Loading Now

*ಜನನಿಯ ಜನ್ಮ *

ಹೇಳುವೆ ಅವಳ ಜೀವನವನ್ನು ಕವನದ ರೂಪದಲ್ಲಿ
ಪದಗಳು ಸೋತವು ಅವಳನ್ನು ವರ್ಣಿಸಲು ಒಂದಿಷ್ಟು ಸಾಲಿನಲ್ಲಿ
ನೀವೇ ಹೇಳಿ… ಅವಳನ್ನು ಮಿತಿಗೊಳಿಸುವುದು ಹೇಗೆ?
ಅನಾದಿಯಾದ ಕಥೆಯೊಂದನ್ನು ಶುರು ಮಾಡುವುದು ಹೇಗೆ…?
ಹುಟ್ಟುವ ಮುನ್ನವೇ ಅವಳ ಜೀವನದ ಅಂತ್ಯ ಹಾಡುವರು
ಹೊರಬಂದಲ್ಲಿ ಅವಳು ಪ್ರಪಂಚವನ್ನೇ ಆಳುವಳು
ಈಗಾಗಲೇ ತಿಳಿದಿರಬಹುದು ಈ ಕವನವು ಯಾರದೆಂದು
ದೇವರ ಪ್ರತಿಬಿಂಬವಾದ ತಾಯಿಯ ಮೇಲೆಂದು

ಹುಟ್ಟಿಸುವ ಶ್ರೇಯಸ್ಸು ಅವಳು ಪಡೆಯಲಿಲ್ಲ
ಸಾಕಿ ಬೆಳೆಸಿದ ಪದವಿಯನ್ನು ಯಾರು ನೀಡಲಿಲ್ಲ
ಅವಳ ಹೋರಾಟವನ್ನು ಕಾಣದೆ ಹೋದ ಮನುಜರು
ಮಗುವಿನ ತಪ್ಪಲ್ಲಿ ಅವಳನ್ನೇ ಹುಡುಕುವರು
ನವಮಾಸದ ನ್ಯೂನತೆಯ ನೋವನ್ನು ಒಬ್ಬಳೇ ಸಹಿಸುವಳು
ಸಾವಿರ ಸವಾಲು ಹಾಕಿದರೂ ಒಂದೇ ಕೂಗಿಗೆ ಓಡಿಬರುವಳು
ಆಹಾ…! ಅವಳು ಎಂತಹ ಅದ್ಭುತ ಸೃಷ್ಟಿ
ಆಹಾ…! ಅವಳದು ಎಂತಹ ಅದ್ಭುತ ಸೃಷ್ಟಿ

ಸೌಧಾಮಿನಿ ಎಂ. ವಿ

Post Comment

You May Have Missed