Loading Now

ಗ್ರಾ.ಪಂ.ಅಭಿವೃದ್ಧಿ ವಿಚಾರದಲ್ಲಿಆತ್ಮ ವಿಶ್ವಾಸದ ಮಾತುಗಳನ್ನಾಡಿದ ಗ್ರಾ.ಪಂ.ಅಧ್ಯಕ್ಷ ಕೆಂಪಯ್ಯ.

ತಿ.ನರಸೀಪುರ. ಅ.23:-  ನಿರೀಕ್ಷಿತ ಗುರಿ ಮುಟ್ಟದಿದ್ದರು ಸಹ ಜನರಿಗೆ ಮೂಲ ಭೂತ ಸೌಕರ್ಯ ಕಲ್ಪಿಸಿಕೂಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಅದರಲ್ಲಿ ಆತ್ಮ ತೃಪ್ತಿ ಹೊಂದಿದ್ದೇನೆ ಎಂದು ಗ್ರಾ.ಪಂ.ಅಧ್ಯಕ್ಷ ಕೆಂಪಯ್ಯ ಆತ್ಮ ವಿಶ್ವಾಸದ ಮಾತುಗಳನ್ನಾಡಿದರು.
ತಾಲ್ಲೂಕಿನ ತಲಕಾಡು ಗ್ರಾ.ಪಂ.ಕಛೇರಿಯಲ್ಲಿ ಸುದ್ದಿಗಾರರ ಜೊತೆ ವಿಷಯ ಹಂಚಿಕೊಂಡು ಮಾತನಾಡಿದ ಕೆಂಪಯ್ಯ ತಲಕಾಡು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡ ಸಂದರ್ಭದಲ್ಲಿ ಗ್ರಾ.ಪಂ.ಅಭಿವೃದ್ಧಿ ವಿಚಾರದಲ್ಲಿ ಹಲವಾರು ಕನಸುಗಳನ್ನು ಕಟ್ಟಿಕೊಂಡಿದ್ದೆ ಅವುಗಳಲ್ಲೆವನ್ನು ಗುರಿ ಮುಟ್ಟಲು ಸಾಧ್ಯವಾಗಿಲ್ಲ ಆದರೆ ಜನ ಸಾಮಾನ್ಯರಿಗೆ ದಿನ ನಿತ್ಯ ಬಳಕೆಯ ಅತ್ಯವಶ್ಯಕವಾದ  ಸೌಲಭ್ಯಗಳನ್ನು ಸದಸ್ಯರ ಸಹಕಾರದೊಂದಿಗೆ ಕಲ್ಪಿಸಿದ್ದೇನೆ ಎಂದರು.
ಆಧುನಿಕ ಸ್ಪರ್ಸ್ ಹೊಂದಿರುವ ನೂತನ ಗ್ರಾ.ಪಂ. ಕಟ್ಟಡವನ್ನು 15 ನೇ ಹಣಕಾಸು, ನರೇಗಾದ ಜೊತೆಗೆ ಶಾಸಕರು ಹಾಗೂ ಸಂಸದ ಸದಸ್ಯರ ಅನುಧಾನದ ಅಡಿಯಲ್ಲಿ ಸುಮಾರು 28 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಈಗಾಗಲೇ ಭೂಮಿ ಪೂಜೆಯನ್ನು ಸ್ಥಳೀಯ ಶಾಸಕ ಎಂ.ಅಶ್ವಿನ್ ಕುಮಾರ್ ಮತ್ತು ಸಂಸದ ಸದಸ್ಯ ವಿ.ಶ್ರೀನಿವಾಸ್ ಪ್ರಸಾದ್ ರವರ ಜೊತೆಗೂಡಿ ಮಾಡಲಾಗಿದ್ದು ಕಟ್ಟಡ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಹಾಗೂ ಗ್ರಾ.ಪಂ.ವ್ಯಾಪ್ತಿಯ ಲ್ಲಿ ಕುಡಿಯುವ ನೀರು,ಬೀದಿ ದೀಪ ಹಾಗೂ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ ಅಲ್ಲದೆ  ಪಂಚಾಯತಿಯಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುತ್ತದೆ ಎಂದರು.
ಮುಂದುವರಿದ ಮಾತನಾಡಿದ ಕೆಂಪಯ್ಯ ಗ್ರಾ.ಪಂ.ವ್ಯಾಪ್ತಿಯ ಜನರಿಗೆ  ಕೋವಿಡ್ ಬಗ್ಗೆ ಅರಿವು ಮೂಡಿಸುವ ಜೊತೆಗೆ ಅವರಿಗೆ ಲಸಿಕೆ ಹಾಕಿಸುವ ಕೆಲಸವನ್ನು ಸರ್ಕಾರದ ನಿರ್ದೇಶನದಂತೆ ಮಾಡಲಾಗುತ್ತಿದೆ,ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ಲಸಿಕೆ ಮುಕ್ತ ಗ್ರಾ.ಪಂ.ಆಗಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದರಲ್ಲದೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಸಹ ಕೊರೂನ ಲಸಿಕೆಯನ್ನು ಪಡೆದುಕೊಳ್ಳಲು ಮನವಿ ಮಾಡಿದರು.

Previous post

ಪುರಸಭೆ ಸದಸ್ಯರ ಗೈರು ಹಾಜರಿಯಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳತೆಯಲ್ಲಿ ಸರಳವಾಗಿ  ಆಚರಣೆ ಮಾಡಿದ ಪುರಸಭೆ ಅಧಿಕಾರಿಗಳು.

Next post

ಕರೋನಾ ವೀರರಂತೆ ಪೌರ ಕಾರ್ಮಿಕರು ಕರ್ತವ್ಯ ನಿರ್ವಹಿಸಿದರು ಎಂದು ಪುರಸಭೆ ಮುಖ್ಯಾಧಿಕಾರಿ ಜಿ. ಗಿರೀಶ್.

Post Comment

You May Have Missed