Loading Now

ಶಂಕರಾಚಾರ್ಯರ ಜಯಂತಿ ಅಂಗವಾಗಿ ತತ್ವಜ್ಞಾನಿ ದಿನಾಚರಣೆ.

ಮೈಸೂರು ಮೇ 06 : ಭಾರತೀಯ ಜನತಾ ಪಾರ್ಟಿ ವತಿಯಿಂದ ಹಿಂದೂ ಸನಾತನ ಧರ್ಮದ ಹಾದಿ ಗುರುಗಳಾದ ಆದಿ ಗುರುಗಳಾದ ಶಂಕರಾಚಾರ್ಯರ ಜಯಂತಿ ಅಂಗವಾಗಿ ತತ್ವಜ್ಞಾನಿ ದಿನಾಚರಣೆ ಆಚರಿಸಲಾಯಿತು , ಆದಿ ಗುರುಗಳಾದ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಿಜೆಪಿ ನಗರಾಧ್ಯಕ್ಷ.

ಟಿ ಎಸ್ ಶ್ರೀವತ್ಸ ನಂತರ ಮಾತನಾಡಿದ ಅವರು ಭಾರತ ಹಿಂದೂಗಳ ದೇಶವಾಗಿ ಸ್ಥಾಪಿತವಾಗಿದೆ ಎಂದರೆ ಅದಕ್ಕೆ 8ನೇ ಶತಮಾನದಲ್ಲಿ ಶಂಕರಾಚಾರ್ಯರ ಕೊಡುಗೆ ಅಪಾರ, ಕೇವಲ 32ವರ್ಷವಿದ್ದರೂ ಸಹ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಅದ್ವೈತ ಸಿದ್ದಾಂತವನ್ನು ಸ್ಥಾಪಿಸಿ ಸನಾತನ ಪರಂಪರೆಯ ಪ್ರಾತಃ ಸ್ಮರಣೀಯರು, ಹಿಂದೂ ಧರ್ಮದ ಜಾಗೃತಿ ಕೆಲಸವನ್ನು ಯಾವುದೇ ಮಾಧ್ಯಮ ಸಂಪರ್ಕವಿಲ್ಲದೆ ಅವರು ಮಾಡಿರುವುದು ಇವತ್ತಿನ ಹಿಂದೂಪರ ಸಂಘಟನೆಗಳಿಗೆ ಮಾದರಿಯಾಗಿದೆ ,
ನೆಮ್ಮದಿ ಎನ್ನುವುದು ಯಾವ ಅಂಗಡಿಯಲ್ಲೂ ಸಿಗುವ ವಸ್ತುವಲ್ಲ. ನೆಮ್ಮದಿ ದೊರಕಲು ಇಂತಹ ಧಾರ್ಮಿಕ ಆಚರಣೆಗಳಿಂದಷ್ಟೇ ಸಾಧ್ಯ’ ಎಂದರು.ಧಾರ್ಮಿಕ ಆಚರಣೆ ಮತ್ತು ದೇವಾಲಯಗಳು ಗ್ರಾಮದ ಜನರನ್ನು ಒಟ್ಟುಗೂಡಿಸಿ ನೆಮ್ಮದಿಯ ಜೀವನಕ್ಕೆ ದಾರಿ ತೋರುತ್ತಿವೆ ಎಂದರು.

‘ಗ್ರಾಮಗಳಲ್ಲಿ ಧಾರ್ಮಿಕ ಆಚರಣೆ ಹಬ್ಬ ಹರಿದಿನಗಳನ್ನು ಆಚರಿಸುವುದರಿಂದ ಗ್ರಾಮಸ್ಥರಲ್ಲಿ ವಿಶ್ವಾಸ, ನಂಬಿಕೆ, ಸ್ನೇಹ, ಬಾಂಧವ್ಯ ವೃದ್ಧಿಸುತ್ತದೆ’ ಎಂದರು.
‘ಮನುಷ್ಯನಲ್ಲಿ ಸಂಪತ್ತು ಹೆಚ್ಚಾದಂತೆಲ್ಲ ಸ್ವಾರ್ಥ ಹೆಚ್ಚಾಗುತ್ತಿದೆ. ಅತಿಯಾದ ವೈಚಾರಿಕತೆಯಿಂದ ಜನರಲ್ಲಿ ಭಾವನೆಗಳು ಕಲುಷಿತಗೊಂಡಿವೆ. ಜನರು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೇವರಲ್ಲಿ ಭಕ್ತಿ ಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ ,ಗ್ರಾಮಾಂತರ ಅಧ್ಯಕ್ಷ ರಾದ ಮಂಗಳಾ ಸೋಮಶೇಖರ್ ,ಪ್ರಧಾನ ಕಾರ್ಯದರ್ಶಿ ಎಚ್ ಜಿ ಗಿರಿಧರ್ ಗಿರಿಧರ್ ,ವಾಣಿಶ್ ಕುಮಾರ್ ,ಹಿಂದುಳಿದ ವರ್ಗದ ಅಧ್ಯಕ್ಷ ರಾದ ಜೋಗಿ ಮಂಜು ,ಮಾಧ್ಯಮ ವಕ್ತಾರರ ಕೇಬಲ್ ಮಹೇಶ್ , ನಗರಪಾಲಿಕೆ ನಾಮನಿರ್ದೇಶಕರಾದ ಜಗದೀಶ್ ,ವಿಕ್ರಂ ಅಯ್ಯಂಗಾರ್ ,ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕರಾದ ಜೀವದಾರ ಗಿರೀಶ್ ,ಚಾಮುಂಡೇಶ್ವರಿ ಕ್ಷೇತ್ರದ ಉಪಾಧ್ಯಕ್ಷ ರಾಕೇಶ್ ಭಟ್ ,ಗೋಪಾಲ್ ರಾವ್ ,ಜಯಸಿಂಹ ಶ್ರೀಧರ್ ,ಕಾರ್ಯಾಲಯ ಕಾರ್ಯದರ್ಶಿ ಚೇತನ್ ,ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠದ ಸಂಚಾಲಕರಾದ ಅಪೂರ್ವ ಸುರೇಶ್ ,ಲಖನ್ ನಾಯಕ್ ,ರಂಗನಾಥ್ ,ಶಿವರಾಜ್ ,ರೈತ ಮೋರ್ಚಾ ಅಧ್ಯಕ್ಷ ದೇವರಾಜ್ ,ಸತೀಶ್ ,ಹಾಗೂ ಇನ್ನಿತರರು ಹಾಜರಿದ್ದರು.

Post Comment

You May Have Missed