ಜಾನಪದ ಮೂಲ ಬೇರನ್ನು ಯಾರು ಮರೆಯಬಾರದು ಎಂದು ಅಭಿಮತ ವ್ಯಕ್ತಪಡಿಸಿದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹೆಸರಾಂತ ಶಸ್ತ್ರ ಚಿಕಿತ್ಸೆ ತಜ್ಞ ಡಾ.ರೇವಣ್ಣ
ತಿ.ನರಸೀಪುರ. ಅ.09:- ಕಲೆ ಸಾಹಿತ್ಯ ಸಂಸ್ಕೃತಿಗೆ ಮೂಲ ಬೇರು ಜಾನಪದ ಈ ಮೂಲ ಬೇರನ್ನು ಯಾರು ಮರೆಯಬಾರದು ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹೆಸರಾಂತ ಶಸ್ತ್ರ ಚಿಕಿತ್ಸೆ ತಜ್ಞ ಡಾ.ರೇವಣ್ಣ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕೊಳತ್ತೊರು ಪಿ.ಮಹದೇವಸ್ವಾಮಿ ಜಾನಪದ ಕಲಾತಂಡ ಅಯೋಜನೆ ಮಾಡಿದ್ದ ಜಾನಪದ ಹಾಡುಗಾರಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಳ್ಳಿಯಿಂದಲೇ ಡೆಲ್ಲಿ , ಡೆಲ್ಲಿಯಿಂದ ಹಳ್ಳಿಯಲ್ಲ ಎಂಬ ಮಾತಿರುವಂತೆ ಜಾನಪದ ಕಲೆ ಇಲ್ಲದೆ ಇತರೆ ಕಲೆ ಸಾಹಿತ್ಯಗಳು ಇರಲು ಸಾದ್ಯವಿಲ್ಲ ಎಲ್ಲಾ ಕಲೆ ಸಾಹಿತ್ಯ ಸಂಸ್ಕೃತಿಗಳು ಜಾನಪದ ದಿಂದ ಜೀವ ತಾಳಿವೆ ಎಂದರು ಅಲ್ಲದೆ ಜಾನಪದ ಹಾಡುಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಇಂದಿನ ಆಧುನಿಕತೆಯ ಭರಾಟೆಯಲ್ಲಿ ಅವು ನಶಿಸಿಹೋಗುತ್ತಿದ್ದು. ಉಳಿಸುವ ಕಾರ್ಯ ಇಂದು ಎಲ್ಲೆಡೆ ಆಗಬೇಕಿದೆ ಎಂದರು.
ಜನಪದ ಸಾಹಿತ್ಯ ಕೇವಲ ಕಲೆಯಾಗಿ ಮಾತ್ರ ಉಳಿದಿಲ್ಲ ಅದು ಒಂದು ವಿಶಿಷ್ಠವಾದ ಸಂಸ್ಕೃತಿಯನ್ನು ನಮಗೆ ಪರಿಚಯಿಸುತ್ತದೆ. ಇದರಲ್ಲಿ ನಮ್ಮ ಬದುಕಿನ ಅಂತ,ಸತ್ವ ಅಡಗಿದೆ, ಗ್ರಾಮೀಣ ಸಂಸ್ಕೃತಿ ಇಂದು ನಗರ ಮತ್ತು ಪಟ್ಟಣಗಳಲ್ಲಿ ಕಾಣಸಿಗುವುದಿಲ್ಲ, ಗ್ರಾಮೀಣ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜನಪದ ಸಾಹಿತ್ಯ, ನಾಟಿ ಔಷಧ, ಅಸಾದಿ ಪದಗಳು, ಗೊಂಬೆಯಾಟ, ವೀರಗಾಸೆ, ಡೊಳ್ಳುಕುಣಿತ ತತ್ವಪದಗಳು, ಭಜನೆ ಸೇರಿದಂತೆ ಇನ್ನಿತರ ಗ್ರಾಮೀಣ ಭಾಗದ ಕಲೆಗಳು ಜೀವಂತವಾಗಿ ಉಳಿಯಬೇಕು, ಎಂದು ತಿಳಿಸಿದರು.
ಪೊಲೀಸ್ ನಿರೀಕ್ಷಕ ಕೃಷ್ಣಪ್ಪ ಮಾತನಾಡಿ ಜಾನಪದ ಕಲೆ ಬೆಲೆ ಕಟ್ಟಲಾಗದ ಅದ್ಭುತ ಕಲೆಯಾಗಿದೆ ದೇವಾನು ದೇವತೆಗಳ ಹಾಗೂ ಮಹನೀಯರ ಜೀವನ ಶೈಲಿಯನ್ನ ಹಾಡಿನ ಮೂಲಕ ಪ್ರಪಂಚಕ್ಕೆ ಪರಿಚಯಿಸುವ ಕೆಲಸವನ್ನು ಅಂದಿನಿಂದ ಇಂದಿನವರೆಗೂ ಜಾನಪದ ಮಾಡುತ್ತಿದೆ ಎಂದರು.
ಶ್ರಮಿಕರು ತಮ್ಮ ಶ್ರಮವನ್ನು ಮರೆಯುವ ಸಲುವಾಗಿ ಕೃಷಿ ಚಟುವಟಿಕೆ ಹಾಗೂ ವಕ್ಕಲು ತನಗಳಲ್ಲಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರು, ಅವು ಬಾಯಿಂದ ಬಾಯಿಗೆ ಹರಿದಾಡುತ್ತಾ ಸಾವಿರಾರು ಜನಪದ ಗೀತೆಗಳಾಗಿ ಹೊರವಮ್ಮಿವೆ, ನಮ್ಮ ಗ್ರಾಮೀಣ ಭಾಗದಲ್ಲಿ ಸೋಬಾನೆ, ಪದ, ಬೀಸುವಕಲ್ಲಿನ ಪದ, ತೊಟ್ಟಿಲ ಪದ, ಇವುಗಳು ಈಗಲೂ ಜೀವಂತಿಕೆಯಾಗಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಮಾತನಾಡಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ತಾಕತ್ತು ಇದ್ದರೆ ಅದು ಜಾನಪದ ಸಾಹಿತ್ಯಕ್ಕೆ ಮಾತ್ರ ಜಗತ್ತು ಆಧುನಿಕವಾಗಿ ಮುಂದೆ ಸಾಗುತ್ತಿ ದೆ ಮನುಷ್ಯ ಸಹ ಅಷ್ಟೇ ವೇಗವಾಗಿ ತನ್ನ ಜೀವನ ಶೈಲಿಯನ್ನ ಬದಿಲಿಸಿಕೊಂಡು ನೆಡಯುವ ಅನಿವಾರ್ಯತೆ ಮತ್ತು ತವಕದಲ್ಲಿ ಸಾಗಿದ್ದಾನೆ ಈ ನಡುವೆ ಜಂಜಾಟದ ಜೀವನ ಆತನನ್ನು ಕುಗ್ಗಿಸಿ ನಾನ ಸಮಸ್ಯಗಳಿಗೆ ಸಿಲುಕಿಸಿದೆ ಈ ಸಮಸ್ಯಗಳಿಂದ ಆಚೆ ಕರೆತರುವ ಶಕ್ತಿ ಈ ಜಾನಪದ ಕಲೆಗೆ ಇರುವುದರಿಂದ ಇಂತಹ ವೇದಿಕೆಗಳತ್ತ ಸಮಯ ಪ್ರತಿಯೊಬ್ಬರು ಮೀಸಲಿಡುವುದು ಒಳ್ಳಯದು ಎಂದರು.
ಬಾಕ್ಸ್ ಸುದ್ದಿ.”ಜನಪದ ಕಲೆಗಳು ಮತ್ತು ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ನಶಿಸಿ ಹೋಗುತ್ತಿರುವು ದು,ಒಂದು ಆತಂಕಕಾರಿ ವಿಷಯವಾದರೂ ಸಹ ಜಾನಪದವನ್ನು ಪ್ರೀತಿಸುವ ಕೊಳತ್ತೂ ರು ಪಿ. ಮಹದೇವಸ್ವಾಮಿ ಅಂತವರಿಂದ ಜಾನಪದ ಕಲೆ ಭವಿಷ್ಯದಲ್ಲೂ ಉಳಿಯುವ ಭರವಸೆ ಇದೆ” ಪ್ರಥಮ ದರ್ಜೆ ಗುತ್ತಿಗೆದಾರ ಹೊಸಪುರ ಮಲ್ಲು.”ಜನ ಸಾಮಾನ್ಯರ ಬದುಕಿನ ನಿತ್ಯದ ನುಡಿಯ ಹಾಡಾಗಿರುವ ಜಾನಪದವನ್ನು ಉಳಿಸಿ ಬೆಳೆಸಲು ಜಾನಪದ ಹಿನ್ನೆಲೆಯಿರುವ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ವನ್ನು ಪ್ರಸ್ತುತದಲ್ಲಿ ನೀಡಬೇಕಾಗಿದೆ”ಉಪ ತಹಶೀಲ್ದಾರ್ ಜೆ.ಕೆ.ಪ್ರಭುರಾಜ್.ಈ ಸಂದರ್ಭದಲ್ಲಿ ಕನ್ನಡಸೇನೆ ಪುಟ್ಟಸ್ವಾಮಿ, ಪ್ರಭುಸ್ವಾಮಿ,ಅನಾಥ ಶವ ಮುಕ್ತಿದಾಯಕ ಡಾ.ಎಂ.ಮಾದೇಶ್.ಕಲಾವಿದ ಕೊಳತ್ತೂರು ಪಿ. ಮಹದೇವಸ್ವಾಮಿ,ಫೈಲ್ವಾನ್ ರೇವಣ್ಣ,ಉಪನ್ಯಾಸಕ ಕುಮಾರಸ್ವಾಮಿ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಮೂರ್ತಿ,ಡಿಎಸ್ ಎಸ್ ಮುಖಂಡ ಸೋಸಲೆ ಶಶಿಕಾಂತ್, ವಕೀಲ ವೀರಭದ್ರ ಸ್ವಾಮಿ ಮತ್ತಿತರರು ಹಾಜರಿದ್ದರು.




Post Comment