ವಿದ್ಯಾರ್ಥಿಯ ಶಾಂತಿ ಕಾಪಾಡಿ
ಮೈಸೂರು 09 : ವಿದ್ಯಾರ್ಥಿಗಳು ಶಾಂತಿ ಕಾಪಾಡಿ
ಸಮಾಜಿಕ ಹೋರಟಗಾರ ವಿಕ್ರಂ ಅಯ್ಯಂಗಾರ್ ವಿದ್ಯಾರ್ಥಿಗಳಿಗೆ ಮನವಿ ಪರೀಕ್ಷೆ ಸಮಯದಲ್ಲಿ ಹಿಜಾಬ್ ವಿವಾದ ಸೃಷ್ಟಿ ಆಗಬಾರದಿತ್ತು. ವಿದ್ಯಾರ್ಥಿಗಳು ಈ ವಿಚಾರ ದೊಡ್ಡದು ಮಾಡುವ ಅಗತ್ಯವಿಲ್ಲ. ನ್ಯಾಯಾಲಯದ ಆದೇಶ ಬರುವವರೆಗೂ ಶಾಂತಿಯುತವಾಗಿರಬೇಕು’ ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಮನವಿ ಮಾಡಿದರು.‘ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳಲ್ಲಿ ಬಹುತೇಕರು ಬಡವರು ಹಾಗೂ ಜನಸಾಮಾನ್ಯರಾಗಿರುತ್ತಾರೆ. ಹಿಜಾಬ್ ವಿವಾದ ಮುಂದುವರಿಸಬಾರದು. ಹಿಜಾಬ್ ವಿಚಾರಕ್ಕೆ ಸಂಬಂಧಪಟ್ಟಂತೆ ಪರ ವಿರೋಧ ಪ್ರತಿಭಟನೆ ನಡೆಯ ದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.
‘ರಾಜ್ಯದಲ್ಲಿ ಕಳೆದ ಕೆಲ ದಿನ ಗಳಿಂದ ಸೃಷ್ಟಿಯಾಗಿರುವ ಹಿಜಾಬ್ ವಿವಾದವು ಮೂರನೇ ದರ್ಜೆ ರಾಜಕೀಯಕ್ಕೆ ವೇದಿಕೆಯಾದಂತಿದೆ. ಒಂದು ಕಡೆಯಿಂದ ಒಂದು ಬಣ್ಣದ ಶಾಲು ಬಂದರೆ ಮತ್ತೊಂದು ಕಡೆಯಿಂದ ಇನ್ನೊಂದು ಬಣ್ಣದ ಶಾಲುಗಳು ಬರುತ್ತಿವೆ. ಇದರಿಂದ ಜನರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ರಾಜಕೀಯ ಅಜೆಂಡಾಕ್ಕೆ ವಿದ್ಯಾರ್ಥಿಗಳು ದಾಳವಾಗಬಾರದು’ ಎಂದು ಕಿವಿಮಾತು ಹೇಳಿದರು.
‘ವಿವಿಧ ಸಮುದಾಯದ ವಿದ್ಯಾರ್ಥಿಗಳ ನಡುವೆ ಅನಗತ್ಯ ವಿವಾದ ಸೃಷ್ಟಿಸಿ ಕ್ಷುಲ್ಲಕ ವಿಚಾರವನ್ನು ಮಹತ್ವದ ವಿಷಯವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಇದರ ಭಾಗವಾಗಿ ಕಲ್ಲು ತೂರಾಟ, ಬೆಂಕಿ ಹಚ್ಚುವ ಘಟನೆಗಳು ನಡೆಯುತ್ತಿವೆ. ಇದು ಆತಂಕಕಾರಿ ಬೆಳವಣಿಗೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತಹ ಘಟನೆಗಳಿಗೆ ಸರ್ಕಾರ ಕೂಡಲೇ ಅಂತ್ಯ ಕಾಣಿಸಬೇಕು’ ಎಂದು ಒತ್ತಾಯಿಸಿದರು.
‘ವಿವಾದ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದೆ. ಹೈಕೋರ್ಟ್ ವಿವಾದದ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ತೀರ್ಪು ನೀಡುವವರೆಗೂ ಸರ್ಕಾರ ಶಾಂತಿ ಸುವ್ಯವಸ್ಥೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವಿವಾದದಿಂದ ಸಮಾಜಘಾತುಕ ಶಕ್ತಿಗಳು ಲಾಭ ಪಡೆಯುವ ಸಾಧ್ಯತೆ ಹೆಚ್ಚಿದೆ. ವಿವಾದವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಅವಕಾಶ ನೀಡಬಾರದು’ ಎಂದು ತಿಳಿಸಿದರು.
“ನ್ಯಾಯಾಲಯದ ಆದೇಶ ಬರುವವರೆಗೂ ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು’ ಎಂದು ಹೇಳಿದರು.



Post Comment