Loading Now

ಗ್ರಾಹಕರು ದೇವರಿದಂತೆ

ಗ್ರಾಹಕರು ದೇವರಿದಂತೆ

*ಗ್ರಾಹಕರು ದೇವರಿದಂತೆ ಸಾರ್ವಜನಿಕರ ಬಳಿ ಉತ್ತಮ ಗುಣ ನಡವಳಿಕೆಯಿಂದ ಒಳ್ಳೆಯ ಮಾತುಗಳನ್ನಾಡುವ  ಮೂಲಕ  ಉತ್ತಮವಾದ ವ್ಯಾಪಾರ ಮಾಡಲು ಸಾದ್ಯ ಎಂದು ಮಾಜಿ ಸಭಾಪತಿಗಳಾದ ವಿ.ಆರ್.ಸುದರ್ಶನ್ ರವರು ತಿಳಿಸಿದರು*
ಕೋಲಾರ ತಾಲೂಕಿನ ವೇಮಗಲ್ ಸೀತಿ ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾದ ನಂದಿನಿ ಮಿಲ್ಕ್ ಪಾರ್ಲರ್ ನ ಪ್ರಾರಂಭೋತ್ಸವಕ್ಕೆ  ಟೇಪ್ ಕತ್ತರಿಸಿ ದೀಪ ಬೆಳಗುವುದರ ಮೂಲಕ ಪ್ರಾರಂಭಮಾಡಿ ಮಾತನಾಡಿ ಅವರು ಈಗಾಗಲೇ ವೇಮಗಲ್  ಬಸ್ ನಿಲ್ದಾಣದಲ್ಲಿ, ಪ್ರವಾಸಿ ಮಂದಿರದ ಬಳಿ (ಐ.ಬಿ),ನರಸಾಪುರ ರಸ್ತೆಯ ಕುರುಬರಹಳ್ಳಿ ಗೇಟ್ ನಲ್ಲಿ ಮೂರು ನಂದಿನಿ ಪಾರ್ಲರ್ ಇದ್ದು ನಾಲ್ಕನೇಯದಾಗಿ ಈ ಪಾರ್ಲರಾ್ ಪ್ರಾರಂಭವಾಗಿದೆ ಇದು ಸಹ ಉತ್ತಮವಾಗಿ ವ್ಯಾಪಾರವಾಗುವ  ಸ್ಥಳ ಏಕೆಂದರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ವಾರದ ಸಂತೆ, ಮಧ್ಯ ಭಾಗದಲ್ಲಿ ಇರುವುದರಿಂದ ಪಾರ್ಲರ್ ನ ಅವಶ್ಯಕತೆ ಹಾಗೂ ವ್ಯಾಪಾರಕ್ಕೆ ಒಳ್ಳೆಯ ಜಾಗ ಅದುದರಿಂದ ಸ್ನೇಹ ಬಾಂಧವ್ಯದಿಂದ ನಂದಿನಿ ಉತ್ಪನ್ನಗಳನ್ನು ಮಾತ್ರ ಮಾರಿ ಲಾಭಗಳಿಸಿ ಎಂದು ನೂತನ ಪಾರ್ಲರ್ ನ ಮಾಲೀಕರಾದ ವಿ.ಕೆ.ಚಂದ್ರಶೇಖರ್ ರವರಿಗೆ ಕಿವಿ ಮಾತನ್ನು ಹೇಳಿ ಮೊದಲನೇದಾಗಿ  ಪೇಡ,ಮೈಸೂರ್ ಪಾಕ್, ರಸ್ಕ್,ಚಾಕಲೇಟ್,ಬಿಸ್ಕೇಟ್,ಬ್ರೇಡ್ ಮುಂತಾದ ನಂದಿನಿ ಉತ್ಪನ್ನಗಳನ್ನು  ಖರೀದಿಸಿ ಬೋಣಿ ಮಾಡಿದರು.
ನಂತರ ಮಾತನಾಡಿದ ಮಾರುಕಟ್ಟೆಯ ಅಧೀಕ್ಷಕರಾದ  ನಂಜುಡೇಗೌಡರವರು ನಂದಿನಿಯ ಹಲವಾರು ಪ್ರಾಡಕ್ಟ್ ಗಳು ಈಗಾಗಲೇ ಪ್ರಾರಂಭವಾಗಿವೆ    ಮತ್ತಷ್ಟು ಪ್ರಾಡಕ್ಟ್ ಗಳು ಮುಂದಿನ ದಿನಗಳಲ್ಲಿ ಪ್ರಾರಂಭವಾಗಲಿವೆ   ಎಲ್ಲಾ ಉತ್ಪನ್ನಗಳನ್ನು ನಿಮಗೆ  ಸರಬರಾಜು ಮಾಡುತ್ತೇವೆ ಉತ್ತಮ ವ್ಯಾಪಾರ ಮಾಡಿ ಯಶ್ವಯಾಗಿ ಆದರೆ ನಂದಿನಿ ಉತ್ಪನ್ನಗಳನ್ನು ಬಿಟ್ಟು ಬೇರೆ ಯಾವುದನ್ನು ಮಾರುವಂತಿಲ್ಲ ಎಂದರು. ಹಾಗೂ ಈ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಕೋಚುಮುಲ್ ನಿರ್ದೇಶಕರಾದ ವಡಗೂರು ಡಿ.ವಿ.ಹರೀಶ್ ರವರು  ಬರಬೇಕಾಗಿತ್ತು ಕಾರಣಾಂತರಗಳಿಂದ  ಬರಲಾಗಲಿಲ್ಲ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಭಾಪತಿಗಳಾದ ವಿ.ಆರ್. ಸುದರ್ಶನ್, ಮಾರುಕಟ್ಟೆಯ ಅದೀಕ್ಷಕರಾದ ನಂಜುಂಡೇಗೌಡ, ಮಾರುಕಟ್ಟೆ ಸೂಪರ್ವೈಜರ್ಸ್ ರಾಮೇಗೌಡ, ಅನೀಲ್,ನೂತನ ಪಾರ್ಲರ್ ಮಾಲೀಕರಾದ ವಿ.ಕೆ.ಚಂದ್ರಶೇಖರ್, ಯುವ ಮುಖಂಡರಾದ  ವಿ.ಎಂ.ಪ್ರಕಾಶ್,ರಮೇಶ್,ಬಾಬು,ಹೋಟೆಲ್ ಮೂರ್ತಿ ಗ್ರಾಮಸ್ಥರು ಉಪಸ್ಥಿತರಿದ್ದರು.

Post Comment

You May Have Missed