Loading Now

75ನೇ ಸ್ವಾತಂತ್ರ್ಯದ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.

ಮೈಸೂರು ಅ 17 – 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಅಗ್ರಹಾರದ ಶಂಕರಮಠದಲ್ಲಿ ವಿಪ್ರ ಮಹಿಳಾ ಸಂಗಮ ವತಿಯಿಂದ ದೇಶಭಕ್ತಿ ಗಾಯನ ಸ್ಪರ್ಧೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.

ದೇಶಭಕ್ತಿ ಗಾಯನ ಸ್ಪರ್ಧೆಯಲ್ಲಿ 40ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧಿಸಿದ್ದು ವಿವಿಧ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

ಸಾಮೂಹಿಕ ವಿಭಾಗ
ಸಾಮೂಹಿಕ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ
ಮೊದಲನೆ ವಿಜೇತರಾದ
ಅರುಂಧತಿ ತಂಡ ,ದ್ವಿತೀಯ ಬಹುಮಾನ ಪದ್ಮಿನಿ ವಲ್ಲಭ ತಂಡ ,ತೃತೀಯ ಬಹುಮಾನ ಅನ್ನಪೂರ್ಣ ತಂಡಕೆ ಬಹುಮಾನ ಪ್ರದಾನ ಮಾಡಲಾಯಿತು.

ಪ್ರತ್ಯೇಕ ವಿಭಾಗ ದೇಶಭಕ್ತಿ ಗೀತೆ ಸ್ಪರ್ಧೆ ಯಲ್ಲಿ ಮೊದಲನೇ ಬಹುಮಾನ ಹೇಮಲತಾ ಕುಮಾರಸ್ವಾಮಿ ,ಎರಡನೇ ಬಹುಮಾನ ಪ್ರಭಾ ಬಿ ಎಸ್ ,ಮೂರನೇ ಬಹುಮಾನ
ಸುಜಾತಾ ಕೆ ,ನಾಲ್ಕನೇ ಬಹುಮಾನ ವನಮಾಲಾ ,ರವರಿಗೆ ಬಹುಮಾನ ನೀಡಲಾಯಿತು

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರಾಜ್ಯ ನಿರ್ದೇಶಕ ಕ್ಯಾಪ್ಟನ್ ಸಿ ವಿ ಗೋಪಿನಾಥ್ ಮಾತನಾಡಿ ನಾವು ದೇಶದ ಬಗ್ಗೆ ಯಾವಾಗಲೂ ನೆನೆಸಿಕೊಳ್ಳಬೇಕು ,ಸುಸಂಸ್ಕೃತ ವ್ಯಕ್ತಿ ಹಾಗಿ ಬದುಕಬೇಕು , ಜನಗಣಮನ ಹೇಳುವಾಗ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸುವ ಮೂಲಕ ಗೌರವಿಸುವುದನ್ನು ಕಲಿತಿದ್ದು ನಮ್ಮ ಪೂರ್ವಿಕರಿಂದ ಅದೇ ನಮ್ಮ ಸಂಸ್ಕಾರ ಮತ್ತು ದೇಶಪ್ರೇಮ ,ನಮ್ಮ ರಾಷ್ಟ್ರವನ್ನು ತಮ್ಮ ಜವಾಬ್ದಾರಿ ಅರಿತು ನಮ್ಮ ಕರ್ತವ್ಯ ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರಪತಿ ವಿಜೇತರು ಹಾಗೂ ಸುಧರ್ಮ ಪತ್ರಿಕೆಯ ಮುಖ್ಯಸ್ಥರಾದ ಜಯಲಕ್ಷ್ಮಿ ಮಾತನಾಡಿ ಹೆಣ್ಣುಮಕ್ಕಳಿಗೆ ಬಿಡುವಿಲ್ಲದ ಸಮಯದಲ್ಲೂ ಉತ್ಸಾಹವಾಗಿ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ,ಸುಧರ್ಮಾ ಪತ್ರಿಕೆ ನಡೆದುಬಂದ ಹಾದಿಯನ್ನು ವಿವರಿಸಿದರು , ನಮಗೆ ಸಂಸ್ಕೃತ ಮುಖ್ಯ ಅದನ್ನು ಉಳಿಸುವುದು
ಬೆಳೆಸುವುದು ನಮ್ಮ ನಿಮ್ಮ ಆದ್ಯ ಕರ್ತವ್ಯ ,ಮನೆ ಮನೆಯಲ್ಲೂ ವಿಶ್ವದ ಏಕೈಕ ಸಂಸ್ಕೃತ ಪತ್ರಿಕೆಯನ್ನು ಓದುವಂಥ ಕೆಲಸವಾಗಲಿ ಎಂದು ಮನವಿ ಮಾಡಿದರು,ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಂಸ್ಕೃತ ಪತ್ರಿಕೆ ನೆನೆದಿರುವುದು ನಮಗೆ ಹೆಮ್ಮೆಯ ವಿಚಾರ ,ಆದರೆ ಮೈಸೂರಿಗರು ಸಂಸ್ಕೃತವನ್ನು ಎಲ್ಲೋ 1ಕಡೆ ನಿರ್ಲಕ್ಷಿಸುತ್ತಿರುವುದು ತುಂಬ ಬೇಸರ ಎಂದು ಹೇಳಿದರು.

ವಿಪ್ರ ಮಹಿಳಾ ಸಂಘದ ಅಧ್ಯಕ್ಷರಾದ ಡಾ॥ಕೆ ವಿ ಲಕ್ಷ್ಮಿದೇವಿ ,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ,ಜಿಎಸ್ ಎಸ್ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವನಜಾ ಪಂಡಿತ್ ,ಪದ್ಮಶ್ರೀ ಪ್ರಶಸ್ತಿ ಪುರಸ್ಕ ತರಾದ ಸುಧರ್ಮ ಪತ್ರಿಕೆಯ ಜಯಲಕ್ಷ್ಮಿ ,ಶಂಕರ್ ಮಠದ ಕಾರ್ಯದರ್ಶಿ ಶೇಷಾದ್ರಿ ,ಪರಮಪೂಜ್ಯ ಇಳೆಯಾಳ್ವಾರ್ ಸ್ವಾಮೀಜಿ , ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ ನಿರ್ದೇಶಕರು ಸಿ ವಿ ಗೋಪಿನಾಥ್ ,ನಂ ಶ್ರೀಕಾಂತ್ ಕುಮಾರ್ ,ನಂ ಶ್ರೀಕಾಂತ್ ಕುಮಾರ್ ,ಮಾಜಿ ನಗರ ಪಾಲಿಕೆ ಸದಸ್ಯರಾದ ಸೌಭಾಗ್ಯ ಮೂರ್ತಿ, ಲತಾ ಮೋಹನ್ ,ಹೇಮಲತಾ ,ವೀಣಾ ಡೋಂಗ್ರೆ, ಸಹನಾ ,ಜಯಶ್ರೀ ,ಹಾಗೂ ಇನ್ನಿತರರು ಹಾಜರಿದ್ದರು.

Previous post

ಧ್ವಜಗಳನ್ನು ವಿಲೇವಾರಿಯನ್ನು ಜಿಲ್ಲಾಡಳಿತ ಗೌರವಗಳೊಂದಿಗೆ ವಿಲೇವಾರಿ ಮಾಡಬೇಕು:ವಿಕ್ರಂ ಅಯ್ಯಂಗಾರ್.

Next post

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನಕ್ಕೆ ಕೊಡಗಿನಲ್ಲಿ ಕಲ್ಲು, ಮೊಟ್ಟೆ, ಕರಪತ್ರಗಳನ್ನು ಎಸೆದಿರುವುದು ಖಂಡನಿಯ ಎಂದು ಶಾಸಕ ಆರ್. ನರೇಂದ್ರ ಕಿಡಿಕಾರಿದ್ದಾರೆ.

Post Comment

You May Have Missed