Loading Now

ನರಸಾಪುರ ಗ್ರಾಮದ ರಸ್ತೆಯ ಪಕ್ಕದಲ್ಲೇ ರಾಶಿ ರಾಶಿ ಕಸ :- ಗಬ್ಬು ನಾರುತ್ತಿರುವ ಕಸದ ರಾಶಿ

ಕೋಲಾರ :- ತಾಲೂಕಿನ ನರಸಾಪುರ ಗ್ರಾಮದಲ್ಲಿ ರಸ್ತೆ ಮತ್ತು ಕಾಲುವೆ ಪಕ್ಕದಲ್ಲಿ ಜನರು ಕಸದ ರಾಶಿ ರಾಶಿ ಸುರಿಯುತ್ತಿದ್ದರು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳು ಗಮನ ಹರಿಸದೆ ಉದಾಸೀನಾ ಹೊಂದುತ್ತಿದ್ದಾರೆ ಎಂದು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಆರೋಪಿಸಿದ್ದಾರೆ.

ನರಸಾಪುರ ಗ್ರಾಮಗಳಲ್ಲಿನ ಗ್ರಾಮ ಪಂಚಾಯ್ತಿಗಳು ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಆದರೆ ಸ್ವಚ್ಛತೆಯ ಬಗ್ಗೆ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳು ತಲೆ ಕೆಡಿಸಿಕೊಳ್ಳದೆ ಉದಾಸೀನಾ ಹೊಂದುತ್ತಿದ್ದಾರೆ

ನರಸಾಪುರದ ಇಡೀ ಗ್ರಾಮದಲ್ಲಿ ಎಲ್ಲಿ ನೋಡಿದರು ಕಸದ ರಾಶಿ ಜೊತೆಗೆ ಗಿಡ ಗಂಟುಗಳು ಯಾಥೆಚವಾಗಿ ಬೆಳೆದಿವೆ. ಚರಂಡಿಗಳಲ್ಲಿ ಮಣ್ಣು ಕಸ ತುಂಬಿಕೊಂಡು ನೀರು ಸರಾಗವಾಗಿ ಹರಿಯದೆ ಗಬ್ಬೆದ್ದು ನಾರುತ್ತಿವೆ.

ಗ್ರಾಮದ ಬಳಿ ರಸ್ತೆ ಬದಿಯಲ್ಲೇ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದು ಇದರಿಂದಾಗಿ ಈ ಭಾಗದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಈ ಬಗ್ಗೆ ನಗರಸಭೆ ಗಮನ ಹರಿಸಬೇಕೆಂದು ಸ್ಥಳೀಯರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯ್ತಿ ಹಾಗೂ ನಗರಸಭೆ ವತಿಯಿಂದ ತ್ಯಾಜ್ಯ ವಿಲೇವಾರಿಗೆಂದು ಹೋಬಳಿಯ ದೊಡ್ಡ ಅಯ್ಯುರು ಗ್ರಾಮದ ರಸ್ತೆಯ ಸಮೀಪದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ನೆಪದಲ್ಲಿ ಸ್ಥಳವನ್ನು ವೀಕ್ಷಿಸಿ ಸುಮ್ಮನಾಗಿದ್ದು ನರಸಾಪುರದ ರಸ್ತೆ ಮತ್ತು ನೀರಿನ ಕಾಲುವೆಯ ಪಕ್ಕದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳು.

ಇದರಿಂದಾಗಿ ಸಾರ್ವಜನಿಕರು ಇನ್ನಿಲ್ಲದ ಸಮಸ್ಯೆ ಎದುರಿಸುವಂತಾಗಿದೆ

ಕಸ ವಿಲೇವಾರಿ ಮಾಡುವ ನಗರಸಭೆ ಸಿಬ್ಬಂದಿ ಈ ಕಸಗಳಿಗೆ ಆಗಾಗ್ಗೆ ಬೆಂಕಿ ಹಚ್ಚುತ್ತಿದ್ದು ಇದರಿಂದಾಗಿ ಈ ಭಾಗದಲ್ಲಿ ಹೊಗೆ ಎದ್ದು ಈ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.

ವರದಿ :- ಅವಿನಾಶ್. ಕೆ ನರಸಾಪುರ

Post Comment

You May Have Missed