ಲೆಜೆಂಡ್ ಕ್ರಿಕೆಟರ್ಸ್ ಕರುಣೆಯ ಗೋಡೆ ತಂಡಕ್ಕೆ 2ನೇ ಬಹುಮಾನ .
ತಾವರೆಕೆರೆ : ಯುವಕರಲ್ಲಿ ಸ್ನೇಹವನ್ನು ಬೆಸೆಯುವ ಜೀವ ಕ್ರೀಡೆಗೆ ಇದೆ. ಇದನ್ನು ಉಪಯೋಗಿಸಿಕೊಳ್ಳುವ ರೀತಿಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಆಗ ಸ್ನೇಹದಿಂದ ಆಟವಾಡಲು ಸಾಧ್ಯವಾಗುತ್ತದೆ. ಎಲ್ಲರೂ ಸಹ ಭಾಗವಹಿಸಿ ಉತ್ತಮವಾಗಿ ಆಟವಾಡಿ ಎಂದು ಕರುಣೆಯ ಗೋಡೆಯ ಸಮಾಜ ಸೇವೆ ಆಯೋಜಕರಾದ ಚೇತನ್ ಹೇಳಿದರು.
ಜೈ ಭಜರಂಗಿ ಕಪ್ ಸೀಸನ್ – 2ರ ಹೊಸಕೋಟೆ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್ ಪಂದ್ಯಾವಳಿಯಲ್ಲಿ 2ಣೇ ಸ್ಥಾನಗಳಿಸಿದ ಹೊಸಕೋಟೆ ತಂಡಕ್ಕೆ ಟ್ರೋಫಿ ಹಾಗೂ ಬಹುಮಾನ ವಿತರಿಸಿ ನಂತರ ಮಾತನಾಡಿದ ಅವರು, ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚು ಆಸಕ್ತಿ ಪ್ರೋತ್ಸಹ ಮತ್ತು ಸಮಯವನ್ನು ಯುವಕರು ಕ್ರಿಕೆಟ್ ಆಟಕ್ಕೆ ನೀಡುತ್ತಿದ್ದಾರೆ. ಕ್ರೀಡೆಯಿಂದ ಮನುಷ್ಯನು ಆರೋಗ್ಯದಿಂದಿರುತ್ತಾನೆ. ಯಾವಾಗಲು ನಾವು ಒಂದು ಕೆಲಸವನ್ನು ಮಾಡಬೇಕೆಂದರೆ ಶ್ರದ್ದೆ ಬಹಳ ಮುಖ್ಯವಾಗಿರುತ್ತದೆ. ಗ್ರಾಮಗಳಲ್ಲಿ ಪರಸ್ಪರ ಪ್ರೀತಿ ಸಂಬಂಧದಿಂದ ಬಾಳಲು ಅನುಕೂಲವಾಗುತ್ತದೆ. ಈಗೆ ಕ್ರಿಕೆಟ್ ಆಡುವ ನೀವುಗಳು ಮುಂದೆ ಒಂದು ದಿನ ರಾಷ್ಟ್ರೀಯ ಮಟ್ಟವಾಗಿ ಆಡಬೇಕು. ಕ್ರೀಡೆಯಲ್ಲಿ ಸಹ ತೊಡಗುವುದರಿಂದ ಆರೋಗ್ಯದ ಮೇಲೆ ಹೆಚ್ಚಿನ ಲಾಭ ಒದಗಿಗುತ್ತದೆ. ವ್ಯಾಯಾಮ ಮಾಡುವ ಹಾಗೇ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳಬೇಕು. ಕ್ರಿಕೆಟ್ ಒಂದು ಉತ್ತಮ ಕ್ರೀಡೆಯಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಹಳ್ಳಿಯಿಂದ ಅಂತರಾಷ್ಟ್ರಿಯ ಮಟ್ಟದ ಕ್ರೀಡೆಗಳಲ್ಲಿ ಖ್ಯಾತಿಯನ್ನುಗಳಿಸಿದ್ದಾರೆ. ಯುವಕರು ಬೇರೆ ದುಶ್ಚಟಗಳಿಗೆ ಬೀಳದಂತೆ ತಡೆಯುವುದಕ್ಕೆ ಕ್ರಿಕೆಟ್ ಒಂದು ಉತ್ತಮ ಕ್ರೀಡೆಯಾಗಿದೆ ಎಂದು ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಸಹ ಒಂದು ಉತ್ತಮ ಕ್ರೀಡಾ ಪಟುವಾಗಬೇಕು. ಕ್ರೀಡೆಯಿಂದ ಆರೋಗ್ಯವು ಸಹ ದೈಹಿಕವಾಗಿ ಹಾಗೂ ಮಾನಸಿಕವಾಗಿ ಕೂಡಿರುತ್ತದೆ ಎಂದು ಸಂದೇಶ ನೀಡಿದರು.
ಇದೇ ಸಂದರ್ಭದಲ್ಲಿ ಲೆಜೆಂಡ್ ಕ್ರಿಕೆಟರ್ಸ್ ಕರುಣೆಯ ಗೋಡೆಯ ತಂಡ 2ನೇ ಸ್ಥಾನಗಳಿಸಿ 20 ಸಾವಿರ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಪಿಯನ್ನು ಪಡೆದಿದ್ದಾರೆ.




Post Comment