Loading Now

ಅಬ ಜಬ ದಬ ಚಿತ್ರದ ಮುಹೂರ್ತ

ಏಪ್ರಿಲ್ 11, 2022 ರಂದು ತನ್ನ ವಿಭಿನ್ನ ಫೋಟೋಶೂಟ್ ಮೂಲಕ ಸಿನಿ ಪ್ರಿಯರ ಗಮನ ಸೆಳೆದ ಅಬ ಜಬ ದಬ ಚಿತ್ರದ ಮುಹೂರ್ತ ರವಿ ಕಿರಣ್ ಎಸ್ಟೇಟ್ ಕನಕಪುರದಲ್ಲಿ ಚಿತ್ರ ತಂಡ ಸದ್ದಿಲ್ಲದೆ ಮುಗಿಸಿದೆ.

ನಿರ್ದೇಶಕ ಮಯೂರ ರಾಘವೇಂದ್ರ ಮೊದಲ ಹಂತದ ಚಿತ್ರೀಕರಣದಲ್ಲಿ ಸುಧಾ ರಾಣಿ, ಅಚ್ಚುಥ್ ಕುಮಾರ್ ಹಾಗೂ ನಾಯಕ ನಟ ಪ್ರಿಥ್ವಿ ಮತ್ತು ನಾಯಕ ನಟಿ ಅಂಕಿತ ಅಮರ್ ಅವರ ಚಿತ್ರೀಕರಣ ಮುಗಿಸಲು ಮುಂದಾಗಿದ್ದಾರೆ.

ಈ ಹಂತದ ಚಿತ್ರೀಕರಣ 15 ದಿನಗಳು ನಡೆದು, ಕೊನೆಯಲ್ಲಿ ಹಿರಿಯ ನಟಿ ಊರ್ವಶಿ ಅವರು ತಂಡವನ್ನು ಸೇರಲಿದ್ದಾರೆ.

ಅಬ ಜಬ ದಬ, ಅನಂತ ಕೃಷ್ಣ ಶಾಸ್ತ್ರಿ ಅವರ ಎಸ್ ರಾಮ್ ಪ್ರೊಡ್ಯೂಕ್ಷನ್ಸ್ ನೇತೃತ್ವದಲ್ಲಿ ಹಾಗೂ ಗಿರಿಧರ್ ದಿವಾನ್ ಛಾಯಾಗ್ರಹಣ ಮತ್ತು ಸತೀಶ್ ರಘುನಾಥನ್ ಅವರ ಸಂಗೀತ.

Post Comment

You May Have Missed