೨೦೨೧-೨೨ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಬೆಳ್ಳಿ ಹಬ್ಬದ ಕಾರ್ಯಕ್ರಮ.
ಕೋಲಾರ ಅ 06:- ತಾಲೂಕಿನ ನರಸಾಪುರ ಹೋಬಳಿ ಉದ್ದಪ್ಪನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿಯಮಿತ ವತಿಯಿಂದ ೨೦೨೧-೨೨ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಸಂಘದ ಆವರಣದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮ ಉದ್ದಪ್ಪನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗು.ಬೈರಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಎಲ್ಲಾ ಅತಿಥಿಗಳನ್ನು ಸನ್ಮಾನಿಸಲಾಯಿತು, ಹಾಗೂ ಸಂಘಕ್ಕೆ ಹಾಲು ಹಾಕುವಂತಹ ಪ್ರತಿಯೊಬ್ಬ ರೈತರಿಗೂ ಬೆಳ್ಳಿ ದೀಪಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೋಲಾರ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕರು ಡಿ.ವಿ.ಹರೀಶ್, ಸಂಘದ ಅಧ್ಯಕ್ಷ ಗು.ಬೈರಪ್ಪ, ಕೋಲಾರ ಜಿಲ್ಲಾ ಹಾಲು ಒಕ್ಕೂಟ ಶಿಬಿರದ ಉಪ ವ್ಯವಸ್ಥಾಪಕರು ಡಾ||ಆರ್.ಮಹೇಶ್, ಒಕ್ಕೂಟದ ವಿಸ್ತರಣಾಧಿಕಾರಿ ಶ್ರೀನಿವಾಸ್ , ಪಶುವೈದ್ಯಾಧಿಕಾರಿ ಡಾ|| ಮಂಜುನಾಥ್, ಕೋಲಾರ ತಾಲ್ಲೂಕು ಪ್ರಾ.ಹಾ.ಉ.ಸ.ಸಂಘಗಳ ನೌಕರರ ಸಂಘದ ಅಧ್ಯಕ್ಷ ಶಿವರುದ್ರಯ್ಯ, ಬೆಳ್ಳೂರು ಗ್ರಾ.ಪಂ. ಸದಸ್ಯರಾದ ಉದ್ದಪ್ಪನಹಳ್ಳಿ ಮುನಿರಾಜಪ್ಪ, ಮಂಜುಳಮ್ಮ ಲಕ್ಷ್ಮೀ ನಾರಾಯಣಪ್ಪ, ಎಂ.ಪಿ.ಸಿ.ಎಸ್ ಮಾಜಿ ಅಧ್ಯಕ್ಷರುಗಳಾದ ಎಂ.ನಾಗರಾಜ್, ಎಂ.ನಾರಾಯಣಸ್ವಾಮಿ ಮತ್ತು ಮುನಿಶಾಮಪ್ಪ, ಉದ್ದಪ್ಪನಹಳ್ಳಿ ಹಾಲು ಉತ್ಪಾದಕರ ಸಂಘದ ಮುಖ್ಯ ನಿರ್ವಾಹಕರ ಯು,ಎಂ.ರಮೇಶ್‌ಬಾಬು, ಒಕ್ಕೂಟದ ವಿಸ್ತರಣಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು , ಸಿಬ್ಬಂದ್ದಿ ಮತ್ತು ಗ್ರಾಮಸ್ಥರು ಹಾಜರಿದ್ದರು.

Post Comment