ಗ್ರಾಮಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಶಾಸಕ ಎಂ.ಅಶ್ವಿನ್ ಕುಮಾರವರಿಂದ ಕರೆ .
ತಿ.ನರಸೀಪುರ. ಅ.17:-ಗ್ರಾಮಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯ ಕ್ರಮದ ಸದುಪಯೋಗವನ್ನು ಪಡೆದು ಕೊಳ್ಳುವಂತೆ ಶಾಸಕ ಎಂ.ಅಶ್ವಿನ್ ಕುಮಾರ್ ಕರೆ ನೀಡಿದರು.
ತಾಲ್ಲೂಕಿನ ಹೆಮ್ಮಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರನಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಉದ್ಘಾಟನೆಯನ್ನು ಸರ್ಕಾರಿ ಶಾಲಾ ಆವರಣದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಶಾಸಕರು ಗ್ರಾಮಸ್ಥರ ಅಹವಾಲು ಆಲಿಸಲು ಹಾಗೂ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿಕೊಡಲು ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುಲು ಸರಕಾರ ಈ ಕಾರ್ಯಕ್ರಮಕ್ಕೆ ಪುನಃ ಚಾಲನೆ ನೀಡಿದೆ, ಅದರಂತೆ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಯವರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಲ್ಪಿಸಿಕೊಡಲಿದ್ದಾರೆ ತಾವು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.
ಸಭೆಯಲ್ಲಿ ಗ್ರಾ.ಪಂ.ಸದಸ್ಯ ಹೆಮ್ಮಿಗೆ ಹೊನ್ನನಾಯಕ ಮಾತನಾಡಿ ತಾಲ್ಲೂಕು
ಕಛೇರಿಯಲ್ಲಿ ನಾಯಕ ಜನಾಂಗದ ಜಾತಿ ಪ್ರಮಾಣ ಪತ್ರ ನೀಡಲು ಸರ್ಕಾರದ ನಿಯಮದ ಜೊತೆಗೆ ತಾಲ್ಲೂಕು ಆಡಳಿತ ಕೆಲವೊಂದು ವೈಯಕ್ತಿಕ ನಿಬಂಧನೆಗಳನ್ನು ಹಾಕಿರುವುದರಿಂದ ಈ ಸಮುದಾಯ ಸರ್ಕಾರದ ಸೌಲಭ್ಯದಿಂದ ವಂಚಿತವಾಗುತ್ತಿದೆ ಈ ಸಮಸ್ಯ ಜರುರಾಗಿ ಬಗೆಹರಿಸಬೇಕು ಹಾಗೂ ಸರ್ವೆ ನಂ ಸೇರಿದಂತೆ ಗ್ರಾಮ ಠಾಣೆ ವ್ಯಾಪ್ತಿಯಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಫಲಾನುಭವಿಗಳಿಗೆ ಪಂಚಾಯಿತಿಯಲ್ಲಿ ದಾಖಲಾತಿ ಮಾಡಿಕೂಡುವಂತೆ ಆದೇಶ ನೀಡಬೇಕೆಂದು ಮನವಿ ಮಾಡಿದರು ಹಾಗೂ ಮಾರನಪುರ ಗ್ರಾಮಸ್ಥರು ರಸ್ತೆ ಚರಂಡಿ,ಶಾಲಾ ಕೊಠಡಿ, ವಿದ್ಯುತ್ ತಂತಿ ಮತ್ತು ಕಂಬ ಬದಲಾವಣೆ,ಖಾಲಿ ನಿವೇಶನ, ಸಾರಿಗೆ ಸಂಪರ್ಕ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಬೇಡಿಕೆ ಇಟ್ಟರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ ಮಾತನಾಡಿ ಹೆಮ್ಮಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾರನಪುರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಕಡೆಯಿಂದ 73 ಅರ್ಜಿಗಳು ಬಂದಿರುವುದು ಈ ಕಾರ್ಯಕ್ರಮಕ್ಕೆ ಶೋಭೆ ತಂದಿದೆ ಹಾಗೂ ಇದೊಂದು ಒಳ್ಳೆಯ ಬೆಳವಣಿಗೆ ಸಹ ಎಂದರು.

ಗ್ರಾಮಸ್ಥರು ಕೊಟ್ಟಿರುವ ಅರ್ಜಿಗಳನ್ನು ಇನ್ನೆರಡು ಮೂರು ದಿನದಲ್ಲಿ ಕಾನೂನು ನಿಯಮ ಪ್ರಕಾರ ಸಮಸ್ಯ ಬಗೆಹರಿಸುತ್ತೇವೆ ನಮ್ಮ ಹಂತ ಮೀರಿದರೆ ಸರ್ಕಾರದ ಮಟ್ಟದಲ್ಲಿ ಶಾಸಕರ ಜೊತೆಗೂಡಿ ಸಮಸ್ಯ ಬಗೆಹರಿಸುತ್ತೇವೆ ಹಾಗೂ ಈ ಒಂದು ವಿನೂತನ ಕಾರ್ಯಕ್ರಮ ಎಜಿಎಸ್.ಸಕಲದಡಿಯಲ್ಲಿ ಹೊಸ ಅರ್ಜಿ ಸ್ವೀಕರಣೆ ಹಳೆ ಅರ್ಜಿ ವಿತರಣೆ ನವಂಬರ್ 14 ವರಗೆ ಇರುತ್ತೆ ಎಂದು ಮಾಹಿತಿ ನೀಡಿದರು ಹಾಗೂ ಸರ್ವೆ ನಂ ಸೇರಿದಂತೆ ಗ್ರಾಮ ಠಾಣೆ ವ್ಯಾಪ್ತಿಯಲ್ಲಿ ಮನೆಗಳನ್ನು ಕಟ್ಟಿಕೊಂಡಿರುವ ಫಲಾನುಭವಿಗಳಿಗೆ ಪಂಚಾಯಿತಿಯಲ್ಲಿ ದಾಖಲಾತಿ ಮಾಡಿಕೂಡುವಂತೆ ಆದೇಶ ನೀಡಬೇಕೆಂಬ ಬೇಡಿಕೆ ಇಟ್ಟಿದ್ದೀರಾ ಈ ಬೇಡಿಕೆಯನ್ನು ಈ ಗ್ರಾಮದಿಂದಲೇ ಈಡೇರಿಸವ ಪ್ರಯತ್ನ ಮಾಡಲಾಗುವುದು ಎಂದರು.
ಮುಂದುವರೆದು ಮಾತನಾಡಿದ ಜಿಲ್ಲಾಧಿಕಾರಿಗಳು
ಹೆಮ್ಮಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ18 ವರ್ಷ
ಮೇಲ್ಪಟ್ಟ ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿ ಕೊಳ್ಳಬೇಕು ತಮ್ಮ ಕುಟುಂಬದ ಆರೋಗ್ಯದ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಿರಿಯರು ಕಿರಿಯರಿಗಾಗಿ, ಕಿರಿಯರು ಹಿರಿಯರಿಗಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಯಾರು ಸಹ ಕೋವಿಡ್ ಲಸಿಕೆ ಬಗ್ಗೆ ಅನುಮಾನ ಪಡಬಾರದು ನಾನು ಒಬ್ಬ ವೈದ್ಯನಾಗಿ ಹೇಳುತ್ತಿದ್ದೇನೆ ಲಸಿಕೆ ಹಾಕಿಸಿಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಎಂದು ತಿಳಿಸಿದರು ಹಾಗೂ ಲಸಿಕೆ ಬಗ್ಗೆ ಗಾಳಿ ಮಾತಿಗೆ ಕಿವಿ ಕೂಡಬಾರದು ಹಾಗೆ ಯಾರಾದರೂ ಲಸಿಕೆ ಹಾಕುವುದಕ್ಕೆ ಅಡ್ಡಿ ಪಡಿಸಿದರೆ ಅದನ್ನು ಸಹ ಸಹಿಸುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ವೃದ್ದಾಪ್ಯ ವೇತನ,ಸಂದ್ಯಾ ಸುರಕ್ಷ ಯೋಜನೆ ಸೇರಿದಂತೆ ವಿವಿಧ ಮಾಸಾಸನದ ಫಲಾನುಭವಿಗಳಿಗೆ ಆದೇಶ ಪ್ರತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕಧಿಕಾರಿ ಯೋಗೇಶ್ ,ಉಪ ವಿಭಾಗಧಿಕಾರಿ ಬಿ. ಕಮಲಾ ಬಾಯಿ , ತಹಶಿಲ್ದಾರ್ ಬಿ. ಗಿರಿಜಾ ,ತಾಲ್ಲೂಕು ಪಂಚಾಯಿತಿ ಇ ಓ ಕೃಷ್ಣ , ಹೆಮ್ಮಿಗೆ ಗ್ರಾ. ಪಂ. ಅಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಸದಸ್ಯರುಗಳಾದ ಹೆಮ್ಮಿಗೆ ಹೊನ್ನ ನಾಯಕ ,ಸೋಮಣ್ಣ ,ಪದ್ಮವತಿ,ಕೇಶವಮೂರ್ತಿ ,ಕಾವ್ಯ ಬಿ.ಮಹದೇವ್ ದೇವರಾಜು ವಸಂತಮ್ಮ , ಚಿಕ್ಕ ಹೊನ್ನಯ್ಯ ,
ಜಿಲ್ಲಾ ಸರ್ವೆ ಅಧಿಕಾರಿ ಸಿಮಂತ್ತೀನಿ . ಉಪ ತಹಶೀಲ್ದಾರ್ ಜೆ.ಕೆ ಪ್ರಭುರಾಜ್ ,ತಲಕಾಡು ಡಿಟಿ ಕುಮಾರ್,ರಾಜಸ್ವ ನಿರೀಕ್ಷಕ ಸಿದ್ದರಾಜು, ಲೋಕೋಪ ಯೋಗಿ ಇಲಾಖೆ ಎ.ಇ.ಇ ನಂಜುಂಡೇಗೌಡ,ಸಹಾಯಕ ಕೃಷಿ ನಿರ್ದೇಶಕ ಜಯರಾಮಯ್ಯ,ಬಿ.ಇ.ಓ ಮರೀಸ್ವಾಮಿ, ಸಿ.ಡಿ.ಪಿ.ಓ ಬಸವರಾಜು,ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ,ಪಂಚಾಯಿತಿ ರಾಜ್ಯ ಎ ಇ ಇ ನಾಗೇಂದ್ರ , ತಾಲ್ಲೂಕು ಆರೋಗ್ಯಧಿಕಾರಿ ರವಿಕುಮಾರ್ ಮತ್ತಿತರರು ಹಾಜರಿದ್ದರು .



Post Comment