ಹುಟ್ಟು ಹಬ್ಬದ ಪ್ರಯುಕ್ತ ಬಡ ವಿದ್ಯಾರ್ಥಿನಿಗೆ ನೋಟ್ ಪುಸ್ತಕ ವಿತರಣೆ
ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನ ಕರಡುಬಂಡೆ ಗ್ರಾಮದ ಹೆಣ್ಣು ಮಗಳಾದ ಸವಿತ ಎಂಬ ಬಡ ವಿದ್ಯಾರ್ಥಿನಿಗೆ ನಮ್ಮ ಭಾರತೀಯ ಸೇವಾಸಮಿತಿಯಿಂದ ಯುವಕರ ಸ್ಫೂರ್ತಿದಾಯಕ, ಬಡವರ ಬಂಧು, ಸದಾ ಬಡವರಿಗಾಗಿ ದುಡಿಯುವ,ದಲಿತರ ಆಶಾಕಿರಣ ಸಮಾಜ ಸೇವಕರಾದ ಚಿಂತಾಮಣಿಯ ಜೆಡಿಎಸ್ ರಾಜ್ಯ ವಕ್ತರು ಆದ ವಿ.ಅಮರ್ ರವರ ಹುಟ್ಟು ಹಬ್ಬದ ಪ್ರಯುಕ್ತ ನೋಟ್ ಪುಸ್ತಕ ವಿತರಣೆ ಮಾಡಲಾಯಿತು.
ಭಾರತೀಯ ಸೇವಾ ಸಮೀತಿಯ ಅಧ್ಯಕ್ಷರಾದ ಹೂಡಿ ಚಿನ್ನಿ ಅಣ್ಣನವರ ಆಶ್ರಯದಲ್ಲಿ ಕರಡುಬಂಡೆ ಗ್ರಾಮದ ಹೆಣ್ಣು ಮಗಳಾದ ಸವಿತ ಎಂಬ ವಿದ್ಯಾರ್ಥಿನಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಈ ಕೊಡುಗೆಯನ್ನು ಭಾರತೀಯ ಸೇವಾ ಸಮಿತಿಯ ಯುವ ಘಟಕದ ಉಪಾಧ್ಯಕ್ಷರಾದ ವರದರಾಜು ಮತ್ತು ಮಾಲೂರು ತಾಲ್ಲೂಕು ಅಧ್ಯಕ್ಷರಾದ ಹರೀಶ್ ರವರು ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಸೇವಾ ಸಮೀತಿಯ ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ವರದರಾಜು,ಮಾಲೂರು ತಾಲೂಕಿನ ಅಧ್ಯಕ್ಷ ಹರೀಶ್, ಮಂಜುನಾಥ್, ನಂಜುಂಡಪ್ಪ ಹಾಗೂ ಇತರರು ಉಪಸ್ಥಿತರಿದ್ದರು.



Post Comment