Loading Now

*ಶ್ರೀ ಅಂಗಾಳ ಪರಮೇಶ್ವರಿ ಸನ್ನಿಧಾನದಲ್ಲಿ “ಲೆಟ್ಸ್ ಬ್ರೇಕಪ್” ಗೆ ಚಾಲನೆ.*

*ಶ್ರೀ ಅಂಗಾಳ ಪರಮೇಶ್ವರಿ ಸನ್ನಿಧಾನದಲ್ಲಿ "ಲೆಟ್ಸ್ ಬ್ರೇಕಪ್" ಗೆ ಚಾಲನೆ.*

 *ಶ್ರೀ – ರಚನಾ ಜೋಡಿಯ ಈ ಚಿತ್ರಕ್ಕೆ ಸ್ವರೂಪ್ ನಿರ್ದೇಶನ.* 

“ಗಜಾನನ ಗ್ಯಾಂಗ್”, ” ಇರುವುದೆಲ್ಲವ ಬಿಟ್ಟು” ಚಿತ್ರಗಳಲ್ಲಿ ನಟಿಸಿರುವ ಶ್ರೀ  ಹಾಗೂ “ಲವ್ ಮಾಕ್ಟೇಲ್” ಮೂಲಕ ಜನಪ್ರಿಯರಾಗಿರುವ ರಚನಾ ಇಂದರ್ ನಾಯಕ – ನಾಯಕಿಯಾಗಿ‌‌ ಅಭಿನಯಿಸುತ್ತಿರುವ “ಲೆಟ್ಸ್ ಬ್ರೇಕಪ್” ಚಿತ್ರದ ಮುಹೂರ್ತ ಶ್ರೀ ಅಂಗಾಳ‌ ಪರಮೇಶ್ವರಿ ಸನ್ನಿಧಿಯಲ್ಲಿ ನೆರವೇರಿತು. ಜನವರಿ‌ ಒಂದರಿಂದ ಬೆಂಗಳೂರಿನಲ್ಲಿ ‌ಚಿತ್ರೀಕರಣ‌ ಆರಂಭವಾಗಲಿದೆ.
 ಸ್ವರೂಪ್ ಈ ಚಿತ್ರವನ್ನು  ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಸ್ವರೂಪ್ ಅವರದೆ. 
ಶ್ರೀ ಅಂಗಾಳ ಪರಮೇಶ್ವರಿ ಮೂವೀ ಮೇಕರ್ಸ್ ಲಾಂಛನದಲ್ಲಿ ಮಿರುನಾಲಿನಿ ಅವರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  ಐದು ಹಾಡುಗಳಿರುವ ಈ ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಸಂಗೀತ ನೀಡುತ್ತಿದ್ದಾರೆ. ಲವೀತ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ ಹಾಗೂ ಸತೀಶ್ ಅವರ ಕಲಾ ನಿರ್ದೇಶನ “ಲೆಟ್ಸ್ ಬ್ರೇಕಪ್” ಚಿತ್ರಕ್ಕಿದೆ.

Post Comment

You May Have Missed