Loading Now

ಸಿರಿ ಧಾನ್ಯಗಳ ಉಪಯೋಗಿಸಿ ಆರೋಗ್ಯ ಸಮಸ್ಯಯಿಂದ ಹೊರಬಂದು ಕ್ರಿಯ ಶೀಲರಾಗಿ ಎಂದು ಜೀನಿ ಮಿಲ್ಲೆಟ್ ಹೆಲ್ತ್ ಮಿಕ್ಸ್ ಮಾಲೀಕರಾದ ದೀಲಿಪ್ ಕುಮಾರ್.

ತಿ.ನರಸೀಪುರ ಸೆ.28:- ಸಿರಿ ಧಾನ್ಯಗಳಲ್ಲಿ ನಮ್ಮ ದೇಹಕ್ಕೆ ಅಗತ್ಯತೆಗೆ ತಕ್ಕಂತೆ ಬೇಕಾಗಿರುವ ಪೌಷ್ಟಿಕ ತತ್ವಗಳು ಇರುವುದರಿಂದ ಉತ್ತಮ ಆರೋಗ್ಯವಂತರಾಗಿ ಬದುಕ ಬಹುದೆಂದು ಸಿರಿ ಧಾನ್ಯಗಳ ಜೀನಿ ಮಿಲ್ಲೆಟ್ ಹೆಲ್ತ್ ಮಿಕ್ಸ್ ಮಾಲೀಕರಾದ ದೀಲಿಪ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಜೀನಿ ಮಿಲ್ಲೆಟ್ ಹೆಲ್ತ್ ಮಿಕ್ಸ್ ಉಪಯೋಗಿಸಿ ಆರೋಗ್ಯ ಸಮಸ್ಯಯಿಂದ ಹೊರಬಂದು ಕ್ರಿಯ ಶೀಲರಾಗಿ ಜೀವನ ನೆಡಸುತ್ತಿರುವ ಪಟ್ಟಣದ ರಾಜೇಶ್ವರಿ ರವರ ಯೋಗ ಕ್ಷೇಮ ಅರಿಯಲು ಆಗಮಿಸಿದ್ದ ವೇಳಿ ಜೆಡಿಎಸ್ ಮುಖಂಡ ತಿರಮಕೂಡಲು ಶ್ರೀನಿವಾಸ್ ರವರಿಂದ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಸಮತೋಲನವಾದ ಆಹಾರ ಪದ್ಧತಿಯಲ್ಲಿ ಸಿರಿ ಧಾನ್ಯಗಳು ನಮಗೆ ಆರೋಗ್ಯಕರವಾದ ಜೀವನವನ್ನು ಒದಗಿಸುತ್ತವೆ ಎಂದು ಹೇಳ ಬಹುದು. ಏಕೆಂದರೆ ಇತ್ತೀಚಿಗೆ ಜನರ ಬದಲಾದ ಜೀವನ ಶೈಲಿಯಿಂದ ಒಮ್ಮೆಲೇ ಕಾಡುತ್ತಿರುವ ಹೃದಯದ ಸಮಸ್ಯೆಗಳು, ಪಾರ್ಶ್ವವಾಯು, ರಕ್ತದ ಒತ್ತಡ, ಮಧುಮೇಹ ಹೀಗೆ ಹಲವು ಬಗೆಯ ದೀರ್ಘ ಕಾಲ ಕಾಡುವ ಕಾಯಿಲೆಗಳು ಜನರ ಜೀವವನ್ನು ಮತ್ತು ಜೀವನವನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಇಂತಹ ಆರೋಗ್ಯ ಸಮಸ್ಯ ಎದುರಿಸುತ್ತಿರುವವರಿಗೆ ಅಗಾಧವಾದ ಪೌಷ್ಟಿಕಾಂಶಗಳನ್ನು ಒಳಗೊಂಡ ಸಿರಿ ಧಾನ್ಯಗಳ ಉಪಯೋಗಿಸುವುದರಿಂದ ಆರೋಗ್ಯ ಸುಧಾರಿಸಲಿದೆ ಎಂದರು.

ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ.
ನಿಮ್ಮ ದೇಹದ ತೂಕವನ್ನು ನಿಮ್ಮ ಆರೋಗ್ಯಕ್ಕೆ ಯಾವುದೇ ಹಾನಿ ಆಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತವೆ.ಪ್ರತಿ ದಿನವೂ ತಾವು ಸೇವಿಸುತ್ತಿರುವ ಕ್ಯಾಲೋರಿಗಳ ಬಗ್ಗೆ ಹೆಚ್ಚು ಗಮನ ಹೊಂದಿದ ಜನರಿಗೆ ಹೇಳಿ ಮಾಡಿಸಿದ ಆಹಾರಗಳು ಎಂದರೆ ಅದು ಸಿರಿ ಧಾನ್ಯಗಳು ಎಂದು ಹೇಳಬಹುದು ಹಾಗೆ ನಿಮ್ಮ ಇಡೀ ದಿನ ಚುರುಕುತನದಿಂದ ಕೂಡಿರಲು ಮತ್ತು ನಿಮ್ಮ ದೇಹ ಸದೃಢತೆಯಿಂದ ನಡೆದುಕೊಳ್ಳಲು ಸಿರಿ ಧಾನ್ಯಗಳು ತುಂಬಾ ಸಹಕಾರಿ ಎಂದರು.

ಈ ಸಂದರ್ಭದಲ್ಲಿ ಬೆನಕನಹಳ್ಳಿ ಶಿವು, ಮಧು, ಮಲ್ಲೇಶ್,ವಿಮಲ್ ಮತ್ತಿತರರು ಹಾಜರಿದ್ದರು. 

Previous post

ಪೌರ ಕಾರ್ಮಿಕರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೂಡಬೇಕು ಎಂದು ಶಾಸಕ ಎಂ.ಅಶ್ವಿನ್ ಕುಮಾರ್.

Next post

ಮಹಾತ್ಮ ಗಾಂಧೀಜಿ ರವರ ರೀತಿ ನಾವಾಗಲು ಸಾದ್ಯವಿಲ್ಲ ಆದರೆ ಅವರ ಆದರ್ಶಗಳನ್ನು ಪಾಲಿಸಿ ನಮ್ಮ ಕೈಯಲ್ಲಾದ ಅಳಿಲು ಸೇವೆ ಮಾಡೋಣ ಎಂದು ಹಿರಿಯ ಸಿವಿಲ್ ನ್ಯಾಯಧೀಶ ಮಹವೀರ ಮ. ಕರೆಣ್ಣವರ ಅಭಿಮತ.

Post Comment

You May Have Missed