Loading Now

ಶ್ರೀ ರಾಮಾನುಜಾಚಾರ್ಯರ ಜಯಂತಿ ಪ್ರಯುಕ್ತ.

ಶ್ರೀ ರಾಮಾನುಜಾಚಾರ್ಯರಿಗೆ ನಮನ

ರಾಮಾನುಜಾಚಾರ್ಯರೆ ಶ್ರೇಷ್ಠ ಗುರುಗಳೆ
ಶ್ಯಾಮನ ಭಕ್ತಿಸುಧೆಲಿ ಮಿಂದೆದ್ದ ಯತಿಗಳೆ
ತಮವ ಕಳೆವ ಜ್ಞಾನಜ್ಯೊತಿಯಾದವರೆ
ಸಮವಿಲ್ಲದ ತತ್ವಾರ್ಥವ ತಿಳಿಸಿದವರೆ

ವಿಶಿಷ್ಟ ಅದ್ವೈತ ಮತವನ್ನು ಸ್ಥಾಪಿಸಿ
ವಿಶಿಷ್ಟ ಶ್ರೀ ಹರಿಯ ಗುಣ ಮಹಿಮೆ ತಿಳಿಸಿ
ಅಶೇಷ ಜನರಿಗೂ ಭಕ್ತಿ ಮಾರ್ಗ ತೋರಿಸಿ
ವಿಶೇಷವಾಗಿ ಮೇಲುಕೋಟೆಯಲ್ಲಿ ನೆಲಸಿ

ರಾಜಮಹಾರಾಜರ ಕುಲುಗುರು ಆದಿರಿ
ಸಜ್ಜನರ ಉದ್ಧಾರಕ್ಕೆ ಗ್ರಂಥರಚಿಸಿ ಕೊಟ್ಟಿರಿ
ನಿಜ ಸುಜ್ಞಾನದಿಂದ ಭಾಷ್ಯಗಳ ರಚಿಸಿ
ಅಜನಪಿತನ ಕೊಂಡಾಡಿ ಧನ್ಯರಾದಿರಿ

ನಿಮ್ಮ ಆಶೀರ್ವಾದ ಸದಾ ನಮ್ಮನು ಕಾಯಲಿ
ಸಮಾನವಿಲ್ಲದ ಸಿರಿಹರಿಯ ಕರುಣೆ ಆಗಲಿ
ಅಮಾನುಷ ಪರಮಾತ್ಭನಲ್ಲಿ ಭಕ್ತಿ ಶ್ರದ್ಧೆ ಹೆಚ್ಚಲಿ
ಕಾಮಾದಿ ದುರ್ಗುಣಗಳು ಭಸ್ಮವಾಗಲಿ.

ಶ್ರೀ ಕೃಷ್ಣಾರ್ಪಣಮಸ್ತು
ರೂಪಶ್ರೀ ಶಶಿಕಾಂತ್

Post Comment

You May Have Missed