೇಷ್ಠ ಯತಿಗಳು
ತಡೆದರು ಒಳ ಜಗಳಗಳ ಜ್ಞಾನಪೂರ್ಣರು
ಬಿಡದೆ ಸಂಚರಿಸಿ ಧರ್ಮ ಉಳಿಸಿದವರು
ಕೃಪೆಯಿಂದ ಷಣ್ಮತಗಳ ಸೇರಿಸಿದವರು
ಅಪಾರ ಮಹಿಮರು ಭಾಷ್ಯಕಾರರು
ಉಪಯುಕ್ತ ಸ್ತೋತ್ರಗಳಲಿ ಶಕ್ತಿ ತುಂಬುತ
ಕೃಪಣರ ಉದ್ಧಾರಕ್ಕಾಗಿ ಕೊಟ್ಟಿರುವರು
ಜ್ಞಾನ ಮಾರ್ಗಕೆ ಬುನಾದಿ ಹಾಕಿಕೊಟ್ಟರು
ಜ್ಞಾನ ಪೀಠ ಕಾಶ್ಮೀರದಿ ಏರಿ ತೋರಿದರು
ಜ್ಞಾನದ ಭಂಡಾರವಾಗಿ ಪ್ರಜ್ವಲಿಸುತ್ತ
ಜ್ಞಾನಕಾಗಿ ನಾಲ್ಕು ಪೀಠ ಸ್ಥಾಪಿಸಿದವರು
ಹೃದಯ ಪುಷ್ಪ ಪರಮಾತ್ಮನಿಗೆ ನೀಡಿದರೆಂದರು
ಹೃದಯದೊಳಗೆ ಮಾನಸಪೂಜೆ ಮಾಡಿರೆಂದರು
ಸದಾ ಅಂತರ್ಮುಖ ಸಾಧನೆ ಮಾಡಿರೆನ್ನುತ
ಸದಾನಂದ ಸಿರಿಹರಿಯ ಮೆಚ್ಚಿಸಿದವರು.
ಶ್ರೀ ಕೃಷ್ಣಾರ್ಪಣಮಸ್ತು


Post Comment