Loading Now

ಅತ್ತಿಗುಪ್ಪೆ ವಾರ್ಡ್ ನಲ್ಲಿ ಜನಸಂಪರ್ಕ ಕಛೇರಿ ಉದ್ಘಾಟನೆ !

ಬೆಂಗಳೂರು, ಏಪ್ರಿಲ್ 18: ವಿಜಯನಗರ ವಿಧಾನ ಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡ್ ನಲ್ಲಿ ಜನ ಸಂಪರ್ಕ ಕಛೇರಿ ಉದ್ಘಾಟನೆಯನ್ನು ಶಾಸಕರು, ವಸತಿ ಸಚಿವರಾದ ವಿ.ಸೋಮಣ್ಣರವರು,
ನಿಕಟಪೂರ್ವ ಬಿ.ಬಿ.ಎಂ.ಪಿ. ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಚಿವರಾದ ವಿ.ಸೋಮಣ್ಣರವರು ಮಾತನಾಡಿ 500ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಚಿಂತನೆಯಿಂದ ಬೆಂಗಳೂರುನಗರ ಸ್ಥಾಪನೆಯಾಯಿತು. ಎಲ್ಲ ವರ್ಗ,ಜಾತಿ,ಧರ್ಮದವರಿಗೆ ಉದ್ಯೋಗ ಅನುಸಾರವಾಗಿ ಪೇಟೆಗಳನ್ನು ನಿರ್ಮಾಣ ಮಾಡಿದರು.

ಧ್ವನಿ ಇಲ್ಲದ,ಆಸರೆ ಇಲ್ಲದ ಸಮಾಜದ ಕಟ್ಟಕಡೆಯ ಜನರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಿದಾಗ ದೇಶ ಅಭಿವೃದ್ದಿ ಸಾಧ್ಯ.
ಭಾರತ ದೇಶ ಪ್ರಧಾನಿ ನರೇಂದ್ರ ಮೋದಿರವರು ಮತ್ತು ಸರಳ, ಸಜ್ಞನ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿರವರ ಸಹಕಾರದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 260ಹಾಸಿಗೆ ಸಾಮ್ಯರ್ಥವುಳ್ಳ ಹೈಟೆಕ್ ಆಸ್ಪತ್ರೆ ಶೀಘ್ರದಲ್ಲಿ ಲೋಕರ್ಪಣೆಯಾಗಲಿದೆ ಎಂದು ಹೇಳಿದರು.

ಕೆ.ಉಮೇಶ್ ಶೆಟ್ಟಿ ಮಾತನಾಡಿ ಚಿಕ್ಕ ವಯಸ್ಸಿನಲ್ಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಒಡನಾಟದಿಂದ ಶಿಸ್ತು,ಟಿಸಂಘಟನೆ ಮತ್ತು ದೇಶಭಕ್ತಿಯ ಬಗ್ಗೆ ಅಪಾರ ಜ್ಞಾನದ ಅರಿವು ಮೂಡಿತು.
ನನ್ನ ಗುರುಗಳು ಮಾಗದರ್ಶಕರಾದ ಸೋಮಣ್ಣ ರವರ ನೇತೃತ್ವದಲ್ಲಿ ನಾಗರಭಾವಿ, ಗೋವಿಂದರಾಜನಗರ ವಾರ್ಡ್ ನಲ್ಲಿ ಪಾಲಿಕೆ ಸದಸ್ಯನಾಗಿ ಸೇವೆ ಮಾಡಿದ್ದೇನೆ.
ವಿಶ್ವದ ಬಲಿಷ್ಠ ನಾಯಕ ಪ್ರಧಾನಿ ನರೇಂದ್ರ ಮೋದಿರವರು ಹೇಳಿದಂತೆ ಜನಸೇವಕರಾಗಿ ಜನರ ಕೆಲಸ ಮಾಡುವಂತೆ ನಮಗೆಲ್ಲ ಸ್ಪೂರ್ತಿ ಪೇರಣೆಯಾಗಿದ್ದಾರೆ.
ಅದರಂತೆ ಜನರ ಸಲಹೆ, ಸಹಕಾರದಿಂದ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ, ಚಂದ್ರಗಿರಿ ಉದ್ಯಾನವನ,ಕನಕದಾಸರ ಉದ್ಯಾನವನ,ಅಟಲ್ ಕ್ರೀಡಾ ಸಂಕೀರ್ಣ ಮತ್ತು ರೆಫರಲ್ ಆಸ್ಪತ್ರೆ ಮತ್ತು ಹಲವಾರು ಅಭಿವೃದ್ದಿ ಕೆಲಸಗಳು ಪರಿಪೂರ್ಣ ಮಾಡಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ಕುಕ್ಕರ್, ಸೀರೆ ವಿತರಣೆ ಮತ್ತು ಅಂಧರಿಗೆ ವಾಕಿಂಗ್ ಸ್ಟೀಕ್, ಬ್ಯಾಗ್ ಹಾಗೂ ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಮಾಡಲಾಯಿತು. ರಕ್ತದಾನ ಶಿಬಿರವನ್ನೂ ಸಹ ಏರ್ಪಡಿಸಲಾಯಿತು.

ಗೋವಿಂದರಾಜನಗರ ಮಂಡಲ ಅಧ್ಯಕ್ಷರಾದ ಟಿ.ವಿ.ಕೃಷ್ಣ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್, ಶ್ರೀಧರ್, ರಾಮಚಂದ್ರರವರು ಬಿ.ಜೆ.ಪಿ.ಮುಖಂಡರುಗಳು ಪಾಲ್ಗೊಂಡಿದ್ದರು.

Post Comment

You May Have Missed