ಪುರಸಭೆ ಸದಸ್ಯರ ಗೈರು ಹಾಜರಿಯಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳತೆಯಲ್ಲಿ ಸರಳವಾಗಿ ಆಚರಣೆ ಮಾಡಿದ ಪುರಸಭೆ ಅಧಿಕಾರಿಗಳು.
ತಿ.ನರಸೀಪುರ. 21:ಪುರಸಭೆ ಸದಸ್ಯರ ಗೈರು ಹಾಜರಿಯಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳತೆಯಲ್ಲಿ ಸರಳವಾಗಿ ಆಚರಣೆ ಮಾಡಿದ ಪುರಸಭೆ ಅಧಿಕಾರಿಗಳು.
ಭಾರತದ ಭವ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮೇರುಕೃತಿಯನ್ನು ರಚಿಸಿದ ಹಾಗೂ ಸಮಾಜಕ್ಕೆ ಉತ್ತಮ ಪುರಷನನ್ನು ಪರಿಚಯಿಸಿದ ಶ್ರೇಷ್ಠ ಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಪಟ್ಟಣದ ಪುರಸಭೆ ಕಛೇರಿ ಆವರಣದಲ್ಲಿ ಚುನಾಯಿತ ಪುರಸಭೆ ಸದಸ್ಯರ ಗೈರು ಹಾಜರಿಯಲ್ಲಿ ಜನ ಸಾಮಾನ್ಯರು ಬೊಟ್ಟು ಮಾಡಿ ತೋರಿಸುವ ರೀತಿಯಲ್ಲಿ ಆಚರಣೆ ಮಾಡುವ ಪರಿಸ್ಥಿತಿ ಪುರಸಭೆಗೆ ಬಂದೊದಗಿದ್ದು ವಿಪರ್ಯಾಸವಾಗಿತ್ತು.

23 ಸದಸ್ಯರ ಸಂಖ್ಯಾ ಬಲವನ್ನು ಹೊಂದಿರುವ ತಿ.ನರಸೀಪುರ ಪುರಸಭೆ ವಾಲ್ಮೀಕಿ ಜಯಂತಿಗೆ ಆಗಮಿಸಿದ್ದು ಮೂರು ಮಂದಿ ಮಾತ್ರ ಒಬ್ಬರು ಪ್ರಭಾರ ಅಧ್ಯಕ್ಷೆ ಪ್ರೇಮ ಹಾಗೂ ಸದಸ್ಯ ಮಂಜುನಾಥ್ ಮತ್ತು ಸಿಸ್ಟಮ್ ಸಿದ್ದು ಉಳಿದ 20 ಜನ ಸದಸ್ಯರು ಜಯಂತಿ ಸಂದರ್ಭದಲ್ಲಿ ಕಛೇರಿಯತ್ತ ತಿರುಗಿ ನೋಡದೇ ಇದಿದ್ದು ಇವರ ಜವಬ್ದಾರಿಯನ್ನು ಸಮಾಜಕ್ಕೆ ಎತ್ತಿ ತರಿಸಿದೆ.
ಪುರಸಭೆಗೆ ಬರುವ ಅನುಧಾನ ಹಂಚಿಕೆಯ ತುರ್ತು ಸಭೆಗೆ ಹಾಜರಾಗುವ ಸದಸ್ಯರು ದೇಶ ಕಂಡ ಅತ್ಯಂತ ಶ್ರೇಷ್ಠ ಮಹನೀಯ ವಾಲ್ಮೀಕಿ ಜಯಂತಿಗೆ ಹಾಜರಾಗದೇ ಉಳಿದಿರುವುದು ಯಕ್ಷ ಪ್ರಶ್ನೆಯಾಗಿದೆ ಅಲ್ಲದೆ ಈ ಜಯಂತಿಗೆ ಸದಸ್ಯರು ಗೈರು ಹಾಜರಾಗಲು ಪುರಸಭೆ ಅಧಿಕಾರಿಗಳು ಕಾರಣನಾ ಅಥವಾ ಅಧ್ಯಕ್ಷಗಾದಿಗಾಗಿ ಸದಸ್ಯರ ನಡುವೆ ನೆಡಯುತ್ತಿರುವ ಶಿಥಲ ಸಮರ ಕಾರಣವೇ ತಿಳಿಯದಾಗಿದೆ, ಒಟ್ಟಾರೆ ಅಧಿಕಾರಿಗಳು ಮತ್ತು ಸದಸ್ಯರ ನಡುವೆ ಏನೇ ಇರಲಿ ಈ ಮಾಹನ್ ವ್ಯಕ್ತಿಯ ಜಯಂತಿಗೆ ಭಾಗವಹಿಸದೇ ಅಗೌರವ ತೋರಿದ್ದು ಬೇಸರದ ಸಂಗತಿಯಾಗಿದೆ.
ಪುರಸಭೆ ಮುಖ್ಯಾಧಿಕಾರಿ ಬಸವರಾಜು ಸುದ್ದಿಗಾರರ ಜೊತೆ ಮಾತನಾಡಿ ಎಲ್ಲಾ ಸದಸ್ಯರಿಗೂ ಜಯಂತಿ ಕಾರ್ಯಕ್ರಮದ ಮಾಹಿತಿ ನೀಡಲಾಗಿದೆ ಆದರೂ ಸದಸ್ಯರು ಭಾಗವಹಿಸಿಲ್ಲ ಈ ಬಗ್ಗೆ ಸದಸ್ಯರ ಜೊತೆ ಮಾತನಾಡಿ ಮುಂದೆ ಈ ರೀತಿಯ ಘಟನೆ ಸಂಭವಿಸಂದತ್ತೆ ನೋಡಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಆರ್ .ಐ.ಪುಟ್ಟಸ್ವಾಮಿ ,ಯೋಜನಾಧಿಕಾರಿ ಕೆಂಪ್ಪರಾಜು,ಸಮುದಾಯ ಸಂಘಟಕ ಮಹದೇವನಾಯಕ,ಹಿರಿಯ ಆರೋಗ್ಯಧಿಕಾರಿ ಚೇತನ್ ಕುಮಾರ್ ,ಕಿರಿಯ ಆರೋಗ್ಯಧಿಕಾರಿ ಮಹೇಂದ್ರ ,ಬಿಲ್ ಕಲೆಕ್ಟರ್ ಪುಟ್ಟ ಸ್ವಾಮಿ,ರಾಜೇಂದ್ರ ,ಗೋಪಾಲ್ ,ಕೃಷ್ಣಪ್ಪ ಮತ್ತಿತರರು ಹಾಜರಿದ್ದರು .



Post Comment