Loading Now

ಶಾಸಕ ಎಂ.ಅಶ್ವಿನ್ ಕುಮಾರವರಿಂದ ಬೋಧನಾ ಕೊಠಡಿಯ ಉದ್ಘಾಟನೆ.

ತಿ.ನರಸೀಪುರ. ಅ.18:-ತಲಕಾಡು ಹೋಬಳಿ ಮಡವಾಡಿ ಗ್ರಾಮದಲ್ಲಿ 20-21 ನೇ  ಸಾಲಿನ ನಬಾರ್ಡ್ ಸಹಯೋಗ ದೊಂದಿಗೆ ಐಡಿಎಫ್ 25 ರ ಯೋಜನೆ ಯಡಿಯಲ್ಲಿ ಸುಮಾರು 11 ಲಕ್ಷ ವೆಚ್ಚ ದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಬೋಧನಾ ಕೊಠಡಿಯ ಉದ್ಘಾಟನೆಯನ್ನು ಶಾಸಕ ಎಂ.ಅಶ್ವಿನ್ ಕುಮಾರ್ ನೆರವೇರಿಸಿದರು.
ತದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಶಾಲೆ,ಕುಡಿಯುವ ನೀರು,ರಸ್ತೆ ಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವುದು ನನ್ನ ಜವಬ್ದಾರಿ ಯಾಗಿದೆ ಅದರಂತೆ ಗ್ರಾಮಗಳ ಅಭಿವೃದ್ಧಿಗೆ ಜನರ ಮಧ್ಯ ಇದ್ದು ಕೆಲಸ ಮಾಡುತ್ತಿದ್ದೇನೆ ಎಂದರಲ್ಲದೆ ಮಡವಾಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಕೋವಿಡ್ ಇದ್ದ ಕಾರಣ ಗ್ರಾಮಗಳಿಗೆ ತೆರಳಿ ಅಲ್ಲಿನ ಕುಂದು ಕೊರತೆಗಳನ್ನು ವಿಚಾರಿಸಲು ಸಾಧ್ಯವಾಗಿರಲಿಲ್ಲ ಸುಮಾರು ಎರಡು ವರ್ಷಗಳ ನಂತರ ಗ್ರಾಮಗಳಿಗೆ ಅಧಿಕಾರಿಗಳ ಸಮೇತ ಬೇಟಿ ನೀಡುವ ಕಾರ್ಯಕ್ರಮ ಹಾಕಿಕೊಂಡು ಮೊದಲಿಗೆ ಮಡವಾಡಿಯಿಂದ ಪ್ರಾರಂಭ ಮಾಡಿದ್ದೇನೆ ಗ್ರಾಮದಲ್ಲಿ ಏನೆ ಸಮಸ್ಯ ಇದ್ದರು ತಾವು ತಿಳಿಸಬಹುದು ಸಾಧ್ಯವಿದ್ದರೆ ಸ್ಥಳದಲ್ಲೇ ಪರಿಹರಿಸುತ್ತೇನೆ ಇಲ್ಲದಿದ್ದರೆ ಒಂದು ಕಾಲಮಿತಿಯೊಳಗೆ ಸಮಸ್ಯ ಬಗೆಹರಿಸುತ್ತೇನೆ ಎಂದು ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಿದರು
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ , ಲೋಕೋಪಯೋಗಿ  ಎ.ಇ.ಇ.  ನಂಜುಂಡೇಗೌಡ, ಎ.ಇ. ಶಿವಸ್ವಾಮಿ, ಪರಿಶಿಷ್ಟ ಪಂಗಡ  ಇಲಾಖೆ  ಕೋಮಲ, ಎ.ಇ.ವಸಂತ್, ಸಿ.ಆರ್ .ಪಿ. ಸಿದ್ದಮಲ್ಲಪ್ಪ,ಪಿ.ಡಿ.ಓ ಶ್ರೀನಿವಾಸ್,ಕೃಷಿ ಸಹಾಯಕ ನಿರ್ದೇಶಕ ಜಯರಾಮಯ್ಯ,ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ,ಭವಾನಿ , ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ,ಪ್ರಧಾನ ಕಾರ್ಯದರ್ಶಿ ಹೆಮ್ಮಿಗೆ ಹೊನ್ನನಾಯಕ,ಹೋಬಳಿ ಅಧ್ಯಕ್ಷ ತಲಕಾಡು ಸುಂದರ ನಾಯಕ,ಗುತ್ತಿಗೆದಾರ ಶರತ್ ,ಕುಮಾರ್ ,ಸುಬ್ರಹ್ಮಣ್ಯ ,ಕೆ.ಪಿ.ಗೋವಿಂದ್ ರಾಜ್, ಗ್ರಾಂ.ಪಂ. ಅಧ್ಯಕ್ಷ ಮಹದೇವಮ್ಮ    ಸದಸ್ಯರುಗಳಾದ ಚಂದ್ರಶೇಖರ್ ,ಸುಮೀತ್ರ ಹಾಗೂ ಜೆಡಿಎಸ್ ಮುಖಂಡರು ಕಾರ್ಯ ಕರ್ತರು  ಹಾಜರಿದ್ದರು .

Previous post

ಶ್ರೀ ಮಲೆ ಮಹದೇಶ್ವರ ಸ್ವಾಮಿಯ ದರ್ಶನಕೆ ಹೋದ ಯುವಕ ಸಾವು.

Next post

ಗ್ರಾಮಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಶಾಸಕ ಎಂ.ಅಶ್ವಿನ್ ಕುಮಾರವರಿಂದ ಕರೆ .

Post Comment

You May Have Missed