ಪುನೀತ್ ಅವರದು ಮೇರು ವ್ಯಕ್ತಿತ್ವ:ಜೀವಧಾರ ಗಿರೀಶ್
ಮೈಸೂರು ನಗರದ ಸಯ್ಯಾಜಿರಾವ್ ರಸ್ತೆಯಲ್ಲಿ
ಮಂಡಿ ಮೊಹಲ್ಲಾ ಯುವಕರ ಬಳಗ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದಿಂದ ಮಂಗಳವಾರ ಏರ್ಪಡಿಸಿದ್ದ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ
ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು
ಜೀವಧಾರ ಗಿರೀಶ್ ಭಾಗವಹಿಸಿದ್ದರು.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಪುನೀತ್ ರಾಜ್‌ಕುಮಾರ್ ಅವರದು ಮೇರು ವ್ಯಕ್ತಿತ್ವ ಎಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಹೇಳಿದರು.
ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿರುವ ಕೆ ಆರ್ ಆಸ್ಪತ್ರೆ ಸಮೀಪ ಮಂಡಿಮೊಹಲ್ಲಾ ಯುವಕರ ಬಳಗ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗ ಮಂಗಳವಾರ ಏರ್ಪಡಿಸಿದ್ದ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ
ಸಾರ್ವಜನಿಕರಿಗೆ 100ಕ್ವಿಂಟಾಲ್ ವೆಜಿಟೆಬಲ್ ಪಲಾವ್ ಹಾಗೂ ವಡೆ ವಿತರಿಸಿ
ಮಾತನಾಡಿದ ಅವರು, ‘ಪುನೀತ್ ನಿಧನರಾದ ದಿನ ಕನ್ನಡಿಗರ ಪಾಲಿಗೆ ನಿಜಕ್ಕೂ ಕರಾಳ ದಿನ’ ಎಂದು ಹೇಳಿದರು.
‘ಪುನೀತ್ ನಮ್ಮನ್ನು ಅಗಲಿದ ದಿನದಿಂದ ಕನ್ನಡ ನಾಡಿನ ಪ್ರತಿ ಕುಟುಂಬದವರೂ ತಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಿರುವಂತೆ ದುಃಖತಪ್ತರಾಗಿದ್ದಾರೆ. ಇದು ಒಬ್ಬ ಕಲಾವಿದನಿಗೆ ಸಿಗಬಹುದಾದ ಅತ್ಯಂತ ದೊಡ್ಡ ಗೌರವ’ ಎಂದು ಹೇಳಿದರು.
‘ಪುನೀತ್ ಅವರನ್ನು ನೆನಪಿಸಿ ಕೊಂಡಾಗಲೆಲ್ಲಾ ನಮ್ಮ ಕಣ್ಣೆದುರು ಅವರ ಮಂದಹಾಸದ ಭಾವಚಿತ್ರ ಮೂಡುತ್ತದೆ. ಮಗುವಿನಂತಹ ನಿಷ್ಕಲ್ಮಶ ಮನಸ್ಸನ್ನು ಹೊಂದಿದ್ದ ಪುನೀತ್ ಅವರು ಹೊಸ ಪ್ರತಿಭೆಗಳನ್ನು ಬೆಳೆಸುವ ಸಲುವಾಗಿಯೇ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದರು. ಈ ಸಂಸ್ಥೆ ಬೆಳವಣಿಗೆಯ ಹಂತದಲ್ಲಿ ಇರುವಾಗಲೇ ಅವರು ನಮ್ಮನ್ನು ಅಗಲಿರುವುದು ದುರದೃಷ್ಟಕರ ಸಂಗತಿ’ ಎಂದರು.
ಇದೇ ಸಂದರ್ಭದಲ್ಲಿ ಜೀವಧಾರ ಗಿರೀಶ್ ,ಮಂಡಿಮೊಹಲ್ಲಾ ಯುವಕರ ಬಳಗ ಸದಸ್ಯರುಗಳಾದ ಸದಾಶಿವ ,ಸೂರಜ್ ,ಚಂದ್ರು ,ವಿಜಯ್ , ಮಧು, ಆಟೋ ಚಾಲಕರಾದ ಸುಬ್ರಹ್ಮಣ್ಯ ,ವಿಜಯ್ ,ಹಾಗೂ ಇನ್ನಿತರರು ಭಾಗವಹಿಸಿದ್ದರು



Post Comment