ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ತಾಲ್ಲೂಕು ಕಛೇರಿ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಕಾರ್ಯಕ್ರಮ.
ತಿ.ನರಸೀಪುರ ಅ.12:- ಡಾ.ಬಿ.ಆರ್.ಅಂಬೇಡ್ಕರ್ ರವರ 65 ನೇ ಧಮ್ಮ ದೀಕ್ಷೋತ್ಸವ ಹಾಗೂ ಸಾಮ್ರಾಟ್ ಅಶೋಕ ಚಕ್ರವರ್ತಿಯ ಧಮ್ಮ ವಿಜಯ ಮತ್ತು ಅಂಬೇಡ್ಕರ್ ಪ್ರತಿಮೆ ನಿರ್ಮಾಣದ ಎರಡನೇ ವರ್ಷದ ಕಾರ್ಯ ಕ್ರಮವನ್ನು ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ತಾಲ್ಲೂಕು ಕಛೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಹತ್ತಿರ ಅ.14ರ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಒಕ್ಕೂಟದ ಸಂಚಾಲಕ ಆಲಗೂಡು ಡಾ.ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸುದ್ಧಿಗೋಷ್ಟಿ ನೆಡಸಿ ಮಾತನಾಡಿದ ಅವರು ಅಂಬೇಡ್ಕರರ ಧಮ್ಮ ದೀಕ್ಷೋತ್ಸವ ಹಾಗೂ ಅಶೋಕ ಚಕ್ರವರ್ತಿಯ ಧಮ್ಮ ವಿಜಯದ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಳ್ಳ ಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೋಧಿರತ್ನ ಭಂತೇಜಿ ಸೇರಿದಂತೆ ಸುಗತಪಾಲ ಭಂತೇಜಿ ಹಾಗೂ ಬುದ್ಧರತ್ನ ಭಂತೇಜಿ ದಿವ್ಯ ಸಾನಿಧ್ಯ ವಹಿಸಲಿದ್ದು ಶಾಸಕ ಎಂ.ಅಶ್ವಿನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಉದ್ಘಾಟಿಸುವರು. ವರುಣ ಶಾಸಕ ಡಾ.ಎಸ್.ಯತೀಂದ್ರ ಪುಷ್ಪಾರ್ಚನೆ ಮಾಡುವರು. ಸಮಾರಂಭದಲ್ಲಿ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞ ಡಾ.ರೇವಣ್ಣ, ಕೀಲು ಮತ್ತು ಮೂಳೆ ತಜ್ಞ ಡಾ.ದಯಾನಂದ ಬಾಬು, ನೇತ್ರ ತಜ್ಞೆ ಡಾ.ಭಾರತಿ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಆರ್.ವಿನಯ್ ಕುಮಾರ್ ಅವರನ್ನು ಸನ್ಮಾಸಲಾಗುವುದು ಎಂದು ಮಾಹಿತಿ ನೀಡಿದರು.
ಒಕ್ಕೂಟದ ಸಂಚಾಲಕ ಸೋಸಲೆ ಶಶಿಕಾಂತ್ ಮಾತನಾಡಿ ಸಾಮಾಜಿಕ ಜಾಗೃತಿಯ ಹಿನ್ನಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯಾವುದೇ ಗುಂಪುಗಾರಿಕೆ ಮಾಡುವ ಉದ್ದೇಶವಿಲ್ಲ. ಯಾರನ್ನೂ ನಿರ್ಲಕ್ಷ್ಯಿಸುವ ಉದ್ದೇಶ ಒಕ್ಕೂಟಕ್ಕಿಲ್ಲ ಈ ಕಾರ್ಯಕ್ರಮ ತ್ಯಾಗಮಯಿಗಳನ್ನು ನೆನೆಯುವ ಮತ್ತು ಗೌರವಿಸುವ ಕಾರ್ಯಕ್ರಮವಾಗಿದೆ ಎಂದರು.
ಮುಂದುವರೆದು ಮಾತನಾಡಿದ ಶಶಿಕಾಂತ್ಶ್ವೇತವರ್ಣಮಯವಾಗಿ ಕಂಗೋಳಿಸಲಿರುವ ತಾಲ್ಲೂಕು ಕಛೇರಿ ಮುಂಭಾಗದ ಅಂಬೇಡ್ಕರ್ ಉದ್ಯಾನವನದಲ್ಲಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಕಾರ್ಯ ಕ್ರಮದಲ್ಲಿ ಭಾಗವಹಿಸುವವರು ಶಾಂತಿಯ ಸಂಕೇತವಾದ ಶ್ವೇತವರ್ಣದ ಬಿಳಿ ವಸ್ತ್ರಗಳನ್ನು ಧರಿಸಿ ಬರುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೇರಗು ತರಬೇಕು ಹಾಗೂ ಕಾರ್ಯ ಕ್ರಮಕ್ಕೆ ಸಮುದಾಯದ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಇತರೆ ಸಮುದಾಯದ ಬಂದುಗಳು ಸಹ ಈ ಕಾರ್ಯ ಕ್ರಮದಲ್ಲಿ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸುದ್ಧಿಗೋಷ್ಟಿಯಲ್ಲಿ ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ, ಕದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಬನ್ನಹಳ್ಳಿ ಸೋಮಣ್ಣ, ಜಿಲ್ಲಾಧ್ಯಕ್ಷ ರಾಜಶೇಖರಮೂರ್ತಿ ಸೋಸ್ಲೆ,ದಸಂಸ ಸಂಚಾಲಕರಾದ ಕುಕ್ಕೂರು ರಾಜು, ನಿಂಗರಾಜು ಕೆಬ್ಬೆಹುಂಡಿ, ಜಿಲ್ಲಾ ಸಂಘಟನಾ ಆಲಗೂಡು ಶಿವಣ್ಣ, ಸಂಚಾಲಕರಾದ ಸುರೇಶ್ ಯರಗನಹಳ್ಳಿ ಯಡದೊರೆ ಮಹದೇವಯ್ಯ, ಅಂಬೇಡ್ಕರ್ ಸೇನೆ ಅಧ್ಯಕ್ಷ ಮಹದೇವಸ್ವಾಮಿ, ಮುಖಂಡರಾದ ಕೆಂಪಯ್ಯನಹುಂಡಿ ರಾಜು, ನಂಜುಂಡಯ್ಯ ಸೋಸಲೆ, ಗಂಗಾಧರ, ಬಸವರಾಜು ಬನ್ನಹಳ್ಳಿ, ಚೌಹಳ್ಳಿ ಶಾಂತರಾಜು, ಹೊಸಕೋಟೆ ಕುಮಾರ, ಮಹೇಶ್ ಚಿದರವಳ್ಳಿ, ಮಹದೇವಸ್ವಾಮಿ ನರಗ್ಯಾತನಹಳ್ಳಿ, ಸಿದ್ದರಾಜು ಯಾಚೇನಹಳ್ಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.




Post Comment