Loading Now

ಮನಸ್ಸನ್ನು ಬೆಳಗಲು ಇರುವ ಏಕೈಕ ಸಾಧನ ಗ್ರಂಥಗಳು : ನಂದೀಶ್ ಹಂಚ ಅಭಿಮತ.

ಮೈಸೂರು 23 : ಮನಸ್ಸನ್ನು ಬೆಳಗಲು ಇರುವ ಏಕೈಕ ಸಾಧನವೆಂದರೆ ಅದು ಗ್ರಂಥಗಳು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ನಂದೀಶ್ ಹಂಚೆ ಅವರು ಅಭಿಪ್ರಾಯಪಟ್ಟರು.

ಅವರಿಂದು ಅರಿವು ಸಂಸ್ಥೆ ವತಿಯಿಂದ ಚಾಮುಂಡಿಪುರಂನಲ್ಲಿರುವ ಚಾಮುಂಡಿಪುರಂ ಶಾಖೆಯ ಗ್ರಂಥಾಲಯ ಆವರಣದಲ್ಲಿ ವಿಶ್ವಪುಸ್ತಕ ದಿನಾಚರಣೆ ಹಾಗೂ ಪದ್ಮಶ್ರೀ ಪುರಸ್ಕೃತ ಗ್ರಂಥಾಲಯ ಪಿತಾಮಹ
ಡಾ.ಎಸ್.ಆರ್.ರಂಗನಾಥನ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶಾದ್ಯಂತ, ರಾಜ್ಯಾದ್ಯಂತ ವಿಶ್ವಪುಸ್ತಕ ದಿನಾಚರಣೆ ಆಚರಿಸಲಾಗುತ್ತಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷನಾಗಿ ಎಲ್ಲರಿಗೂ ಪುಸ್ತಕ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತೇನೆ ಎಂದರು. ಪುಸ್ತಕಗಳು ಕೇವಲ ನಮ್ಮ ಜ್ಞಾನವನ್ನಷ್ಟೇ ಹೆಚ್ಚಿಸುವುದಿಲ್ಲ. ನಮ್ಮ ಮನಸ್ಸನ್ನು ಕೂಡ ಪ್ರಫುಲ್ಲಗೊಳಿಸುತ್ತದೆ. ಆ ಕಾರಣದಿಂದ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಪುಸ್ತಕಗಳನ್ನು ಕೊಂಡು ಓದಿ ಅದನ್ನು ಆನಂದಿಸಬೇಕು. ಯಾಕೆಂದರೆ ಹೊರಗಿನ ಜಗತ್ತನ್ನು ಬೆಳಗುವುದಕ್ಕೆ ಬೇಕಾದಷ್ಟು ಸಂಗತಿಗಳಿವೆ. ಇಡೀ ಜಗತ್ತನ್ನು ಬೆಳಗಲು ಸೂರ್ಯ,ಚಂದ್ರರಿರುತ್ತಾರೆ. ಮನೆಯನ್ನು ಬೆಳಗಲು

ಮನೆಯನ್ನು ಬೆಳಗಲು ದೀಪವಿರುತ್ತದೆ. ಆದರೆ ಮನಸ್ಸನ್ನು ಬೆಳಗಲು ಯಾವುದಾದರೂ ಏಕೈಕ ಸಾಧನ ಇದೆ ಅಂದರೆ ಅದು ಗ್ರಂಥಗಳು ಮಾತ್ರ. ಆ ಕಾರಣದಿಂದ ಜ್ಞಾನ ಜಗತ್ತನ್ನು ಬೆಳಗಬೇಕು ಎಂಬ ಅಂಬೇಡ್ಕರ್ ಅವರ ಮಾತು ಸದಾಕಾಲ ಸ್ಮರಣೀಯ ಎಂದರು.

ಆ ದೃಷ್ಟಿಯಿಂದ ಇಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷನಾಗಿ ಮತ್ತು ಮೂಲತಃ ಅಧ್ಯಾಪಕನಾಗಿ ಪುಸ್ತಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸಂತಸ ತಂದಿದೆ. ಜೊತೆಗೆ ಒಂದು ವಾರ್ಡ್ ನೊಳಗೆ ಒಂದು ಗ್ರಂಥಾಲಯದಲ್ಲಿ 35ಸಾವಿರ ಪುಸ್ತಕಗಳನ್ನು ಸಂಗ್ರಹಿಸಿ ಇಷ್ಟೊಂದು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದನ್ನು ಕೇಳಿ ಸಂತಸವಾಯಿತು. ಎಲ್ಲ ವಾರ್ಡ್ ಗಳಲ್ಲಿಯೂ ಮುಡಾ ಸಿಎ ನಿವೇಶನವನ್ನು ಉಚಿತವಾಗಿ ನೀಡುವ ಮಾತನ್ನು ಹಿಂದೆ ಹೆಚ್.ವಿ.ರಾಜೀವ್ ಅವರು ಹೇಳಿದ್ದರು. ಗ್ರಂಥಾಲಯ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ನಾನೂ ಕೂಡ ಪತ್ರ ಬರೆಯುತ್ತೇನೆ. ಅವರು ಜಾಗ ನೀಡಲು ಸಿದ್ಧರಿದ್ದಾರೆ. ಆದರೆ ಇಲಾಖೆ ನಿರ್ವಹಣೆ ಮಾಡುವ ಬೇರೆ ಬೇರೆ ಕಾರಣಗಳಿಂದ ಯೋಚಿಸುತ್ತಿದೆ. ಯೋಚನೆ ಮಾಡಬಾರದು. ಆ ಸ್ಥಳವನ್ನು ಕಾಯ್ದಿರಿಸಿಕೊಂಡು ಇಡೀ ಮೈಸೂರು ನಗರ ಸಾಂಸ್ಕೃತಿಕ ನಗರದ ಜೊತೆಗೆ ಪುಸ್ತಕ ನಗರವೂ ಆಗಬೇಕು ಎಂದು ವಿನಂತಿಸಿದರು.
ಬೆಳಗಾವಿ ಗಡಿ ಮಹಾರಾಷ್ಟ್ರದಲ್ಲಿ ಪುಸ್ತಕದ ಊರಿದೆ. ಅದೇ ರೀತಿ ಮೈಸೂರು ಕೂಡ ಪುಸ್ತಕದ ಊರಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮತ್ತು ನಂದೀಶ್ ಹಂಚೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಂ ಪ್ರಸಾದ್, ಮಾಜಿ ಸದಸ್ಯ ಜಯಶಂಕರ ಸ್ವಾಮಿ, ಗ್ರಂಥಾಲಯ ಸಹವರ್ತಿ ಹಾಗೂ ಪ್ರಭಾರ ಧಾರಕರಾದ ಮಂಜುಳಾ, ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅರಿವು ಸಂಸ್ಥೆಯ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಯುವ ಮುಖಂಡ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Post Comment

You May Have Missed